ಮೂವರು ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

| Published : Nov 21 2023, 12:45 AM IST

ಸಾರಾಂಶ

ತಿಕೋಟಾ ತಾಲೂಕಿನ ರತ್ನಾಪುರದ ಸಂತೊಷ ಪಾಂಡುರಂಗ ಬಜಬಳೆ, ಸಂದೀಪ ಭೀಮಸೇನ್ @ಭೀಮಣ್ಣ ಯಡವೆ, ದಶರಥ ಜಟ್ಟೆಪ್ಪ @ಬಪ್ಪು ಯಡವೆ ಶಿಕ್ಷೆಗೊಳಗಾದ ಅಪರಾಧಿಗಳು.

ಕನ್ನಡಪ್ರಭ ವಾರ್ತೆ ವಿಜಯಪುರ

2020ರಲ್ಲಿ ತಿಕೋಟಾ-ರತ್ನಾಪುರ ಕ್ರಾಸ್ ಬಳಿಯ ಧಾಬಾವೊಂದರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಅಪರಾಧಿಗಳಿಗೆ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

ತಿಕೋಟಾ ತಾಲೂಕಿನ ರತ್ನಾಪುರದ ಸಂತೊಷ ಪಾಂಡುರಂಗ ಬಜಬಳೆ, ಸಂದೀಪ ಭೀಮಸೇನ್ @ಭೀಮಣ್ಣ ಯಡವೆ, ದಶರಥ ಜಟ್ಟೆಪ್ಪ @ಬಪ್ಪು ಯಡವೆ ಶಿಕ್ಷೆಗೊಳಗಾದ ಅಪರಾಧಿಗಳು.

ವಿಚಾರಣೆ ವೇಳೆ 22 ಜನ ಸಾಕ್ಷಿದಾರರ ಸಾಕ್ಷ್ಯ ಮತ್ತು 58 ದಾಖಲಾತಿಗಳ ಪರಿಶೀಲನೆ ನಡೆಸಿ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಕೊಲೆ ಮಾಡಿದ ಮೂರು ಜನ ಆರೋಪಿಗಳಿಗೆ ಕಲಂ 302 ಐಪಿಸಿ ಅಡಿಯಲ್ಲಿ ಕಠಿಣ ಜೀವಾವಧಿ ಕಾರಾಗೃಹ ಶಿಕ್ಷೆ ಮತ್ತು ₹ 25 ಸಾವಿರ ದಂಡ ಹಾಗೂ ಕಲಂ 3(2) (ವಿ) ಎಸ್ .ಸಿ./ಎಸ್ಟಿ (ಪಿ.ಎ.) ಆಕ್ಟ್ ಅಪರಾಧಕ್ಕೆ ಒಂದು ವರ್ಷ ಸಾದಾ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸತೀಶ ಎಲ್.ಪಿ. ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ಎಸ್.ಲೋಕೂರ ವಾದ ಮಂಡಿಸಿದ್ದರು. ತಿಕೋಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಈ ಹಿಂದಿನ ತನಿಖಾಧಿಕಾರಿಗಳಾಗಿದ್ದ ಡಿವೈಎಸ್‌ಪಿ ಕೆ.ಸಿ.ಲಕ್ಷ್ಮೀನಾರಾಯಣ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು ಎಂದು ಸರ್ಕಾರಿ ಅಭಿಯೋಜಕರಾದ ಎಸ್.ಎಸ್.ಲೋಕೂರ ತಿಳಿಸಿದ್ದಾರೆ