ಸಾಧಿಸುವ ಗುರಿಯಿದ್ದರೆ ಬದುಕು ಸುಂದರ: ಎಸ್.‌ನಾಗಭೂಷಣ್‌

| Published : Feb 04 2024, 01:30 AM IST

ಸಾಧಿಸುವ ಗುರಿಯಿದ್ದರೆ ಬದುಕು ಸುಂದರ: ಎಸ್.‌ನಾಗಭೂಷಣ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಹದ್ದೂರ್‌ಘಟ್ಟ ಗ್ರಾಮದ ಶ್ರೀ ತರಳಬಾಳು ನರ್ಸರಿ ಮತ್ತು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಕ್ಕೆ ಪ್ರಾದೇಶಿಕ ಅಧಿಕಾರಿ ಬಸವರಾಜಪ್ಪ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಮಕ್ಕಳು ಬದುಕಿನಲ್ಲಿ ಏನನ್ನಾದರು ಸಾಧಿಸುವ ಗುರಿಯನ್ನು ವಿದ್ಯಾರ್ಥಿ ದೆಸೆಯಿಂದಲೇ ಹೊಂದಿರಬೇಕು. ಇದರಿಂದ ಬದುಕು ಉತ್ತಮ ಹಾಗೂ ಸರಳ-ಸುಂದರ ವಾಗುತ್ತದೆ ಎಂದು ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಹೇಳಿದರು.ಭರಮಸಾಗರ ಸಮೀಪದ ಬಹದ್ದೂರ್‌ಘಟ್ಟ ಗ್ರಾಮದ ತರಳಬಾಳು ನರ್ಸರಿ ಮತ್ತು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕಲ್ಲಮ್ಮ ಪ್ರೌಢಶಾಲೆಯಲ್ಲಿ ಶುಕ್ರವಾರ ಸಂಜೆ ಜರುಗಿದ ವಾರ್ಷಿಕೋತ್ಸವದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ತರಳಬಾಳು ವಿದ್ಯಾಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ತೆರೆದು ಗ್ರಾಮೀಣ ಭಾಗದ ಮಕ್ಕಳು ಸಹ ಆಂಗ್ಲ ಮಾಧ್ಯಮಗಳಲ್ಲಿ ಶಿಕ್ಷಣ ಪಡೆಯಲು ಸಹಕಾರಿಯಾಗಿದೆ. ಮಕ್ಕಳು ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ ಎಂದರು.

ಪ್ರಾದೇಶಿಕ ಅಧಿಕಾರಿ ಕೆ.ಈ.ಬಸವರಾಜಪ್ಪ ಮಾತನಾಡಿ, ಮಕ್ಕಳು ಜೀವನ ಮೌಲ್ಯ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಜೀವನದಲ್ಲಿ ಬೆಳಸಿಕೊಳ್ಳಬೇಕು ಎಂದರು

ಕಾರ್ಯಕ್ರಮದಲ್ಲಿ ಎಂ.ರಂಗಣ್ಣ, ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಕೆ.ಬಸವರಾಜಪ್ಪ, ಭರಮಸಾಗರ ಪೊಲೀಸ್ ಠಾಣೆಯ ಉಪಪೊಲೀಸ್ ನಿರೀಕ್ಷಕರಾದ ಎಲ್.ರವಿನಾಯ್ಕ್, ಬಿ.ಆರ್.ಸಿ ಈ.ಸಂಪತ್‌ಕುಮಾರ್, ಇ.ಸಿ.ಓ. ಜಿ.ಬಿ.ರವೀಂದ್ರನಾಥ್, ಸಿ.ಆರ್.ಪಿ ವರಲಕ್ಷ್ಮಿ, ಗ್ರಾ.ಪಂ. ಅಧ್ಯಕ್ಷರಾದ ರತ್ನಮ್ಮ ಬಸವರಾಜಪ್ಪ, ಸಲಹಾ ಸಮಿತಿಯ ಉಪಾಧ್ಯಕ್ಷರಾದ ಹೆಚ್.ಎಸ್.ನಾಗರಾಜಪ್ಪ, ಕೆ.ಜಿ.ವಿರುಪಾಕ್ಷಪ್ಪ, ಕಾರ್ಯದರ್ಶಿ ಈ.ತಿಪ್ಪಣ್ಣ, ಅಣ್ಣನ ಬಳಗದ ಅಧ್ಯಕ್ಷರಾದ ಬಿ.ಎಸ್. ಮರುಳಸಿದ್ದಯ್ಯ, ಮುಖ್ಯಶಿಕ್ಷಕರಾದ ಎಸ್.ಎಂ. ಸುನೀಲ್ ಕುಮಾರ್ ಹಾಗೂ ಸಲಹಾ ಸಮಿತಿಯ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಇದ್ದರು.