ಬಸವಣ್ಣನನ್ನು ಅರ್ಥೈಸಿಕೊಂಡರೆ ಬದುಕು ಸಾರ್ಥಕ

| Published : Jan 30 2025, 12:33 AM IST

ಸಾರಾಂಶ

ಕೊಳ್ಳೇಗಾಲ ತಾಲೂಕಿನ ಕಾಮಗೆರೆಯಲ್ಲಿ ಆಯೋಜಿಸಿದ್ದ ಸಿದ್ದಗಂಗಾ ಶ್ರೀಗಳ ಜಯಂತಿ ಹಿನ್ನೆಲೆ ಶ್ರೀಗಳ ಭಾವಚಿತ್ರಕ್ಕೆ ಹಾರ ಹಾಕುವ ಮೂಲಕ ಮಾಜಿ ಶಾಸಕಿ ಪರಿಮಳ ನಾಗಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ವಿದೇಶಿಯರು ಲಿಂಗಾಯತ ಧರ್ಮದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಜಾಗೃತರಾಗಿ ನಮ್ಮ ಧರ್ಮದ ಬಗ್ಗೆ ಅರಿತುಕೊಳ್ಳಬೇಕಿದೆ. ಬಸವಣ್ಣನನ್ನು ಅರ್ಥ ಮಾಡಿಕೊಂಡರೆ ಸಾಕು ನಮ್ಮ ಬದುಕು ಸಾರ್ಥಕವಾಗುತ್ತದೆ ಸಿದ್ದಗಂಗಾ ಶ್ರೀಗಳು ಬಸವ ತತ್ವವನ್ನು ಚಾಚು ತಪ್ಪದೆ ಪಾಲಿಸುವ ಮೂಲಕ ದೇವರಾದರು, ನಾವು ಧರ್ಮ ನಿಷ್ಠೆ ಉಳ್ಳವರಾಗಬೇಕು ಎಂದು ಮಾಜಿ ಶಾಸಕಿ ಪರಿಮಳ ನಾಗಪ್ಪ ಹೇಳಿದರು.

ಕಾಮಗೆರೆ ಗ್ರಾಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕ ಆಯೋಜಿಸಿದ್ದ ಸಿದ್ದಗಂಗಾ ಶ್ರೀಗಳವರ ಜಯಂತಿ, ಕ್ಯಾಲೆಂಡರ್ ಬಿಡುಗಡೆ ಮತ್ತು ಧರ್ಮ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ಸಿದ್ದಗಂಗಾ ಶ್ರೀಗಳು ಪವಾಡ ಪರುಷರು, ಮಹಾನ್ ಸಂತರು, ಅಂತಹ ನಡೆದಾಡುವ ದೇವರ ಜಯಂತಿಯನ್ನು ಮತ್ತು ಧರ್ಮ ಪ್ರಚಾರ ಸಭೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಕೊಳ್ಳೇಗಾಲ ತಾಲೂಕು ಘಟಕದ ವತಿಯಿಂದ ಆಚರಿಸಲಾಗುತ್ತಿರುವುದು ಹೆಮ್ಮೆಯ ಸಂಗತಿ. ಜಯಂತಿ ಆಚರಣೆ ಜೊತೆಗೆ ಸಿದ್ದಗಂಗಾ ಶ್ರೀಗಳವರ ತತ್ವಾದರ್ಶಗಳನ್ನು ಯುವ ಪೀಳಿಗೆ ಕಿಂಚಿತ್ತಾದರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಸಿದ್ದಗಂಗಾ ಶ್ರೀಗಳವರನ್ನು ನಾನು ಹತ್ತಿರದಿಂದ ಕಂಡಿದ್ದೇನೆ, ಅವರ ಪಡಾಡದ ಬಗ್ಗೆ ಅರಿತಿರುವೆ, ಅವರೊಬ್ಬ ಈ ನೆಲದ ಸಂತ, ಅವರಲ್ಲಿ ದೈವತ್ವ ಕಳೆ ಇತ್ತು, ಕಾಯಕ, ದಾಸೋಹ, ಶೈಕ್ಷಣಿಕ ಅಭ್ಯುದಯಕ್ಕೆ ಸ್ಪಂದಿಸಿದ ಮಹಾನ್ ಶರಣರರು ಅವರು, ಅವರ ದೈವತ್ವ ಕಳೆಯಿಂದಲೇ ಅವರು ಸೇವಾ ಕೈಂಕರ್ಯಗಳ ಮೂಲಕ ದೇವರಾದರು ಎಂದು ವ್ಯಾಖ್ಯಾನಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮುಡುಕನಪುರ ಮಠಾಧ್ಯಕ್ಷ ಶ್ರೀ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮದ ಆಚರಣೆಗಳನ್ನು ಚಾಚು ತಪ್ಪದೆ ಪಾಲಿಸುವ ಮೂಲಕ ಧರ್ಮವನ್ನು ಉಳಿಸಿ ಬೆಳೆಸುವ ಜೊತೆಗೆ ಮೊದಲು ನಮ್ಮನ್ನು ನಾವು ಶುದ್ಧೀಕರಿಸಿಕೊಳ್ಳಬೇಕಿದೆ ಎಂದರು. ಬಸವಣ್ಣನವರು ಸಮಾಜ ಸುದಾರಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಲಿಂಗಾಯತ ಧರ್ಮವನ್ನು ಸ್ಥಾಪಿಸಿ ಇಷ್ಟ ಲಿಂಗವನ್ನು ನಮಗೆ ನೀಡಿದ್ದಾರೆ, ಎದೆಯಲ್ಲಿ ಲಿಂಗ ಧರಿಸುವ ಮೂಲಕ ದೇವರು ನಿನ್ನಲ್ಲೆ ಇದ್ದಾನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ, ಈ ನಿಟ್ಟಿನಲ್ಲಿ ನಾವೆಲ್ಲರೂ ಚಿಂತನ ಶೀಲರಾಗಬೇಕಿದೆ. ಗುರುಮಲ್ಲೇಶ್ವರರು ಕಾಮಗೆರೆ ಗ್ರಾಮಕ್ಕೆ ಬಂದು ಹೊಗಿದ್ದಾರೆ ಎಂಬುದು ಸಾಮಾನ್ಯ ವಿಷಯವಲ್ಲ, ಈ ಗ್ರಾಮಕ್ಕೆ ಅವರು ಅಗಾಧವಾದ ಶಕ್ತಿ ತುಂಬಿ ತೆರಳಿದ್ದಾರೆ, ಅವರ ಆಧರ್ಶಗಳನ್ನು ಪಾಲಿಸುವ ಮೂಲಕ ಉತ್ತಮ ಬದುಕನ್ನು ಯುವ ಪೀಳಿಗೆ ರೂಢಿಸಿಕೊಳ್ಳಬೇಕಿದೆ, ಜೊತೆಗೆ ಸಿದ್ದಗಂಗಾ ಶ್ರೀಗಳ ಜ್ಞಾನ ಜ್ಯೋತಿ, ದಾಸೋಹ ಪರಿಕಲ್ಪನೆ ಯುವ ಪೀಳಿಗೆಯ ಪಾಲಿಗೆ ದಾರಿದೀಪವಾಗಬೇಕಿದೆ ಎಂದರು.

ಈ ವೇಳೆ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಗೌರವಾಧ್ಯಕ್ಷ ಕಾಮಗೆರೆ ಮಠದ ಮುಮ್ಮಡಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ತಾಲೂಕು ಅಧ್ಯಕ್ಷ ಬಿಂಧು ಲೋಕೇಶ್, ಚಿಲಕವಾಡಿ ಗುರುರಾಮೇಶ್ವರ ಮಠದ ಇಮ್ಮಡಿ ಗುರುಲಿಂಗಸ್ವಾಮೀಜಿ, ಕುಂತೂರು ಮಠದ ಶಿವಪ್ರಭುಸ್ವಾಮೀಜಿ, ಚಿಕ್ಕಿಂದ್ವಾಡಿ ಮಠದ ಬಾಲಷಡಕ್ಷರ ಸ್ವಾಮೀಜಿ, ಮಹಾಸಭಾ ಜಿಲ್ಲಾ ಕೋಶಾಧ್ಯಕ್ಷ ಶಿವಪ್ರಸಾದ್, ತಾಲೂಕು ಅಧ್ಯಕ್ಷ ಬಿಂದು ಲೋಕೇಶ್, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಸುಂದ್ರಪ್ಪ, ಧನಂಜಯ, ಪಾಳ್ಯರಘು, ಸಿದ್ದೇಶ್ ರೈತ, ಪ್ರಸಾದ್, ಜಿ.ಮಹದೇವಪ್ರಭು, ಕಾಮಗೆರೆ ಮಲ್ಲಿಕಾರ್ಜುನ, ಮಂಜಣ್ಣ, ಶಿವಸ್ವಾಮಿ, ಬಸವರಾಜು, ಶಾಂತಮಲ್ಲು, ಉಗನಿಯ ಮಹೇಶ್, ಮೃತ್ಯುಂಜಯ, ಕಾಮಗೆರೆ ಮಧು ಇನ್ನಿತರಿದ್ದರು.ಸಿದ್ದಗಂಗಾ ಶ್ರೀಗಳು ನಮ್ಮೆಲ್ಲರ ಮುಂದೆ ಬದುಕಿ ತೋರಿಸಿ ಮಾನವ ದೇವರಾಗಬಹುದೆಂಬ ಸಂದೇಶ ರವಾನಿಸಿದರು, ಯುವ ಪೀಳಿಗೆ ಅವರನ್ನು ಅರ್ಥೈಸಿಕೊಂಡು ಜೀವನ ಸಾರ್ಥಕಗೊಳಿಸಿಕೊಳ್ಳಬೇಕು, ಧರ್ಮದ ಬಗ್ಗೆ ನಾವೆಲ್ಲರೂ ತಾತ್ಸಾರ ಮನೋಭಾವ ತೋರದೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. - ಶ್ರೀಕಂಠಸ್ವಾಮೀಜಿ, ಮುಡಿಗುಂಡ ವಿರಕ್ತ ಮಠಾಧ್ಯಕ್ಷರುಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕ ಆಯೋಜಿಸಿದ್ದ ಸಿದ್ದಗಂಗಾ ಶ್ರೀಗಳ ಜಯಂತಿ, ಧರ್ಮ ಪ್ರಚಾರ ಸಭೆಯಲ್ಲಿ ಮುಡುಕನಪುರದ ಶ್ರೀಗಳು ಮಾತನಾಡಿದರು. ಮಾಜಿ ಶಾಸಕಿ ಪರಿಮಳ ನಾಗಪ್ಪ, ಬಿಂಧು ಲೋಕೇಶ್ ಶ್ರೀಕಂಠಸ್ವಾಮಿಜಿ ಇನ್ನಿತರರಿದ್ದರು.