ವಿಸ್ಪರ್ಸ್ ಆಫ್ಹಂಪಿ ಛಾಯಾಚಿತ್ರ ಪ್ರದರ್ಶನ

| Published : Feb 11 2024, 01:58 AM IST

ಸಾರಾಂಶ

ಛಾಯಾಗ್ರಾಹಕರನ್ನು ಉತ್ತೇಜಿಸುವ ಮೂಲಕ ಅವರಲ್ಲಿನ ಕ್ರಿಯಾಶೀಲತೆ ಪ್ರೊತ್ಸಾಹಿಸಿ ಅದರ ಲಾಭವನ್ನು ಸಮಾಜಕ್ಕೆ ಸಲ್ಲಿಸುವಲ್ಲಿ ಆಡಳಿತದ ನೆರವು ಅಗತ್ಯ. ದಸರಾವನ್ನು ಕೂಡ ಈ ನಿಟ್ಟಿನಲ್ಲಿ ಮುಂದೆ ಯೋಚಿಸಲಾಗುವುದುಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ

ಕನ್ನಡಪ್ರಭ ವಾರ್ತೆ ಮೈಸೂರು

ಟ್ವಿಲೈಟ್ ವಿಸ್ಪರ್ಸ ಆಫ್ ಹಂಪಿ ಛಾಯಾಚಿತ್ರ ಪ್ರದರ್ಶನವನ್ನು ಇಲ್ಲಿನ ವಿಜಯನಗರದ ನೆರಳು ಬೆಳಕು ಗ್ಯಾಲರಿ, ಕಾಫಿ ಸಿಟಿಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಉದ್ಘಾಟಿಸಿದರು.

ಹಂಪಿಯ ಮತ್ತು ಮೈಸೂರಿನ ಸಾಂಸ್ಕೃತಿಕ ಸಂಬಂಧ ನೆನೆಯುತ್ತಾ ಶಿವಶಂಕರ್ ಬಣಗಾರ್ ಅವರ ಚಿತ್ರಗಳು ಹಂಪಿಯ ಸ್ಮಾರಕಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯವಾಗಿ ತಲುಪಿಸಲು ಹಾಗೂ ಪ್ರವಾಸಿಗರನ್ನು ಸೆಳೆಯಲು ಯಶಸ್ವಿಯಾಗಿವೆ. ಇದರಿಂದ ಸ್ಥಳೀಯ ಆರ್ಥಿಕ ವಹಿವಾಟಿಗೂ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಛಾಯಾಗ್ರಾಹಕರನ್ನು ಉತ್ತೇಜಿಸುವ ಮೂಲಕ ಅವರಲ್ಲಿನ ಕ್ರಿಯಾಶೀಲತೆ ಪ್ರೊತ್ಸಾಹಿಸಿ ಅದರ ಲಾಭವನ್ನು ಸಮಾಜಕ್ಕೆ ಸಲ್ಲಿಸುವಲ್ಲಿ ಆಡಳಿತದ ನೆರವು ಅಗತ್ಯ. ದಸರಾವನ್ನು ಕೂಡ ಈ ನಿಟ್ಟಿನಲ್ಲಿ ಮುಂದೆ ಯೋಚಿಸಲಾಗುವುದು ಎಂದರು.

ಶಿವಶಂಕರ್ ಬಣಗಾರ್ ಅವರು ನನ್ನ ನೆಚ್ಚಿನ ಛಾಯಾಗ್ರಾಹಕರು, ನಾನು ಅವರ ಚಿತ್ರಗಳನ್ನು ನಿರಂತರವಾಗಿ ನೋಡಿ ಆನಂದಿಸಿರುವೆ. ಕಲಾವಿದರ ಚಿತ್ರಗಳನ್ನು ಕೊಳ್ಳುವ ಮೂಲಕ ಸಮಾಜ ಪ್ರೋತ್ಸಾಹಿಸಬೇಕು ಎಂದರು.

ಪ್ರದರ್ಶನದಲ್ಲಿ ಬಣಗಾರ್ ಅವರ ಒಂದು ಚಿತ್ರ ಕೊಳ್ಳುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಣಗಾರ್ ಅವರ ಚಿತ್ರಗಳನ್ನೊಳಗೊಂಡ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಗೌರೀಶ್ ಕಪನಿ, ಜಿ.ಕೆ. ಕುಲಕರ್ಣಿ, ರಾಜಶೇಖರ ಜಮದಂಡಿ ಮತ್ತು ರಿಶಬ್ ವೆಂಚುರ್ಸ್ ಸಿಇಒ ಮಧು ಬಳ್ಳಾಕಿ ಇದ್ದರು.

ಟ್ವಿಲೈಟ್ ವಿಸ್ಪರ್ಸ ಆಫ್ ಹಂಪಿ ಛಾಯಾಚಿತ್ರ ಪ್ರದರ್ಶನವು ಫೆ. 29 ರವರೆಗೆ ಬೆಳಗ್ಗೆ 9 ರಿಂದ ಸಂಜೆ 9 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ.