ಸಮಾಜದ ಏಳ್ಗೆಗೆ ಶ್ರಮಿಸಿದಲ್ಲಿ ‌ಬದುಕು ಸಾರ್ಥಕ: ಶಾಸಕ ಜಿಎಸ್ಪಿ

| Published : Jul 21 2025, 01:30 AM IST

ಸಮಾಜದ ಏಳ್ಗೆಗೆ ಶ್ರಮಿಸಿದಲ್ಲಿ ‌ಬದುಕು ಸಾರ್ಥಕ: ಶಾಸಕ ಜಿಎಸ್ಪಿ
Share this Article
  • FB
  • TW
  • Linkdin
  • Email

ಸಾರಾಂಶ

ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡುವದು, ಸದಾ ಸಮಾಜದ ಏಳ್ಗೆಗೆ ಶ್ರಮಿಸಿದಲ್ಲಿ ಬದುಕು ಸಾರ್ಥಕವಾಗುವುದು. ಈ ದಿಶೆಯಲ್ಲಿ ಪ್ರತಿಯೊಬ್ಬರೂ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ರೋಣ: ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡುವದು, ಸದಾ ಸಮಾಜದ ಏಳ್ಗೆಗೆ ಶ್ರಮಿಸಿದಲ್ಲಿ ಬದುಕು ಸಾರ್ಥಕವಾಗುವುದು. ಈ ದಿಶೆಯಲ್ಲಿ ಪ್ರತಿಯೊಬ್ಬರೂ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಅವರು ಭಾನುವಾರ ಪಟ್ಟಣದ ಅಂಜುಮನ್ ಪ್ರೌಢಶಾಲೆ ಆವರಣದಲ್ಲಿ ಬಾವಾಸಾಬ ಆರ್. ಬೆಟಗೇರಿ ಅಭಿಮಾನಿಗಳ ಬಳಗ ವತಿಯಿಂದ ಬಾವಾಸಾಬ ಬೇಟಗೇರಿ ಅವರ 56ನೇ ಜನ್ಮದಿನ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ ,ಶಸ್ತ್ರ ಚಿಕಿತ್ಸೆ, ರಕ್ತದಾನ ಶಿಬಿರ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಹಾಗೂ ಶಾಲಾ ಮಕ್ಕಳಿಗ ಛತ್ರಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾವು ಮಾಡುವ ಸಮಾಜಮುಖಿ ಉತ್ತಮ‌ ಕಾರ್ಯಗಳು, ನಿಸ್ವಾರ್ಥ ಸೇವೆಗಳು ನಮಗೆ ಶಾಂತಿ, ನೆಮ್ಮದಿಯನ್ನು ತಂದು ಕೊಡುವುದರ ಜತೆಗೆ ವ್ಯಕ್ತಿತ್ವವನ್ನು ದ್ವಿಮುಖಗೊಳಿಸಿ, ಇತರರಿಗ ಮಾದರಿಯಾಗುವಂತೆ ಮಾಡುತ್ತವೆ. ಸದಾ ಜನಸಾಮಾನ್ಯರ ಶ್ರೇಯೋಭಿವೃದ್ದಿಗೆ, ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಯಾವ ವ್ಯಕ್ತಿ ತೊಡಗಿಕೊಳ್ಳುತ್ತಾನೋ ಅಂತವರನ್ನು ಸಮಾಜ ಒಪ್ಪಿಕೊಳ್ಳುತ್ತದೆ. ಈ ದಿಶೆಯಲ್ಲಿ ಅಂಜುಮನ್ ಇಸ್ಲಾಂ‌ ಕಮಿಟಿ ಅಧ್ಯಕ್ಷರಾದ ಬಾವಾಸಾಬ ಆರ್. ಬೆಟಗೇರಿ ಅಭಿಮಾನಿಗಳ ಬಳಗದವರು, ಬಾವಾಸಾಬ ಬೆಟಗೇರಿ ಅವರ ಜನ್ಮದಿನ ನೆಪವಾಗಿಸಿಕೊಂಡು ಜನಸಾಮಾನ್ಯರಿಗೆ ಉಚಿತವಾಗಿ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ, ಶಾಲಾ ಮಕ್ಕಳಿಗೆ ಮಳೆಗಾಲದಲ್ಲಿ ಅನುಕೂಲವಾಗಲು ಛತ್ರಿ, ಬೀದಿ ಬದಿ ವ್ಯಾಪಾರಸ್ಥರಿಗೆ ಬಿಸಿಲಿನಿಂದ ಅನುಕೂಲವಾಗಲು ದೊಡ್ಡ ಛತ್ರಿ ವಿತರಿಸಿದ್ದಾರೆ. ಅಲ್ಲದೇ ತುರ್ತು ಸಂದರ್ಭದಲ್ಲಿ ಮತ್ತೊಬ್ಬರ ಜೀವ ಕಾಪಾಡಲು ನೆರವಾಗಲು ರಕ್ತದಾನ ಶಿಬಿರ ಏರ್ಪಡಿಸಿದ್ದು ಅತ್ಯಂತ ಔಚಿತ್ಯಪೂರ್ಣ ಕಾರ್ಯವಾಗಿದೆ ಎಂದರು.

