ನೆಮ್ಮದಿಯಿಂದ ಜೀವನ ಸುಂದರ: ಚನ್ನವೀರ ಸ್ವಾಮೀಜಿ

| Published : May 10 2025, 01:09 AM IST

ನೆಮ್ಮದಿಯಿಂದ ಜೀವನ ಸುಂದರ: ಚನ್ನವೀರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಕೃತಿ ಮತ್ತು ಸಂಸ್ಕಾರ ಭಾರತೀಯ ಮಹಿಳೆಯ ಪರಂಪರೆ, ಮಹಿಳೆ ದೇಶವನ್ನು ಆಳಬಲ್ಲಳು. ಇಂದು ಕೇವಲ ನಾಲ್ಕು ಗೋಡೆಗೆ ಸೀಮಿತವಾಗದೆ ಎಲ್ಲ ರಂಗಗಳಲ್ಲಿ ತನ್ನನ್ನೇ ತಾನು ತೊಡಗಿಸಿಕೊಂಡು ಶ್ರಮಿಸುತ್ತಿದ್ದಾಳೆ ಎಂದು ಚನ್ನವೀರ ಸ್ವಾಮೀಜಿ ತಿಳಿಸಿದರು.

ರಾಣಿಬೆನ್ನೂರು: ಮನುಷ್ಯ ಜೀವನ ಸುಂದರವಾಗಿ ಇರಬೇಕೆಂದರೆ, ಮಾನಸಿಕ ಶಾಂತಿ ಮತ್ತು ನೆಮ್ಮದಿ ಅಗತ್ಯವಾಗಿದೆ ಎಂದು ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಚನ್ನವೀರ ಸ್ವಾಮೀಜಿ ನುಡಿದರು.ತಾಲೂಕಿನ ಕೂನಬೇವು ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ನೂತನ ಗೋಪುರ, ಭರಮದೇವರ ಕಳಸಾರೋಹಣ ಬಸವ ದರ್ಶನ ಪ್ರವಚನ ಮತ್ತು ಕುಂಭೋತ್ಸವ ಧರ್ಮಸಭೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಂಸ್ಕೃತಿ ಮತ್ತು ಸಂಸ್ಕಾರ ಭಾರತೀಯ ಮಹಿಳೆಯ ಪರಂಪರೆ, ಮಹಿಳೆ ದೇಶವನ್ನು ಆಳಬಲ್ಲಳು. ಇಂದು ಕೇವಲ ನಾಲ್ಕು ಗೋಡೆಗೆ ಸೀಮಿತವಾಗದೆ ಎಲ್ಲ ರಂಗಗಳಲ್ಲಿ ತನ್ನನ್ನೇ ತಾನು ತೊಡಗಿಸಿಕೊಂಡು ಶ್ರಮಿಸುತ್ತಿದ್ದಾಳೆ ಎಂದರು. ಆಧುನಿಕ ಬದುಕಿನಲ್ಲಿ ಧರ್ಮದರ್ಶನ ದೂರವಾಗಿ, ದೂರದರ್ಶನ ಹತ್ತಿರವಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು, ಧರ್ಮ ಮತ್ತು ಸಂಸ್ಕಾರ ಅಳವಡಿಸಿಕೊಂಡು ಧರ್ಮದ ಕಾರ್ಯದಲ್ಲಿ ಮುಂದಾಗಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಸ್ವಾಮಿಗಳಾದವರಿಗೆ ಯಾವುದೇ ಜಾತಿ, ಮತ, ಪಂಥ, ಪಕ್ಷ, ಪಂಗಡ ಭೇದಭಾವ ಇಲ್ಲ. ಅವರು ಅದನ್ನು ಅಳವಡಿಸಿಕೊಳ್ಳುವುದಿಲ್ಲ. ಎತ್ತಿಕೊಂಡವರ ಕೂಸು. ಸರ್ವಜನಾಂಗದ ಮತ್ತು ಭಕ್ತರ ಉದ್ಧಾರವನ್ನು ಬಯಸುತ್ತಾರೆ ಎಂದರು.ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಶಾಂತಿ ನೆಮ್ಮದಿಗಾಗಿ, ಧರ್ಮ ದೇಗುಲಗಳ ಮೂಲಕ ಪೂಜೆ ಪುನಸ್ಕಾರಗಳು ನಿತ್ಯ ನಿರಂತರವಾಗಿ ನಡೆಯಬೇಕು. ಅಂತಹ ಧರ್ಮ ಪರಂಪರೆಯ ಗ್ರಾಮ ಇದಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ತತ್ವ ಇಲ್ಲಿನ ನಾಗರಿಕರು ಅಳವಡಿಸಿಕೊಂಡಿದ್ದಾರೆ ಎಂದರು.ಗುಡ್ಡದ ಆನ್ವೇರಿ ಶಿವಯೋಗಿಶ್ವರ ಸ್ವಾಮೀಜಿ, ವಿಜಯಪುರ ಪತ್ರಿಮಠದ ಬಸವಕುಮಾರ ಸ್ವಾಮೀಜಿ, ಬಸಯ್ಯ ಹಿರೇಮಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ರಾಜ್ಯ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್. ಪಾಟೀಲ್, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ್ ಸಜ್ಜನರ, ಬಿಜೆಪಿ ಮುಖಂಡ ಎಂ.ಎಸ್. ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಸವಣೂರ, ಗ್ರಾಪಂ ಮಾಜಿ ಅಧ್ಯಕ್ಷ ಮಾಲತೇಶ್ ಮಾಸಣಗಿ, ಮಾಳಪ್ಪ ಪೂಜಾರ, ರಾಜಶೇಖರ ಬಣಕಾರ್, ಷಣ್ಮುಖಪ್ಪ ಬಳ್ಳಾರಿ, ರಮೇಶ್ ಮಾಡಳ್ಳಿ, ಮಾಜಿ ಸೈನಿಕರಾದ ಗುಡ್ಡಣ್ಣ ನೆಗಳೂರ, ಶಂಕರ್ ಅಣಜಿ, ಗ್ರಾಪಂ ಅಧ್ಯಕ್ಷೆ ಬಸವ್ವ ತಳವಾರ, ಉಪಾಧ್ಯಕ್ಷೆ ಲಕ್ಷ್ಮವ್ವ ರಮೇಶ್ ಚಟ್ನಿ, ಶೇಖಪ್ಪ ಮಾಸಣಗಿ, ಶಿಕ್ಷಕರಾದ ಶಿವರಾಜ ಜ್ಯೋತಿ, ಪ್ರೊ. ಗುಡ್ಡಪ್ಪ ಮಾಳಗುಡ್ಡಪ್ಪನವರ, ಎಂ.ಎಸ್. ಗಾಣಿಗೇರ ಮತ್ತಿತರರು ಇದ್ದರು. ಅಂಗವಿಕಲರಿಗೆ ವಿಶೇಷ ಜಾಬ್‌ ಕಾರ್ಡ್‌ ವಿತರಣೆ

