ಪರೋಪಕಾರಿ ಕೆಲಸದಿಂದ ಜೀವನ ಸಾರ್ಥಕ: ಕರುಣೆಶ್ವರ ಶ್ರೀ

| Published : Apr 13 2024, 01:01 AM IST

ಪರೋಪಕಾರಿ ಕೆಲಸದಿಂದ ಜೀವನ ಸಾರ್ಥಕ: ಕರುಣೆಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ವಡಗೇರಾ ಪಟ್ಟಣದಲ್ಲಿ ನವಚೇತನ ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಿದ ದನಕರುಗಳಿಗೆ ಕುಡಿಯಲು ನೀರಿನ ತೊಟ್ಟಿಗಳನ್ನು ಉದ್ಘಾಟಿಸಲಾಯಿತು.

ಯಾದಗಿರಿ: ಪರೋಪಕಾರಿ ಕೆಲಸಗಳಿಂದ ಮಾತ್ರ ಮನುಷ್ಯನ ಜನ್ಮ ಸಾರ್ಥಕ ಎಂದು ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಮಠದ ಪೀಠಾಧಿಪತಿ ಕರುಣೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ವಡಗೇರಾ ಪಟ್ಟಣದಲ್ಲಿ ನವಚೇತನ ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಿದ ದನಕರುಗಳಿಗೆ ಕುಡಿಯಲು ನೀರಿನ ತೊಟ್ಟಿಗಳನ್ನು ಉದ್ಘಾಟಿಸಿ ಅವರು ಮಾತನಾಡಿ, ಶಾಂತಾ ನಿಂಗಣ್ಣ ಜಡಿ ದಂಪತಿ ನವ ಚೇತನ ಟ್ರಸ್ಟ್ ಸ್ಥಾಪಿಸಿ, ಆ ಟ್ರಸ್ಟ್ ಮೂಲಕ ಆರೋಗ್ಯ ಶಿಬಿರ, ಸಸಿಗಳ ವಿತರಣೆ, ಪರಿಸರ ರಕ್ಷಣೆ, ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳ ವಿಸ್ತರಣೆ, ಕ್ರೀಡಾಕೂಟಗಳ ಆಯೋಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಕೋವಿಡ್ ಸಂದರ್ಭದಲ್ಲಿ ಸ್ಯಾನಿಟೈಸರ್ ಮತ್ತು ಮಾಸ್ಕ್, ಆಹಾರ ಕಿಟ್ ವಿತರಣೆ ಹೀಗೆ ಇನ್ನು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಇವರ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಸಮಾಜಮುಖಿ ಕೆಲಸಗಳು ಮಾಡಲಿ ಎಂದು ಹಾರೈಸಿದರು.

ಸೂಗಪ್ಪ ಸಾಹುಕಾರ ಅಮಂಗಿ, ಚಾಲಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಇಟಗಿ, ವಕ್ಫ್‌ ಬೋರ್ಡ್ ಸದಸ್ಯ ಉಸ್ಮನ್ ಭಾಷಾ ತಡಿಬಿಡಿ, ಅಪ್ಪಾಜಿ ಕಲ್ಲಪ್ಪನೂರ್, ನವ ಚೇತನ ಟ್ರಸ್ಟ್ ಅಧ್ಯಕ್ಷ ನಿಂಗಣ್ಣ ಜಡಿ, ರೈತ ಸಂಘದ ಮುಖಂಡರಾದ ಶರಣು ಜಡಿ, ಮಲ್ಲು ನಾಟೇಕಾರ, ನಿಂಗು ಕುರಿಕಳ್ಳಿ, ನಾಗರಾಜ ಸ್ವಾಮಿ, ಹಳ್ಳೆಪ್ಪ ತೇಜೆರ, ದೇಸಾಯಿ ನೀಲಳ್ಳಿ, ಮರಿಲಿಂಗ ಗೋನಾಲ, ವೆಂಕಟೇಶ್ ಇಟಗಿ, ಶರಣು ಹೇರುಂಡಿ ಸೇರಿದಂತೆ ಇತರರಿದ್ದರು.