ಸಾರಾಂಶ
ಇದಕ್ಕೂ ಮೊದಲು ಪಟ್ಟಣದ ಬಸದಿಯಿಂದ ನೀಲಮ್ಮ ಜಲಾಶಯದ ವರೆಗೆ ಪಲ್ಲಕ್ಕಿಯ ಮೆರವಣಿಗೆ
ನವಲಗುಂದ: ಸಮಾಜವನ್ನು ಸತ್ಯ ಮತ್ತು ಶಾಂತಿಯ ಕಡೆಗೆ ಕೊಂಡೊಯ್ದು,ತಾವು ಅದೇ ಮಾರ್ಗದಲ್ಲಿ ನಡೆದ ಮಹಾನ್ ಚೇತನ ವರ್ಧಮಾನ ಮಹಾವೀರರು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಅವರು ಪಟ್ಟಣದ ಜೈನ್ ಬಸದಿಯಲ್ಲಿರುವ ದಿಗಂಬರ ಜೈನ ಸಮಾಜದಿಂದ ಹಮ್ಮಿಕೊಂಡಿದ್ದ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಕೀಲ ವಿ.ಪಿ.ಪಾಟೀಲ ಮಾತನಾಡಿದರು.ಇದಕ್ಕೂ ಮೊದಲು ಪಟ್ಟಣದ ಬಸದಿಯಿಂದ ನೀಲಮ್ಮ ಜಲಾಶಯದ ವರೆಗೆ ಪಲ್ಲಕ್ಕಿಯ ಮೆರವಣಿಗೆ ನಡೆಯಿತು.
ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸ್ಥಾಯಿ ಸಮಿತಿ ಚೇರಮನ್ ಹನುಮಂತ ವಾಲಿಕಾರ, ಸದಸ್ಯರಾದ ಮೋದಿನ ಶಿರೂರು, ಸಂತೋಷ ಪಾಟೀಲ್, ಸಮಾಜದ ಮುಖಂಡರಾದ ವಿಜಯಗೌಡ ಪಾಟೀಲ, ಬಾಹುಬಲಿ ಬಸ್ತಿ, ಶಾಂತು ಪಾಟೀಲ, ಶ್ರೀನಿವಾಸ ಪಾಟೀಲ್, ರವಿ ಪಾಟೀಲ, ಅಶೋಕ ಪಾಟೀಲ್ ಸೇರಿದಂತೆ ಹಲವರಿದ್ದರು.