ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಜನಪದ ಸಾಹಿತ್ಯದಲ್ಲಿ ಬದುಕಿನ ಪಾಠವಿದೆ. ಈ ಸಾಹಿತ್ಯವನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಮುಟ್ಟಿಸುವ ಕಾರ್ಯ ನಿರಂತರವಾಗಿ ನಡೆಯಬೇಕೆಂದು ಪ್ರೊ.ಬಿ.ಎನ್.ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಜನಪದ ಸಾಹಿತ್ಯದಲ್ಲಿ ಬದುಕಿನ ಪಾಠವಿದೆ. ಈ ಸಾಹಿತ್ಯವನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಮುಟ್ಟಿಸುವ ಕಾರ್ಯ ನಿರಂತರವಾಗಿ ನಡೆಯಬೇಕೆಂದು ಪ್ರೊ.ಬಿ.ಎನ್.ಪಾಟೀಲ ಹೇಳಿದರು.ಸುಕ್ಷೇತ್ರ ಇವಣಗಿಯಲ್ಲಿ ನಡೆದ ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಜಾನಪದ ಸಂಭ್ರಮದ ಮೂರನೇ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಜನಪದ ಸಾಹಿತ್ಯ ನಮಗೆ ಹಲವಾರು ಬದುಕಿನ ಪಾಠಗಳನ್ನು ಕಲಿಸಿಕೊಟ್ಟಿದೆ. ಗ್ರಾಮೀಣ ಪ್ರದೇಶವೇ ಜನಪದ ಸಾಹಿತ್ಯ ಮೂಲವೆಂದರು. ಶಿವಲೀಲಾ ಮುರಾಳ ಮಾತನಾಡಿ, ಪಾಶ್ಚಾತ್ಯ ಸಂಸ್ಕ್ರತಿಗೆ ಮಾರು ಹೋಗುತ್ತಿರುವ ಇಂದಿನ ಯುವಜನಾಂಗಕ್ಕೆ ಮೂಲ ಜನಪದ ಸಾಹಿತ್ಯವನ್ನು ತಿಳಿಸುವ ಅಗತ್ಯವಿದೆ. ಕುಟ್ಟುವ, ಬೀಸುವ, ಸೋಬಾನೆ ಪದ, ಲಾಲಿ ಹಾಡುಗಳ ಮೂಲಕ ನೆರೆದ ಸಭಿಕರನ್ನು ಜಾನಪದ ಸಂಗೀತದಲ್ಲಿ ತೇಲಿಸಿ ಮೂಲ ಜನಪದ ಸಾಹಿತ್ಯದ ಮಹತ್ವ ತಿಳಿಸಿಕೊಟ್ಟರು.ಅಶೋಕ ಹಂಚಲಿ ಮಾತನಾಡಿ, ಸನಾತನ ಸಂಸ್ಕ್ರತಿಯ ಆಚಾರ-ವಿಚಾರ, ನಡೆ-ನುಡಿ, ವೇಷ-ಭೂಷಣ, ಉಡುಗೆ-ತೊಡುಗೆ, ಸಂಸ್ಕೃತಿ-ಸಂಪ್ರದಾಯ ಶ್ರೀಮಂತಗೊಳಿಸಿದ ಕೀರ್ತಿ ಜನಪದರಿಗೆ ಸಲ್ಲುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಬಾಳನಗೌಡ ಪಾಟೀಲ, ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ದೇವೇಂದ್ರ ಗೋನಾಳ, ಬಸವರಾಜ ಕಳ್ಳಿಗುಡ್ಡ, ಆರುಂಧತಿ ಹತ್ತಿಕಾಳ, ದ್ರಾಕ್ಷಾಯಿಣಿ ಬಾಗೇವಾಡಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಸಮ್ಮೇಳನದ ಸರ್ವಾಧ್ಯಕ್ಷ ಸಿದ್ದರಾಮ ಬಿರಾದಾರ, ಮಹಾಂತೇಶ ಸಾಸಾಬಾಳ, ಮಹಾಂತೇಶ ಚಕ್ರವರ್ತಿ ಇತರರು ಇದ್ದರು. ಎಸ್.ಬಿ.ದಳವಾಯಿ ಸ್ವಾಗತಿಸಿದರು. ಪಿ.ಎಸ್.ಬಾಗೇವಾಡಿ ನಿರೂಪಿಸಿದರು. ಎ.ಎ.ಉಪಾಧ್ಯೆ ವಂದಿಸಿದರು. ೧೨ ಶಿಕ್ಷಕರಿಗೆ ಗುರುಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.