ಸಾರಾಂಶ
- ಚರ್ಚ್‌ಗಳಲ್ಲಿ ಕೇಕ್, ಚಾಕೊಲೆಟ್, ಸಿಹಿ ತಿಂಡಿ ವಿತರಿಸಿ ಶುಭಾಷಯ ವಿನಿಮಯ- ಚರ್ಚ್‌ಗಳಲ್ಲಿ ಶುಭಾಶಯ ಗೀತೆಗಳು, ಕ್ರಿಸ್ತರ ಸ್ತುತಿಯ ಗೀತೆಗಳ ಗಾಯನ- - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಸೋಮವಾರ ಜಿಲ್ಲೆಯ ಕ್ರಿಶ್ಚಿಯನ್ ಸಮುದಾಯದವರ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ನಗರದ ಬಿ.ಎಚ್.ರಸ್ತೆಯಲ್ಲಿರುವ ಸೇಕ್ರೆಡ್ ಹಾರ್ಟ್ ಚರ್ಚ್‌ಗೆ ಭಾನುವಾರ ರಾತ್ರಿಯೇ ಜನರು ಜಮಾಯಿಸಿದ್ದರು. ಸೋಮವಾರ ಬೆಳಗ್ಗೆಯಿಂದಲೇ ಜನರು ಆಗಮಿಸಿ ಮೊಂಬತ್ತಿ ಹಚ್ಚಿ ಯೇಸುವಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶುಭಾಶಯ ಮಿನಿಮಯ ಮಾಡಿಕೊಂಡರು. ನಗರದ ವಿವಿಧೆಡೆ ನಿರ್ಮಾಣ ಮಾಡಿದ್ದ ಕ್ರಿಸ್‌ಮಸ್ ಟ್ರೀ, ಏಸುವಿನ ಜನನ ಸಂದರ್ಭದ ಕ್ಷಣಗಳನ್ನು ನೆನಪಿಸುವ ಗೋದಲಿ ನೋಡುಗರ ಗಮನ ಸೆಳೆಯಿತು. ಭಾನುವಾರ ಮಧ್ಯರಾತ್ರಿ ಹಾಗೂ ಸೋಮವಾರ ಮುಂಜಾನೆ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತ ಧರ್ಮೀಯರು ಪಾಲ್ಗೊಂಡಿದ್ದರು. ಚರ್ಚ್‌ಗಳಲ್ಲಿ ಕೇಕ್, ಚಾಕೊಲೆಟ್, ಸಿಹಿ ತಿಂಡಿ ಹಂಚಲಾಯಿತು.ಮನೆಯಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ಹಬ್ಬದೂಟ ಮಾಡಲಾಯಿತು. ಚರ್ಚ್‌ಗಳಲ್ಲಿ ಶುಭಾಶಯ ಗೀತೆಗಳು, ಕ್ರಿಸ್ತರ ಸ್ತುತಿಯ ಗೀತೆಗಳು ಸಾಮೂಹಿಕವಾಗಿ ಕೇಳಿಬಂದವು. ಚರ್ಚ್‌ನಲ್ಲಿ ಫಾದರ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಪ್ರಾರ್ಥನೆ ನಡೆಯಿತು.
ಕ್ರಿಸ್ತರ ಜನನದ ಶುಭ ಗಳಿಗೆಯ ಸ್ಮರಣೆಗೆ ಬೆಳಕಿನ ಸಂಕೇತವಾಗಿ ಮೇಣದ ಬತ್ತಿ ಬೆಳಗಿಸಲಾಯಿತು. ಪುಟ್ಟಮಕ್ಕಳು ಸಾಂತಾಕ್ಲಾಸ್ ಸೇರಿ ತರಹೇವಾರಿ ವೇಷ ಧರಿಸಿ ಗಮನ ಸೆಳೆದರು.ಬಿ.ಎಚ್. ರಸ್ತೆಯ ಪ್ರಸಿದ್ಧ ಪವಿತ್ರ ಹೃದಯ ಪ್ರಧಾನಾಲಯ, ಶಿವಪ್ಪ ನಾಯಕ ಹೂವಿನ ಮಾರುಕಟ್ಟೆಯ ಬಳಿ ಇರುವ ಸಂತ ಥಾಮಸ್ ದೇವಾಲಯ, ಶರಾವತಿ ನಗರದ ಏಸು ಬಾಲರ ಪುಣ್ಯಕ್ಷೇತ್ರ, ಗೋಪಾಳದಲ್ಲಿ ಗುಡ್ ಶಫರ್ಡ್ ಚರ್ಚ್ ಸೇರಿ ನಗರದ ಎಲ್ಲ ಚರ್ಚ್‌ಗಳಲ್ಲೂ ಸಂಭ್ರಮದಿಂದ ಕ್ರಿಸ್‌ಮಸ್ ಆಚರಣೆ ಮಾಡಲಾಯಿತು.
- - - -25ಎಸ್ಎಂಜಿಕೆಪಿ06: ಶಿವಮೊಗ್ಗದ ನಗರದ ಬಿ.ಎಚ್. ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿ ಕ್ರಿಸ್‌ಮಸ್ ಅಂಗವಾಗಿ ನಿರ್ಮಿಸಲಾಗಿದ್ದ ಗೋದಲಿ.- - --25ಎಸ್ಎಂಜಿಕೆಪಿ07: ಶಿವಮೊಗ್ಗದ ನಗರದ ಬಿ.ಎಚ್. ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್‌ಗೆ ಕ್ರಿಸ್‌ಮಸ್ ಅಂಗವಾಗಿ ಕ್ರೈಸ್ತ ಬಾಂಧವರು ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.
- - --25ಎಚ್‌ಎಚ್‌ಆರ್01: ಹೊಳೆಹೊನ್ನೂರು ಪಟ್ಟಣ ಸೇಂಟ್ ಜೋಸೆಫ್ ಚರ್ಚ್ ಆವರಣದಲ್ಲಿ ಕ್ರಿಸ್‌ಮಸ್ ಅಂಗವಾಗಿ ಸೋಮವಾರ ಯೇಸುಕ್ರಿಸ್ತ ಜನ್ಮಸ್ಥಳವಾದ ಗೋದಲಿಯನ್ನು ಅಲಂಕೃತವಾಗಿ ನಿರ್ಮಿಸಿದ್ದು ನೋಡುಗರ ಕಣ್ಮನ ಸೆಳೆಯಿತು.
- - --25ಎಎನ್‌ಪಿ01: ಆನಂದಪುರದ ಯಡೇಹಳ್ಳಿಯ ಚರ್ಚ್‌ನಲ್ಲಿ ಆವರಣದಲ್ಲಿ ಯೇಸುಕ್ರಿಸ್ತನ ಜನ್ಮ ಸ್ಥಳವಾದ ಗೋದಲಿಯನ್ನು ನಿರ್ಮಿಸಿ, ಕ್ರಿಸ್‌ಮಸ್ ಹಬ್ಬ ಆಚರಿಸಲಾಯಿತು.- - -