42 ದಾನಿಗಳಿಂದ ರಕ್ತದಾನ: ಶಿಬಿರದ ಮೂಲಕ 42 ದಾನಿಗಳು ತಲಾ 350 ಎಂ.ಎಲ್. ರಕ್ತದಾನ ಮಾಡಿದರು. 18 ಜನರ ಎಲಬು, ಕೀಲು ತಪಾಸಣೆ, 99 ಜನರ ಕಣ್ಣಿನ ತಪಾಸಣೆ, 46 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ, 28 ಗರ್ಭಿಣಿಯರ ಆರೋಗ್ಯ ತಪಾಸಣೆ, 43 ಜನರ ಕಿವಿ, ಗಂಟಲು ತಪಾಸಣೆ, 29 ಚಿಕ್ಕಮಕ್ಕಳ ಆರೋಗ್ಯ ತಪಸಣೆ ಹಾಗೂ ಬಿ.ಪಿ., ಶುಗರ್ ಕಾಯಿಲೆ ತಪಾಸಣೆ ನುರಿತ ತಜ್ಞ ವೈದ್ಯರಿಂದ ಜರುಗಿತು.

ಸಾನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಹಜರತ್ ಸೈಯದ್ ಶಾವಲಿ ಸುಲೇಮಾನ ದರಗಾದ ಅಜ್ಜನವರು ವಹಿಸಿದ್ದರು. ಮಹಮ್ಮದಪಾರು ಖತೀಬ ಪ್ರಾಸ್ತಾವಿಕವಾಗಿ ಮಾತನಾಡಿದರು.

ನ್ಯಾಯವಾದಿ ಎಚ್.ಎಸ್. ಸೊಂಪೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಿಥುನ ಪಾಟೀಲ, ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಬಸವರಾಜ ನವಲಗುಂದ, ಯೂಶೂಫ್ ಇಟಗಿ, ಗದಿಗೆಪ್ಪ ಕಿರೇಸೂರ, ವ್ಹಿ.ಬಿ. ಸೋಮನಕಟ್ಟಿಮಠ, ಸಂಜಯ ರಡ್ಡೇರ, ಶಿವಕುಮಾರ ಚಿತ್ರಗಾರ, ಪುರಸಭೆ ಉಪಾಧ್ಯಕ್ಷ ಹನಮಂತಪ್ಪ ತಳ್ಳಿಕೇರಿ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಬಾವಾಸಾಬ ಬೇಟಗೇರಿ, ಶಫೀಕ ಮೂಗನೂರ, ನಿಂಬಣ್ಣ ಗಾಣಿಗೇರ, ದಾವಲಸಾಬ ಬಾಡಿನ, ಸಂಗಪ್ಪ ಜಿಡ್ಡಿಬಾಗೀಲ, ಈಶ್ವರ ಕಡಬಿನಕಟ್ಟಿ, ಕಲೀಲಹ್ಮದ ರಾಮದುರ್ಗ, ಎ.ಎಸ್. ಖತೀಬ, ವೀರಪ್ಪ ತೆಗ್ಗಿನಮನಿ, ಇನಾಯತ ತರಪದಾರ, ಖಲಂದರಭಾಷಾ ಅಬ್ಬಿಗೇರಿ, ಅಬ್ದುಲರಹಿಮಾನ ಸೈಯದ್, ದಸ್ತಗೀರ ದಳವಾಯಿ, ಜಗದೀಶ ಮಡಿವಾಳರ ಮುಂತಾದವರು ಉಪಸ್ಥಿತರಿದ್ದರು. ರಿಯಾಜ್ ಮುಲ್ಲಾ ಸ್ವಾಗತಿಸಿದರು.