ಶನಿವಾರಸಂತೆ ಹೋಬಳಿಯಲ್ಲಿ ಕೆಲವು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದೆ. ಶನಿವಾರಸಂತೆ ವ್ಯಾಪ್ತಿಯ ದುಂಡಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದೆ. ಅದೇ ರೀತಿ ಮುಳ್ಳೂರು ವ್ಯಾಪ್ತಿಯಲ್ಲಿ ಕಾಡುಕೋಣ ಹಾವಳಿ ಹೆಚ್ಚಿದೆ. ಕೆಲವು ದಿನಗಳಿಂದ ಆಲೂರು ಸಿದ್ದಾಪುರ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು ರಾತ್ರಿ ವೇಳೆಯಲ್ಲಿ ಚಿರತೆ, ನಾಯಿ, ದನಕರುಗಳನ್ನು ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ.

ಕನ್ನಡಪ್ರಭವಾರ್ತೆ ಶನಿವಾರಸಂತೆ

ಆಲೂರು ಸಿದ್ದಾಪುರ ವ್ಯಾಪ್ತಿಯ ಆಲೂರು, ಮಾಲಂಬಿ ಮತ್ತು ಹೊಸಗುತ್ತಿ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಿದೆ. ಮಾಲಂಬಿ ಗ್ರಾಮದಲ್ಲಿ ಗ್ರಾಮಸ್ಥರೊಬ್ಬರ ಸಾಕುನಾಯಿಯನ್ನು ಎಳೆದುಕೊಂಡು ಹೋಗಿರುವ ಬೆನ್ನಲ್ಲೆ ಬುಧವಾರ ಮುಂಜಾನೆ ೩ ಗಂಟೆ ಸಮಯದಲ್ಲಿ ಹೊಸಗುತ್ತಿ ಗ್ರಾಮದ ಅರುಣ್ ಎಂಬುವರ ಮನೆಯಿಂದ ಸಾಕು ನಾಯಿಯನ್ನು ಎಳೆದುಕೊಂಡು ಹೋದ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.