ಸತ್ಸಂಗದಿಂದ ಬದುಕು ಪಾವನ

| Published : Dec 15 2023, 01:31 AM IST

ಸಾರಾಂಶ

ಸತ್ಸಂಗದಿಂದ ಬದುಕು ಪಾವನ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನಮ್ಮ ಬದುಕಿನ ಪ್ರತಿಕ್ಷಣಗಳು ಅತ್ಯಂತ ಬೆಲೆಯುಳ್ಳದಾಗಿದೆ. ಆದ್ದರಿಂದ ಆ ಕ್ಷಣಗಳು ನಾವು ಸತ್ಸಂಗಗಳಲ್ಲಿ ಕಳೆಯಬೇಕು ಎಂದುದು ಮಹಾಲಿಂಗಪುರದ ಶ್ರೀ ಸಿದ್ಧಾರೂಢ ಮಠದ ಶ್ರೀ ಸಹಜಾನಂದ ಸ್ವಾಮೀಜಿಗಳು ಹೇಳಿದರು.

ಅವರು ಬನಹಟ್ಟಿಯ ಶ್ರೀ ಸಿದ್ಧಾರೂಢ ಮಠದಲ್ಲಿ ಹಮ್ಮಿಕೊಂಡ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಮ್ಮ ಆಯುಷ್ಯವನ್ನು ವ್ಯರ್ಥ ಮಾಡದೇ ಅದನ್ನು ಸ್ವಾರ್ಥಕಗೊಳಿಸಬೇಕು. ಸತ್ಸಂಗದಿಂದ ಮನಸ್ಸು ನಿರ್ಮಲವಾಗುತ್ತದೆ ಎಂದರು.

ಕಂಕನವಾಡಿಯ ಶ್ರೀ ಶಿವಾನಂದ ಶರಣರು ಮಾತನಾಡಿ, ಮಹಾತ್ಮರ ಪ್ರವಚನ ಕೇಳುವುದರಿಂದ ಮಾನವ ಜನ್ಮ ಮೋಕ್ಷವಾಗುವುದು, ಹಾಗೂ ಶ್ರೀ ಸಿದ್ದರಾಮೇಶ್ವರ ಶರಣರು, ದಾನ ಧರ್ಮ ಪರೋಪಕಾರ ಮಾಡುವುದರಿಂದ ಮನುಷ್ಯನಿಗೆ ಒಳ್ಳೆಯ ಜನ್ಮ, ಸದ್ಗತಿ ಪ್ರಾಪ್ತ ವಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೈ.ಬಿ.ಕೊರಡೂರ, ಕಲ್ಲಪ್ಪ ಪತ್ತಾರ, ರವಿ ಕೊಣ್ಣೂರ, ಸಂಗಣ್ಣ ಬಾವಲತ್ತಿ, ಶಿವಾನಂದ ಕೊಳಕಿ, ಪ್ರಕಾಶ ಬುರುಡ, ಗುರುದೇವ ಹಣಗಂಡಿ, ಸಂಗಣ್ಣ ಸರೂರ, ರಮೇಶ ಕೊಣ್ಣೂರ, ಶೇಖರ ಕೋಕಟನೂರ, ಮಹಾನಿಂಗ ಶೀಲವಂತ, ಚನ್ನಬಸಯ್ಯ ಪೂಜಾರಿ, ಸದಾಶಿವ ಜಮಖಂಡಿ, ಶೈಲಾ ನುಚ್ಚಿ, ಮಹಾನಂದ ಕುಳ್ಳಿ, ಕಾವೇರಿ ಕಮತಗಿ, ಮಹಾದೇವಿ ಸುಟ್ಟಟ್ಟಿ, ಶಾಂತಾ ಗಸ್ತಿ, ಮಹಾನಂದ ಕೊಣ್ಣೂರ ಸೇರಿದಂತೆ ಅನೇಕ ನೂರಾರು ಶರಣ, ಶರಣೀಯರು ಇದ್ದರು.