ಸಾರಾಂಶ
ವಿದ್ಯಾರ್ಥಿಗಳು ಅಧ್ಯಯನದ ಹವ್ಯಾಸ ಬೆಳೆಸಿಕೊಳ್ಳಬೇಕು. ಅತಿಯಾದ ಮೊಬೈಲ್ ಬಳಕೆ ನಿಮ್ಮನ್ನು ಅವನತಿಯತ್ತ ಒಯ್ಯುತ್ತದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಮೀನಗಡ
ವಿದ್ಯಾರ್ಥಿಗಳು ಅಧ್ಯಯನದ ಹವ್ಯಾಸ ಬೆಳೆಸಿಕೊಳ್ಳಬೇಕು. ಅತಿಯಾದ ಮೊಬೈಲ್ ಬಳಕೆ ನಿಮ್ಮನ್ನು ಅವನತಿಯತ್ತ ಒಯ್ಯುತ್ತದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ ಹೇಳಿದರು.ಅವರು ಸಮೀಪದ ಬೇವೂರಿನ ಆದರ್ಶ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ಶೈಕ್ಷಣಿಕ ಮಟ್ಟದಲ್ಲಿ ಪಿಯುಸಿ ಹಂತದ ಶಿಕ್ಷಣ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರವಾದುದು. ನಿರಂತರ ಅಭ್ಯಾಸದಿಂದ ಪ್ರಗತಿ ಸಾಧಿಸಲು ಸಾಧ್ಯ. ಮುಂದೆ ಗುರಿಯಿರಿಸಿಕೊಂಡು ಸಾಧಿಸುವ ಛಲದೊಂದಿಗೆ ಮುನ್ನಡೆದಾಗ ಮಾತ್ರ ಗೆಲುವು ಸಾಧ್ಯ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಹುನಗುಂದ ತಾಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಮಾತನಾಡಿರು. ಆದರ್ಶ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಜಿ.ಜಿ.ಮಾಗನೂರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ವಿ.ಬಿ.ಅರಹುಣಸಿ, ಮುಖ್ಯೋಪಾಧ್ಯಾಯ ಯೋಗೀಶ ಲಮಾಣಿ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ಪ್ರೊ.ಎಸ್.ಕೆ.ಮಾಡೊಳ್ಳಿ,ಶಿ ಕ್ಷಕಿ ರೇಷ್ಮಾ ಧನ್ನೂರ, ದೈಹಿಕ ಶಿಕ್ಷಕ ಪ್ರಕಾಶ ತಳವಾರ ಉಪಸ್ಥಿತರಿದ್ದರು.