ಇತ್ತೀಚಿಗೆ ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮಕ್ಕೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯ ಜನರು ನರಕದಲ್ಲಿ ಬದುಕುತ್ತಿದ್ದಾರೆ
ಕುಷ್ಟಗಿ: ಕೊಪ್ಪಳ ತಾಲೂಕಿನಲ್ಲಿ ಸ್ಥಾಪಿತವಾದ ಕಾರ್ಖಾನೆಗಳ ಧೂಳು ಮತ್ತು ಹೊಗೆಯಿಂದ ಜನರ ಜೀವನ ನರಕವಾಗಿದ್ದು, ಕಾರ್ಖಾನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಒತ್ತಾಯಿಸಿದರು.
ಸದನದಲ್ಲಿ ಮಾತನಾಡಿದ ಅವರು, ಕೊಪ್ಪಳ ತಾಲೂಕಿನ ಹಿರೇಬಗನಾಳ ಸೇರಿದಂತೆ ಅನೇಕ ಕಡೆಗಳಲ್ಲಿ 13ಸ್ಪಾಂಜಾ ಐರನ್ ಕಾರ್ಖಾನೆ ಸೇರಿದಂತೆ ಎರಡು ನೂರಕ್ಕೂ ಅಧಿಕ ಕಾರ್ಖಾನೆ ಇದ್ದು ಅವು ಸೂಸುವ ಹೊಗೆ ಮತ್ತು ಬೂದಿಯಿಂದ ಆ ಭಾಗದಲ್ಲಿ ವಾಸಿಸುವ ಜನರು ಪ್ರತಿಯೊಂದು ಕುಟುಂಬದಲ್ಲಿ ರೋಗಗ್ರಸ್ತರಾಗಿದ್ದಾರೆ ಎಂದು ತಿಳಿಸಿದರು.ಇತ್ತೀಚಿಗೆ ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮಕ್ಕೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯ ಜನರು ನರಕದಲ್ಲಿ ಬದುಕುತ್ತಿದ್ದಾರೆ ಎಂದು ತಿಳಿದು ಬಂದಿತು ಪ್ರತಿಯೊಬ್ಬ ಮಗು ಬೂದಿ ಮತ್ತು ಹೊಗೆಯಲ್ಲಿ ಆಟವಾಡಬೇಕಿದೆ ಪ್ರತಿಯೊಂದು ಮನೆಯ ಮಾಳಿಗೆಯ ಮೇಲೆ ಕಪ್ಪು ಬಣ್ಣದ ಹೊಗೆ ಹರಡಿಕೊಂಡಿದ್ದು ಮಾಳಿಗೆ ಮೇಲಿನಿಂದ ಕೆಳಕ್ಕೆ ನೀರು ಹಾಕಿದರೆ ಕಪ್ಪು ಬಣ್ಣದ ಮಲಿನಯುಕ್ತ ನೀರು ಕೆಳಗೆ ಬರುತ್ತದೆ ಇಂತಹ ಹಳ್ಳಿಗಳಲ್ಲಿ ವಾಸ ಮಾಡುತ್ತಿರುವ ಪ್ರತಿ ಕುಟುಂಬದಲ್ಲಿಯೂ ರೋಗಗ್ರಸ್ತರಿದ್ದಾರೆ
ಕಾರ್ಖಾನೆಯಿಂದ ಬಾಧಿತ ಹಳ್ಳಿಗಳ ಗ್ರಾಮಸ್ಥರು ಕಳೆದ 5 ವರ್ಷಗಳ ಕಾಲ ಪ್ರತಿಭಟನೆ ಮಾಡುತ್ತಿದ್ದರೂ ಸಹಿತ ಯಾವುದೇ ಕ್ರಮ ಕೈಗೊಂಡಿಲ್ಲ ಸರ್ಕಾರ ಅಷ್ಟೇ ಅಲ್ಲದೆ ಇಂತಹ ಕಾರ್ಖಾನೆ ಹೊರಗಡೆ ಬಿಡುವ ಹೊಗೆಯು ತುಂಗಭದ್ರಾ ನೀರಿನೊಂದಿಗೆ ಸೇರ್ಪಡೆಗೊಂಡು ಕುಡಿಯುವ ನೀರು ಸಹಿತ ಮಲಿನಗೊಂಡು ಕುಡಿಯಲು ಬಾರದಂತಹ ಪರಿಸ್ಥಿತಿ ಒದಗಿ ಬಂದಿರುವದು ಒಂದು ಕಡೆ ಆದರೆ ಮತ್ತೊಂದು ಕಡೆ ತುಂಗಭದ್ರಾ ಸುತ್ತಮುತ್ತಲಿನ ಜಮೀನಗಳಲ್ಲಿ ರೈತರ ಬೆಳೆಗಳು ಸರಿಯಾದ ಪ್ರಮಾಣದಲ್ಲಿ ಫಸಲನ್ನು ಕೊಡುತ್ತಿಲ್ಲ ಗ್ರಾಮಗಳ ಜನರು ಹಾಗೂ ರೈತರ ಸಮಸ್ಯೆ ನೆರವಿಗೆ ಸಚಿವರು ಹಾಗೂ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು.ಸಚಿವ ಈಶ್ವರ ಖಂಡ್ರೆ ಶಾಸಕ ಪಾಟೀಲ ಪ್ರಶ್ನೆಗೆ ಉತ್ತರಿಸಿ, ಕೊಪ್ಪಳ ತಾಲೂಕಿನಲ್ಲಿ ಒಟ್ಟು 14 ಸ್ಪಾಂಜಾ ಕಾರ್ಖಾನೆಗಳು ಕಾರ್ಯ ಮಾಡುತ್ತಿದ್ದು ಕಾರ್ಖಾನೆಯಿಂದ ಆಗುವ ಸಮಸ್ಯೆಗಳ ಕುರಿತು ರಾಜ್ಯ ಮಾಲಿನ್ಯ ಆಯೋಗಕ್ಕೆ ಅನೇಕ ದೂರುಗಳು ಬಂದಿದ್ದು, ಈಗಾಗಲೆ ಸ್ಥಳಕ್ಕೆ ವಿವಿಧ ಇಲಾಖೆ ತಾಂತ್ರಿಕ ಅಧಿಕಾರಿಗಳ ತಂಡ ಭೇಟಿ ನೀಡಿ ಮನವಿ ಸ್ವೀಕರಿಸಿದ್ದಾರೆ ಅದನ್ನು ಪರಿಶೀಲಿಸಿ ವರದಿ ಬಂದ ನಂತರ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ ಎಂದರು.