ರಾಧಮ್ಮ ಜನಸ್ಪಂದನ ವೇದಿಕೆ ವತಿಯಿಂದ ಹೆಣ್ಣು ಮಕ್ಕಳಿಗೆ ಉಚಿತ ಎಚ್‌ಪಿವಿ ಲಸಿಕೆ ನೀಡುವ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ, ಸದ್ಯ ಹುಟ್ಟಿದ ಮಗುವಿಗೆ ಹಲವು ಮಾರಣಾಂತಿಕ ರೋಗಗಳನ್ನು ತಡೆಗಟ್ಟುವ ಲಸಿಕೆಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳ ಜೊತೆ ಎಚ್‌ಪಿವಿ ಲಸಿಕೆ ನೀಡಲು ತಯಾರಿ ನಡೆಯುತ್ತಿದೆ. ೯ರಿಂದ ೧೪ ವಯೋಮಿತಿಯೊಳಗಿನ ಹೆಣ್ಣು ಮಕ್ಕಳು ಆರು ತಿಂಗಳಿಗೊಮ್ಮೆ ಎರಡು ಬಾರಿ ಎಚ್‌ಪಿವಿ ಲಸಿಕೆ ಪಡೆದುಕೊಂಡರೆ ಶೇ.೯೯ರಷ್ಟು ಗರ್ಭಕೊರಳು ಕ್ಯಾನ್ಸರ್ ರೋಗ ಮುಕ್ತರಾಗಬಹುದು. ೧೫ ರಿಂದ ಮದುವೆಯಾಗುವ ಮುನ್ನ ಮೂರು ಬಾರಿ ಲಸಿಕೆ ಪಡೆಯಬೇಕಾಗುತ್ತದೆ ಎಂದರು.
ಕನ್ನಡಪ್ರಭ ವಾರ್ತೆ ಆಲೂರು
ಮಗುವಿಗೆ ಜನ್ಮ ನೀಡಿದ ತಕ್ಷಣ ಇತರ ಲಸಿಕೆಯಂತೆ ಎಚ್‌ಪಿವಿ ಲಸಿಕೆ ಕೊಡುವ ಪ್ರಯತ್ನ ನಡೆಯುತ್ತಿದೆ ಎಂದು ಹಾಸನ ಮಲ್ನಾಡ್ ನರ್ಸಿಂಗ್ ಹೋಂ ವೈದ್ಯೆ ಡಾ. ದಿವ್ಯಾ ತಿಳಿಸಿದರು.ಪಟ್ಟಣದ ಕಲಿವೀರ್ ವಸತಿ ಪ್ರೌಢಶಾಲೆಯಲ್ಲಿ ರಾಧಮ್ಮ ಜನಸ್ಪಂದನ ವೇದಿಕೆ ವತಿಯಿಂದ ಹೆಣ್ಣು ಮಕ್ಕಳಿಗೆ ಉಚಿತ ಎಚ್‌ಪಿವಿ ಲಸಿಕೆ ನೀಡುವ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ, ಸದ್ಯ ಹುಟ್ಟಿದ ಮಗುವಿಗೆ ಹಲವು ಮಾರಣಾಂತಿಕ ರೋಗಗಳನ್ನು ತಡೆಗಟ್ಟುವ ಲಸಿಕೆಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳ ಜೊತೆ ಎಚ್‌ಪಿವಿ ಲಸಿಕೆ ನೀಡಲು ತಯಾರಿ ನಡೆಯುತ್ತಿದೆ. ೯ರಿಂದ ೧೪ ವಯೋಮಿತಿಯೊಳಗಿನ ಹೆಣ್ಣು ಮಕ್ಕಳು ಆರು ತಿಂಗಳಿಗೊಮ್ಮೆ ಎರಡು ಬಾರಿ ಎಚ್‌ಪಿವಿ ಲಸಿಕೆ ಪಡೆದುಕೊಂಡರೆ ಶೇ.೯೯ರಷ್ಟು ಗರ್ಭಕೊರಳು ಕ್ಯಾನ್ಸರ್ ರೋಗ ಮುಕ್ತರಾಗಬಹುದು. ೧೫ ರಿಂದ ಮದುವೆಯಾಗುವ ಮುನ್ನ ಮೂರು ಬಾರಿ ಲಸಿಕೆ ಪಡೆಯಬೇಕಾಗುತ್ತದೆ ಎಂದರು.
