ಮಕ್ಕಳಿಗೆ ಮತ್ತು ಪೋಷಕರಿಗೆ ಮನೆಯಲ್ಲಿಯೇ ಜೀವನ ಕೌಶಲ್ಯದ ಬಗ್ಗೆ ಅರಿವು ಮೂಡಿಸುವ ವಿಶೇಷ ಶಿಬಿರವು ತಾಲೂಕಿನ ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕ ಮುನ್ನೂರು ಗ್ರಾಮದ ಕುಂಬುರುಗ ಪಡ್ಡು ಎಂಬಲ್ಲಿ ಚಿತ್ರಾವತಿ ಶೇಖರ ಗೌಡ ಎಂಬವರ ಮನೆಯಲ್ಲಿ ನಡೆಯಿತು.
ಕನ್ನಡಪ್ರಭವಾರ್ತೆ ಪುತ್ತೂರು
ಮಕ್ಕಳಿಗೆ ಮತ್ತು ಪೋಷಕರಿಗೆ ಮನೆಯಲ್ಲಿಯೇ ಜೀವನ ಕೌಶಲ್ಯದ ಬಗ್ಗೆ ಅರಿವು ಮೂಡಿಸುವ ವಿಶೇಷ ಶಿಬಿರವು ತಾಲೂಕಿನ ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕ ಮುನ್ನೂರು ಗ್ರಾಮದ ಕುಂಬುರುಗ ಪಡ್ಡು ಎಂಬಲ್ಲಿ ಚಿತ್ರಾವತಿ ಶೇಖರ ಗೌಡ ಎಂಬವರ ಮನೆಯಲ್ಲಿ ನಡೆಯಿತು. ಕಲಿಕಾ ಆಸಕ್ತಿ ವೃದ್ಧಿಸಿ ಜೀವನ ಕೌಶಲ್ಯ ಬೆಳೆಸುವ ಉದ್ದೇಶದಲ್ಲಿ ನಡೆಸಲಾಗಿದ್ದ ಈ ಶಿಬಿರವು ಜನ ಶಿಕ್ಷಣ ಟ್ರಸ್ಟ್, ಗ್ರಾಮ ವಿಕಾಸ ಕೇಂದ್ರ ಬೀರಿಗ ಇದರ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು. ಮಹಾತ್ಮ ಗಾಂಧಿ ನರೆಗಾದ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ಅವರು ಮಕ್ಕಳಿಗೆ ಮತ್ತು ಪೋಷಕರಿಗೆ ಸಂವಿಧಾನ ಪುಸ್ತಕ ನೀಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನೀಡಿದ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಮನಸ್ಸನ್ನು ಅರಳಿಸಿ ಕಲಿಕಾ ಆಸಕ್ತಿಯನ್ನು ಕೆರಳಿಸಿ ಸ್ವಯಂ ಕಲಿಕೆಗೆ ಪ್ರೇರೇಪಿಸಲು ಹಾಗೂ ಅವರಲ್ಲಿ ಸಂವಹನ ಮತ್ತು ಜೀವನ ಕೌಶಲ ಬೆಳೆಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ 7 ಶಾಲೆಗಳಲ್ಲಿನ 26 ವಿದ್ಯಾರ್ಥಿಗಳು ಭಾಗವಹಿಸಿರುವುದು ಪ್ರಗತಿ ಮತ್ತು ಪರಿವರ್ತನೆಯ ಸಂಕೇತವಾಗಿದೆ ಎಂದರು.ಸ್ವಯಂ ಶಕ್ತಿಯ ಅರಿವು, ಸ್ವಚ್ಛತೆ, ಪರಿಸರ ಸಂರಕ್ಷಣೆ, ಗಾಂಧಿ ಚಿಂತನೆ, ಕಸ ನಶೆ ಹಿಂಸಾ ಮುಕ್ತ ಮನೆ ನಿರ್ಮಾಣ ಕುರಿತು ಮಾಹಿತಿ, ಸಂವಹನ ಮತ್ತು ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಲಾಯಿತು. ಗ್ರಾಮ ವಿಕಾಸ ಕೇಂದ್ರ ಪ್ರೇರಕಿ ಶಿಬಿರ ಸಂಯೋಜಕಿ ಅರುಣಾ ಕುಮಾರಿ, ಸ್ಮಾರ್ಟ್ ಸ್ಕೂಲ್ ಶಿಕ್ಷಕಿಯರಾದ ಶ್ರೇಯಾ, ಸಹನಾ, ವೇದಾಕ್ಷಿ ಹಾಡು, ಆಟ, ಅಭಿಯಾನದ ಮೂಲಕ ಮಕ್ಕಳ ಪ್ರತಿಭಾ ವಿಕಾಸಕ್ಕೆ ಪ್ರೋತ್ಸಾಹಿಸಿದರು.
ಪೋಷಕರಾದ ರತ್ನಾಕರ ಪ್ರಭು, ತೇಜಕಮಾರ್, ಪೂವಕ್ಕ ಗೀತಾ, ರೋಶನಿ, ಸ್ವಾತಿ ಸಹಕರಿಸಿದರು.