ಸಾರಾಂಶ
ದಸರಾ ಹಬ್ಬ ನಾಡಿನ ಸಂಕೇತ ಬಿಂಬಿಸುತ್ತಿದೆ. ಇಂತಹ ಆಚರಣೆಯಿಂದ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು.
ನವರಾತ್ರಿ ನಿಮಿತ್ತ ಘಟಸ್ಥಾಪನೆ ಹಾಗೂ ಶ್ರೀದೇವಿಯ ಪುರಾಣ ಪ್ರಾರಂಭದ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಸಮಾಜದಲ್ಲಿ ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಜೀವನ ಸಾರ್ಥಕಗೊಳ್ಳುತ್ತದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅಂದಾನಗೌಡ ಉಳ್ಳಾಗಡ್ಡಿ ಹೇಳಿದರು.ಪಟ್ಟಣದ ಶ್ರೀವಿಜಯದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ಘಟಸ್ಥಾಪನೆ ಹಾಗೂ ಶ್ರೀದೇವಿಯ ಪುರಾಣ ಪ್ರಾರಂಭದ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲರೂ ಪುರಾಣ ಪ್ರವಚನ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದರು.
ಪ್ರತಿಯೊಬ್ಬರು ಬದುಕಿನಲ್ಲಿ ಹೊಸ ಬದಲಾವಣೆ ಹೊಂದಬೇಕು. ದೇವರ ಸ್ಮರಣೆಯಿಂದ ಪುಣ್ಯದ ಕೆಲಸ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಕೂಡ ಸಮಾಜದಲ್ಲಿ ಸೌಹಾರ್ದತೆಯಿಂದ ಬಾಳಬೇಕು. ದಸರಾ ಹಬ್ಬ ನಾಡಿನ ಸಂಕೇತ ಬಿಂಬಿಸುತ್ತಿದೆ. ಇಂತಹ ಆಚರಣೆಯಿಂದ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು.ದೇವಸ್ಥಾನ ಸಮಿತಿ ಅಧ್ಯಕ್ಷ ಸಿದ್ರಾಮೇಶ ಬೇಲೇರಿ ಮಾತನಾಡಿ, ದಸರಾ ಹಬ್ಬದಲ್ಲಿ ಶ್ರೀದೇವಿಯನ್ನು ಆರಾಧನೆ ಮಾಡುವುದರಿಂದ ಒಳಿತಾಗಲಿದ್ದು, ಇಂದಿನ ಯವಜನಾಂಗ ಧಾರ್ಮಿಕ ಮನೋಭಾವನೆ ಬಗ್ಗೆ ತಿಳಿದುಕೊಳ್ಳುವ ಅವಶ್ಯವಿದೆ ಎಂದರು.
ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ ಮಾತನಾಡಿದರು. ಸಂಕನೂರಿನ ಪ್ರವಚನಕಾರ ಚಂದ್ರಶೇಖರ ಹಿರೇಮಠ ತಬಲಾ ವಾದಕ ಶರಣಕುಮಾರ ಬಂಡಿ ಪ್ರವಚನ ಕಾರ್ಯಕ್ರಮ ನಡೆಸಿದರು.ಈ ಸಂದರ್ಭ ಸಂಗಪ್ಪ ರಾಮತಾಳ, ಶರಣಬಸಪ್ಪ ದಾನಕೈ, ವೆಂಕಟೇಶ ಬಡಿಗೇರ, ವೀರನಗೌಡ ಬನ್ನಪ್ಪಗೌಡ್ರು, ಸಂಗಪ್ಪ ಕೊಪ್ಪಳ, ಅಶೋಕ ಅರಕೇರಿ, ಉಮೇಶ್ ಬಡಿಗೇರ್, ಬಸವರಾಜ ಹಾಲಕೇರಿ, ವೀರುಪಾಕ್ಷಯ್ಯ ಗಂಧದ, ಫಕೀರಪ್ಪ ಉಪ್ಪಾರ, ಮಲ್ಲಿಕಾರ್ಜುನ ನೆರೆಗಲ್, ಚಿದಾನಂದ ಬಡಿಗೇರ, ಪ್ರಶಾಂತ ಬಡಿಗೇರ ಹಾಗೂ ಭಕ್ತರು ಇದ್ದರು.