ನಿತ್ಯ ಯೋಗದಿಂದ ಆಯುಷ್ಯ ವೃದ್ಧಿ: ನಿರಂಜನ ಶ್ರೀ

| Published : Jun 25 2024, 12:46 AM IST

ನಿತ್ಯ ಯೋಗದಿಂದ ಆಯುಷ್ಯ ವೃದ್ಧಿ: ನಿರಂಜನ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮೇಲ: ನಿತ್ಯ ಯೋಗ ಹಾಗೂ ಪ್ರಾಣಾಯಾಮ ಮಾಡುವುದರಿಂದ ಮನುಷ್ಯನ ಆಯುಷ್ಯ ವೃದ್ಧಿಯಾಗಲಿದೆ ಎಂದು ನಿರಂಜನ ಶ್ರೀಗಳು ಹೇಳಿದರು. ಪಟ್ಟಣದ ಶ್ರೀವಿಶ್ವೇಶ್ವರ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಯೋಗ ದಿನೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಶಾಲೆಯ ಯೋಗ ದಿನೋತ್ಸವದಲ್ಲಿ ಮಾತನಾಡಿದ ಅವರು, ಮಕ್ಕಳು ಪ್ರತಿನಿತ್ಯ ಬೆಳಿಗ್ಗೆ 5 ಗಂಟೆಗೆ ಎದ್ದು ನಿತ್ಯ ಕ್ರಮಗಳನ್ನು ಮುಗಿಸಿ 1ಕಿ.ಮೀ ಕ್ಕಿಂತ ಹೆಚ್ಚು ದೂರ ಓಡುವುದು ಜೊತೆಗೆ ದೈಹಿಕ ಕಸರತ್ತುಗಳು, ಪ್ರಾಣಾಯಾಮ, ಸೂರ್ಯ ನಮಸ್ಕಾರ ಮಾಡಬೇಕು.

ಕನ್ನಡಪ್ರಭ ವಾರ್ತೆ ಆಲಮೇಲ:

ನಿತ್ಯ ಯೋಗ ಹಾಗೂ ಪ್ರಾಣಾಯಾಮ ಮಾಡುವುದರಿಂದ ಮನುಷ್ಯನ ಆಯುಷ್ಯ ವೃದ್ಧಿಯಾಗಲಿದೆ ಎಂದು ನಿರಂಜನ ಶ್ರೀಗಳು ಹೇಳಿದರು. ಪಟ್ಟಣದ ಶ್ರೀವಿಶ್ವೇಶ್ವರ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಯೋಗ ದಿನೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಶಾಲೆಯ ಯೋಗ ದಿನೋತ್ಸವದಲ್ಲಿ ಮಾತನಾಡಿದ ಅವರು, ಮಕ್ಕಳು ಪ್ರತಿನಿತ್ಯ ಬೆಳಿಗ್ಗೆ 5 ಗಂಟೆಗೆ ಎದ್ದು ನಿತ್ಯ ಕ್ರಮಗಳನ್ನು ಮುಗಿಸಿ 1ಕಿ.ಮೀ ಕ್ಕಿಂತ ಹೆಚ್ಚು ದೂರ ಓಡುವುದು ಜೊತೆಗೆ ದೈಹಿಕ ಕಸರತ್ತುಗಳು, ಪ್ರಾಣಾಯಾಮ, ಸೂರ್ಯ ನಮಸ್ಕಾರ ಮಾಡಬೇಕು. ದಿನನಿತ್ಯ ಆಹಾರದಲ್ಲಿ ಮೊಳಕೆ ಕಾಳುಗಳು, ಮೊಟ್ಟೆ, ಹಾಲು, ಜೋಳದ ರೊಟ್ಟಿ, ಪೌಷ್ಟಿಕ ಆಹಾರವನ್ನು ಬಳಸುವುದರಿಂದ ದೀರ್ಘಾಯುಷಿಗಳಾಗಬಹುದು ಎಂದು ಹೇಳಿದರು. ವೈದ್ಯ, ಯೋಗಪಟು ಡಾ.ಸಿ.ಎಸ್.ನಿಂಬಾಳ, ಮಕ್ಕಳಿಗೂ ಹಾಗೂ ಶಿಕ್ಷಕರಿಗೂ ವಿವಿಧ ಆಸನಗಳನ್ನು ಪ್ರಾತ್ಯಕ್ಷಿಕವಾಗಿ ಮಾಡಿಸಿ ಆಗುವ ಲಾಭಗಳ ಬಗ್ಗೆ ಮಕ್ಕಳಿಗೆ ವಿವರಿಸಿದರು.ಹತ್ತು ವರ್ಷಗಳಿಂದ ಯೋಗೋತ್ಸವ ಆಚರಣೆ ಮಾಡುತ್ತಿರುವ ಡಾ.ಚನಬಸಪ್ಪ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಬಸವಲಿಂಗ ಶರಣರು, ಶಾಲೆಯ ಆಡಳಿತ ಮಂಡಳಿಯ ಅರವಿಂದ ಕುಲಕರ್ಣಿ, ಅಲೋಕ ಬಡದಾಳ ,ಮುಖ್ಯ ಗುರುಗಳು ಲಕ್ಷ್ಮೀಪುತ್ರ ಕಿರನಳ್ಳಿ, ಈರಣ್ಣ ಕಲಶೆಟ್ಟಿ, ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಸುವರ್ಣ ಸಾರಂಗಮಠ, ಸೀತಾ ಆರೇಶಂಕರ, ಲಕ್ಷ್ಮೀ ಹಳೇಮನಿ, ಸರುಬಾಯಿ ಬಂಡಗರ, ಸುನಿತಾ ಗುಂಡದ, ವೀಣಾ ಗುಡಿಮಠ, ಜಗದೇವಿ ಇಟಗಿ ಹಲವರು ಇದ್ದರು