ಪೊಲೀಸ್ ಇನ್ಸ್‌ಪೆಕ್ಟರ್ ಮೋಹನರೆಡ್ಡಿಯವರು ಶಿಬಿರ ಉದ್ಘಾಟಿಸಿ ಮಾತನಾಡಿ, ರೋಗ ಬರುವ ಮುನ್ನ ತಡೆಗಟ್ಟುವ ಕೆಲಸವನ್ನು ರಾಧಮ್ಮ ಜನಸ್ಪಂದನ ವೇದಿಕೆ ಮಾಡುತ್ತಿದೆ. ೨೦೨೩ರಲ್ಲಿ ಗರ್ಭಕೊರಳು ಕ್ಯಾನ್ಸರ್‌ನಿಂದ ಸುಮಾರು ೮೦ ಸಾವಿರ ಮಹಿಳೆಯರು ಮೃತಪಟ್ಟಿದ್ದಾರೆ. ಇತ್ತೀಚೆಗೆ ನಾವು ಕ್ಯಾನ್ಸರ್ ಕಾಯಿಲೆಗೆ ಹತ್ತಿರವಾಗುತ್ತಿರುವುದರಿಂದ ಆರೋಗ್ಯದ ಬಗ್ಗೆ ಅತ್ಯಂತ ಜಾಗೃತರಾಗಿರಬೇಕು ಎಂದು. ರಾಧಮ್ಮ ಜನಸ್ಪಂದನ ವೇದಿಕೆ ಅಧ್ಯಕ್ಷ ಹೇಮಂತಕುಮಾರ್, ಅರಕಲಗೂಡು ಮಾಜಿ ಶಾಸಕ ಎ. ಟಿ. ರಾಮಸ್ವಾಮಿಯವರ ಪ್ರೇರಣೆಯಿಂದ, ಇಂದು ಅವರ ಜನ್ಮದಿನದ ಅಂಗವಾಗಿ ಲಸಿಕೆ ಶಿಬಿರ ಏರ್ಪಡಿಸಲಾಗಿದೆ. ಪ್ರತಿ ಏಳು ನಿಮಿಷಕ್ಕೆ ಗರ್ಭಕೊರಳು ಮತ್ತು ಪ್ರತಿ ಮೂರು ನಿಮಿಷಕ್ಕೊಬ್ಬ ಮಹಿಳೆ ಕ್ಯಾನ್ಸರ್‌ನಿಂದ ಮೃತಪಡುತ್ತಿದ್ದಾರೆ. ಖಾಸಗಿ ಅಸ್ಪತ್ರೆಯಲ್ಲಿ ೨.೫ ಸಾವಿರ ರು. ಪಾವತಿ ಮಾಡಿ ಲಸಿಕೆ ಪಡೆಯಬೇಕು. ನಮ್ಮ ತಾಯಿ ಋಣ ತೀರಿಸುವ ಉದ್ದೇಶದಿಂದ ತಾಲ್ಲೂಕಿನ ಪ್ರತಿ ಹೆಣ್ಣುಮಕ್ಕಳಿಗೆ ಸ್ವಯಂ ಹಣ ಪಾವತಿಸಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ ಎಂದರು. ಶಿಬಿರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ. ಜೆ. ಕೃಷ್ಣೇಗೌಡ, ಮುಖ್ಯ ಶಿಕ್ಷಕ ವಾಸುದೇವ್, ಪಪಂ ಮಾಜಿ ಸದಸ್ಯ ಧರ್ಮ ಉಪಸ್ಥಿತರಿದ್ದರು. ಸುಮಾರು ೪೦ ವಿದ್ಯಾರ್ಥಿನಿಯರಿಗೆ ಲಸಿಕೆ ನೀಡಲಾಯಿತು. ಆ