ರಾಣಿಬೆನ್ನೂರು: ಮಹಿಳೆಯರು ನರೇಗಾ ಯೋಜನೆಯಡಿ ಕೂಲಿ ಕೆಲಸವನ್ನು ಪಡೆದುಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷೆ ಬಸವ್ವ ತಳವಾರ ತಿಳಿಸಿದರು.

ತಾಲೂಕು ಗುಡ್ಡದಆನ್ವೆರಿ ಗ್ರಾಪಂನ ಆವರಣದಲ್ಲಿ ದುಡಿಯೋಣ ಬಾ ಅಭಿಯಾನದಲ್ಲಿ ಅಂಗವಿಕಲರಿಗೆ ನರೇಗಾ ಯೋಜನೆಯಡಿ ವಿಶೇಷ ಜಾಬ್ ಕಾರ್ಡ್ ವಿತರಿಸಿ ಮಾತನಾಡಿದರು.ಪಿಡಿಒ ರಾಜೀವ ಪಾಟೀಲ್ ಮಾತನಾಡಿ, ನರೇಗಾ ಯೋಜನೆಯಡಿ ಕೂಸಿನ ಮನೆ ಪ್ರಾರಂಭಿಸಲಾಗಿದ್ದು, ಮೂರು ವರ್ಷದೊಳಗಿನ ಮಕ್ಕಳನ್ನು ಕೂಸಿನ ಮನೆಗೆ ಕಳಿಸಬೇಕು ಎಂದರು.ಉಪಾಧ್ಯಕ್ಷೆ ಲಕ್ಷ್ಮಿ ಚಟ್ನಿ, ಸದಸ್ಯೆ ರತ್ನವ್ವ ಬಾದಿ, ಕಾರ್ಯದರ್ಶಿ ನಾಗಪ್ಪ ಪೂಜಾರ, ಮಾಲತೇಶ ಅಂಗೂರ, ಬಿಲ್ ಕಲೆಕ್ಟರ್ ಫಕ್ಕೀರೇಶ್ ಹನುಮಂತ ಬಿ.ಎಂ., ಕಂಪ್ಯೂಟರ್ ಆಪರೇಟರ್ ರಾಧಾ ಛಲವಾದಿ, ಮಾಲತೇಶ್, ಮಂಗಳಾ ವಡ್ಡರ, ಕೂಸಿನ ಮನೆ ಆರೈಕೆದಾರ ಶೃತಿ ಚೌಡಕ್ಕನವರ, ರೇಖಾ ಹೊನ್ನನಗೌಡ್ರ, ಪಶುಸಖಿ ರೂಪಾ ಹಿರೇಮಠ ಸೇರಿದಂತೆ ಸುಮಾರು 86 ಜನ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.