ಸಾರಾಂಶ
ಮನುಷ್ಯನ ಜನ್ಮ ಸಾರ್ಥಕತೆಯ ಬದುಕಿನಲ್ಲಿ ಮೌಲ್ಯ ಉಳಿಸಿಕೊಂಡು ಧರ್ಮಾಚರಣೆಯ ಮಾರ್ಗವನ್ನು ಆದಿ ಜಗದ್ಗುರು ಶ್ರೀ ರೇಣುಕರು ತೋರಿಸಿಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಮನುಷ್ಯನ ಜನ್ಮ ಸಾರ್ಥಕತೆಯ ಬದುಕಿನಲ್ಲಿ ಮೌಲ್ಯ ಉಳಿಸಿಕೊಂಡು ಧರ್ಮಾಚರಣೆಯ ಮಾರ್ಗವನ್ನು ಆದಿ ಜಗದ್ಗುರು ಶ್ರೀ ರೇಣುಕರು ತೋರಿಸಿಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.ಪಟ್ಟಣದ ಶ್ರೀ ಉಚ್ಛಸಂಗಪ್ಪನವರ ಮಠದ ಭವನದಲ್ಲಿ ಶ್ರೀ ರೇಣುಕಾಚಾರ್ಯರ ಭಗವತ್ಪಾದರ ಯುಗಮಾನೋತ್ಸವದ ಧಾರ್ಮಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತಮಾಡಿದರು.
ಮನುಷ್ಯ ಧರ್ಮವನ್ನ ಅನುಸರಿಸಿದರೆ ಮಾನವೀಯತೆ ಬೆಳೆಯುತ್ತದೆ ಮೌಢ್ಯತೆಗಳಿಂದ ಶೋಷಿತ ವರ್ಗಕ್ಕೆ ಹೆಚ್ಚು ಪೆಟ್ಟು ಬೀಳುತ್ತದೆ. ಸಮಾಜದಲ್ಲಿ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದ್ದುˌ ಅಸಮಾನತೆ ಅನ್ಯಾಯ ಹೆಚ್ಚಾದಾಗ ಬಾಂಧವ್ಯದ ಕೊಂಡಿ ಕಳಚಿಕೊಳ್ಳುತ್ತಿದೆ ಎಂದರು. ರೇಣುಕರು ಸಮಾಜದಲ್ಲಿ ಶಾಂತಿ ನೆಮ್ಮದಿ ಬದುಕಿನ ಹಾದಿಯನ್ನ ತೋರಿಸಿ ಧರ್ಮಸ್ಥಾಪನೆಗೆ ಅನೇಕ ಕೊಡುಗೆಗಳನ್ನ ನೀಡಿದ್ದಾರೆ. ಜನ್ಮ ತಾಳಿದ ಮನುಷ್ಯ ಧರ್ಮ ಚಿಂತನೆ ಅಹಿಂಸೆತನ ಮತ್ತು ಕಷ್ಟಕ್ಕೆ ನೆರವಾಗುವರರನ್ನು ದೇವರು ಎಂದು ಕರೆಯುತ್ತಾರೆ. ಈ ನಿಟ್ಟಿನಲ್ಲಿ ಸಿದ್ಧಗಂಗಾ ಶ್ರೀಗಳು ಮಾನವನಾಗಿ ಹುಟ್ಟಿದರು ಅವರ ನಿಸ್ವಾರ್ಥ ಸೇವೆ ಧಾರ್ಮಿಕ ಸಾಧನೆಯಲ್ಲಿ ದೇವರಾಗಿದ್ದಾರೆ. ನಮ್ಮ ರ್ಪೂರ್ವಿಕರು ಹಿಂದೆ ತೀರ್ಥಯಾತ್ರೆಗೆ ಹೊಗುವ ಮುನ್ನ ಮನೆಯ ಜನಕ್ಕೆ ಮನೆಯ ಜೊತೆಗೆ ಮಠವನ್ನು ಸೇರಿಸಿ ಮನೆಮಠ ಜೋಪಾನ ಎಂದು ಕಿವಿಮಾತು ಹೇಳಿ ಜಾಗೃತಿ ಮೂಡಿಸುತ್ತಿದ್ದರು. ವ್ಯೆಕ್ತಿಗೆ ಸಮಸ್ಯೆಯಾಗಲಿ ದುಖಃವಾಗಲಿ ಬಂದಾಗ ಮನೆಯಲ್ಲಿ ನೆಮ್ಮದಿ ಸಿಗದೆ ಇದ್ದಾಗ ಮಠಕ್ಕೆಹೋಗಿ ತನ್ನ ನೋವನ್ನ ಹೇಳಿಕೊಳ್ಳವ ಅವಕಾಶವಿರುತ್ತದೆ. ಹಾಗಾಗಿ ಮಠವನ್ನ ನಾವು ಗೌರವಿಸಬೇಕು ಮಠಗಳನ್ನು ಉಳಿಸಿಕೊಳ್ಳಬೇಕು ಎಂದರು.ಕುಪ್ಪೂರು ಗದ್ದಿಗೆ ಮಠದ ತೇಜೇಶ್ವರಶಿವಾಚಾರ್ಯರು ಸಾನಿಧ್ಯವಹಿಸಿ ಮಾತನಾಡಿ ಮಾನವ ಜನ್ಮ ಅಪರೂಪವಾದುದ್ಢು ಇತ್ತೀಚಿಗೆ ಮಕ್ಕಳು ಜನ್ಮಕೊಟ್ಟ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಬಿಡುತ್ತಿದ್ದಾರೆ. ಸಂಸ್ಕಾರ ಸಂಸ್ಕೃತಿಯನ್ನು ಮನೆಯಲ್ಲಿ ಚಿಕ್ಕವಯಸ್ಸಿನಲ್ಲಿ ಕಲಿಸಿದರೆ ಪ್ರೀತಿ ವಿಶ್ವಾಸ ನೆಲೆಯಾಗಿರುತ್ತದೆ. ನಮ್ಮ ಜವಾಬ್ದಾರಿಯನ್ನು ಅರಿತ ಮಕ್ಕಳು ಕೊನೆಗಾಲದಲ್ಲಿ ಮಾತಾಪಿತೃಗಳನ್ನು ನೊಡಿಕೊಳ್ಳುತ್ತಾರೆ. ರೇಣುಕರು ವೀರಶೈವ ಧರ್ಮ ಗ್ರಂಥವಾದ ಸಿದ್ಧಾಂತ ಸಿಖಾಮಣಿಯಲ್ಲಿ ಹೇಳಿರುವ ಹಾಗೆ ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಪಾದೋದಕ ಪ್ರಸಾದ ಎಂಬ ಅಷ್ಟಾವರಣಗಳನ್ನ ದಿನ ನಿತ್ಯ ಆಚರಿದಾಗ ಮನಸ್ಸು ಧರ್ಮದ ಹಾದಿ ಹಿಡಿಯುತ್ತದೆ. ಆಗ ಮನುಷ್ಯ ಮನುಷ್ಯನನ್ನು ಪ್ರೀತಿಸುತ್ತಾನೆ ಎಂದರು.
ಶ್ರೀ ಉಚ್ಛಸಂಗಪ್ಪನವರ ಮಠದ ಸೇವಾಟ್ರಸ್ಟಿನ ಗೌರವಾಧ್ಯಕ್ಷರಾದ ಕುಪ್ಪೂರು ಗದ್ದಿಗೆ ಮಠದ ವಾಗೀಶ್ ಪಂಡಿತಾರಾಧ್ಯರುˌ ಟ್ರಸ್ಟಿನ ಅಧ್ಯಕ್ಷ ಸಿ.ಮಲ್ಲಿಕಾರ್ಜುನಸ್ವಾಮಿˌಪುಷ್ಪಾಶಿವಣ್ಣˌ ವೀಣಾ ಶಂಕರ್ˌ ಡಾ.ದಿನೇಶ್ˌ ಅನುಪಮ ನಾಗರಾಜ್ ಮಾತನಾಡಿದರು. ಡಾ.ದಿನೇಶ್ ರವರಿಗೆ ಸನ್ಮಾನಿಸಲಾಯಿತು. ಈ ವೇಳೆ ಗುರುಮೂರ್ತಿˌಆಲದಕಟ್ಟೆ ಆನಂದಪ್ಪˌಎಸ್.ಆರ್.ಶಾಂತಯ್ಯˌಕೊಬ್ಬರಿ ಶಂಕರಣ್ಣˌಸಿ.ವೈ.ಕುಮಾರಸ್ವಾಮಿ ˌಶಾಂತಮ್ಮˌಕೊಬ್ಬರಿ ಲಿಂಗರಾಜಪ್ಪ, ಕುಮಾರಸ್ವಾಮಿ, ಪ್ರವೀಣ್ ಇತರರಿದ್ದರು.