ದೇಶದ ದೊಡ್ಡ ವಿಮಾ ಸಂಸ್ಥೆಯಾಗಿ ಎಲ್‌ಐಸಿ ಕಾರ್ಯನಿರ್ವಹಣೆ

| Published : Sep 03 2025, 01:00 AM IST

ದೇಶದ ದೊಡ್ಡ ವಿಮಾ ಸಂಸ್ಥೆಯಾಗಿ ಎಲ್‌ಐಸಿ ಕಾರ್ಯನಿರ್ವಹಣೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ನಗರದ ಭಾರತೀಯ ಜೀವ ವಿಮಾ ನಿಗಮ ಶಾಖಾ ವತಿಯಿಂದ ಏರ್ಪಡಿಸಿದ 69ನೇ ವಿಮಾ ಸಪ್ತಾಹ ಆಚರಣೆ ಕಾರ್ಯಕ್ರಮವನ್ನು ಶಾಖಾ ವ್ಯವಸ್ಥಾಪಕ ಹನುಮಂತ ನಾಯಕ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭಾರತೀಯ ಜೀವಾ ವಿಮಾ ಸಂಸ್ಥೆ ದೇಶದ ಆರ್ಥಿಕ ಅಭಿವೃದ್ಧಿಗೆ ಹಾಗೂ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಎಂದು ಶಾಖಾ ವ್ಯವಸ್ಥಾಪಕ ಹನುಮಂತ ನಾಯಕ ಹೇಳಿದರು.

ನಗರದ ಭಾರತೀಯ ಜೀವ ವಿಮಾ ನಿಗಮ ಶಾಖಾ ವತಿಯಿಂದ ಏರ್ಪಡಿಸಿದ 69ನೇ ವಿಮಾ ಸಪ್ತಾಹ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನವಂಬರ್‌ 1-1956 ರಲ್ಲಿ ಖಾಸಗಿ ಕಂಪನಿಯಾಗಿ ಸ್ಥಾಪನೆಗೊಂಡ ಭಾರತೀಯ ಜೀವ ವಿಮಾ ಸಂಸ್ಥೆ ನಂತರ ಕೇಂದ್ರ ಹಣಕಾಸು

ಸಚಿವ ದೇಶಮುಖ್ ನೇತೃತ್ವದಲ್ಲಿ ರಾಷ್ಟ್ರೀಕರಣಗೊಂಡು ಇಂದಿಗೆ 69 ವರ್ಷಗಳನ್ನು ಪೂರೈಸಿದೆ. ಎಲ್‌ಐಸಿ ಭಾರತದ ಅತ್ಯಂತ ದೊಡ್ಡ ವಿಮಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಈ ವರ್ಷ ಎಲ್‌ಐಸಿ ಯಿಂದ ಸುಮಾರು 7,324 ಕೋಟಿ ರು.ಗಳಿಗಿಂತ ಹೆಚ್ಚು ಲಾಭಾಂಶವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ನೀಡಿ ದೇಶದ ಹಣಕಾಸು ವ್ಯವಸ್ಥೆಗೆ ಶಕ್ತಿ ತುಂಬುವದರ ಜತೆಗೆ ಬಲವಾದ ಕಾರ್ಯಕ್ಷಮತೆ ಮತ್ತು ದೇಶದ ಮೇಲಿನ ಭದ್ಧತೆಯನ್ನು ಮಾತ್ತೋಮ್ಮೆ ಸಾಭಿತು ಪಡಿಸಿದೆ ಹಾಗಾಗಿ ನಾವೆಲ್ಲರೂ ಎಲ್‌ಐಸಿ ವಿಮಾ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಈ ವೇಳೆ ಸಹಾಯಕ ಶಾಖಾ ವ್ಯವಸ್ಥಾಪಕ ಲಕ್ಷ್ಮಿಕಾಂತ್, ಅಭಿವೃದ್ಧಿ ಅಧಿಕಾರಿಗಳಾದ ಮಹೇಶ್, ರಾಮ್ ಕಿರಣ್,

ಶ್ರೀನಿವಾಸ್ ಚಿನಿವಾರ, ರಾಘವೇಂದ್ರ, ಕುಳ್ಳಯಪ್ಪ ಸಂಘದ ಅಧ್ಯಕ್ಷೆ ರೇಖಾ, ಕಾರ್ಯದರ್ಶಿ ವೀಣಾ, ಜಂಟಿ ಕಾರ್ಯದರ್ಶಿ

ಕೆ.ಸುಜಾತ ಆಡಳಿತ ಅಧಿಕಾರಿ ರೇಣುಕಾಂಬಾ, ಸಹಾಯಕ ಆಡಳಿತ ಅಧಿಕಾರಿಗಳಾದ ಭಾಗ್ಯವತಿ, ಪ್ರವೀಣ್ ಹಿರಿಯ ಶ್ರೇಣಿ

ಸಹಾಯಕರಾದ ಗೀರುವಾಣಿ, ಮಮತಾ, ಇಂದಿರಾ, ಸುಮಾ, ನಿರ್ಮಲಾ, ಗೀತಾ, ಶ್ರೀನಿವಾಸ್, ಚಂದ್ರಶೇಖರ್, ಸವಿತಾ, ಪದ್ಮನಾಭ, ಕ್ಯಾಷಿಯರ್ ಶ್ರೀನಿವಾಸ್ ಪ್ರಸಾದ್ ಹಾಗೂ ವಿಮಾ ಪ್ರತಿನಿಧಿಗಳು ಉಪಸ್ಥಿತರಿದ್ದರು.