ಸಾರಾಂಶ
ಮಠದಿಂದ ಘಟವಾಗಬಾರದು. ಘಟದಿಂದ ಮಠವಾಗಬೇಕು ಎನ್ನುವ ಹಾನಗಲ್ ಕುಮಾರೇಶ್ವರರ ತತ್ವವನ್ನು ಲಿಂ. ಶಿವಲಿಂಗೇಶ್ವರ ಶ್ರೀಗಳು ಪಾಲಿಸಿದ್ದರು.
ಹುಬ್ಬಳ್ಳಿ:
ಗುರು ತೋರಿದ ದಾರಿಯಲ್ಲಿ ನಡೆದರೆ ಬದುಕು ಸುಂದರವಾಗಲಿದೆ ಎಂದು ಮುಳ್ಳಳ್ಳಿ-ಬೊಮ್ಮನಹಳ್ಳಿ ಚನ್ನವೀರೇಶ್ವರ ವಿರಕ್ತಮಠದ ಶಿವಯೋಗೀಶ್ವರ ಶ್ರೀ ಹೇಳಿದರು.ತಾಲೂಕಿನ ಮಂಟೂರು ಗ್ರಾಮದ ಶ್ರೀಅಡವಿ ಸಿದ್ಧೇಶ್ವರ ಮಠದ ಆವರಣದಲ್ಲಿ ಸೋಮವಾರ ನಡೆದ ಲಿಂ. ಶಿವಲಿಂಗೇಶ್ವರ ಶ್ರೀಗಳ ಪ್ರಥಮ ಪುಣ್ಯಸ್ಮರಣೋತ್ಸವದಲ್ಲಿ ಮಾತನಾಡಿದ ಅವರು, ಮೃಧು ಸ್ವಭಾವದ ಸಂಸ್ಕಾರ ಭರಿತ ಶಿವಲಿಂಗೇಶ್ವರ ಶ್ರೀಗಳು ತೋರಿದ ದಾರಿಯಲ್ಲಿ ನಾವೆಲ್ಲ ನಡಬೇಕು ಎಂದರು.
ಶ್ರೀಗಳು ನೇಮಿಸಿದ ಉತ್ತರಾಧಿಕಾರಿ ಇಂದುಧರ ದೇವರ ಪಟ್ಟಾಧಿಕಾರ ಮಹೋತ್ಸವವನ್ನು ಶೀಘ್ರದಲೇ ವಿಜೃಂಭಣೆಯಿಂದ ನೆರವೇರಿಸೋಣ ಎಂದು ಹೇಳಿದರು.ಆಶೀರ್ವಚನ ನೀಡಿದ ಹುಬ್ಬಳ್ಳಿ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ, ಮಠದಿಂದ ಘಟವಾಗಬಾರದು. ಘಟದಿಂದ ಮಠವಾಗಬೇಕು ಎನ್ನುವ ಹಾನಗಲ್ ಕುಮಾರೇಶ್ವರರ ತತ್ವವನ್ನು ಲಿಂ. ಶಿವಲಿಂಗೇಶ್ವರ ಶ್ರೀಗಳು ಪಾಲಿಸಿದ್ದರು. ಆಧ್ಯಾತ್ಮಿಕ ಕ್ಷೇತ್ರಕ್ಕೆ ಮಾತೃ ಹೃದಯದ ಶ್ರೀಗಳ ಕೊಡುಗೆ ಅಪಾರ ಎಂದರು.
ಕುಂದಗೋಳ ಕಲ್ಯಾಣಪುರ ಮಠದ ಬಸವಣ್ಣಜ್ಜನರು, ಶ್ರೀಮಠದ ಪೀಠಾಧಿಪತಿ ಇಂದುಧರ ದೇವರು, ಮಂಟೂರು ಗ್ರಾಮದ ಆನಂದಶ್ರಮದ ಮಹಾಂತ ಶ್ರೀಗಳು, ಕಮಡೊಳ್ಳಿ ಲೋಚನೇಶ್ವರ ವಿರಕ್ತಮಠದ ರಾಚೋಟೇಶ್ವರ ದೇವರು, ಗವಿಸಿದ್ದೇಶ್ವರ ಶಾಸ್ತ್ರೀಜಿ, ಜಮಖಂಡಿ ಮಹಾಂತ ದೇವರು, ಗವಾಯಿ ಅಂದಾನಯ್ಯ ಮಠದ ಆಶೀರ್ವಚನ ನೀಡಿದರು.ಇದೇ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು. ಮಂಟೂರು, ಬಂಡಿವಾಡ, ಶಿರಗುಪ್ಪಿ, ನಾಗರಹಳ್ಳಿ, ಬಮ್ಮಿಗಟ್ಟಿ, ಗೇರಕೊಪ್ಪ, ಬಳ್ಳಿಗಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))