ಸಾರಾಂಶ
-ಪ್ರಯಾಗ್ ರಾಜ್ ನ ಕುಂಭಮೇಳದಂತೆ ಸೇಡಂನಲ್ಲಿ ಸಂಸ್ಕೃತಿ ವೈಭವ ಅನಾವರಣ:ಶೆಟ್ಟರ್ । ಸಾಂಸ್ಕೃತಿಕ ತಂಡಗಳ ಕಲರವ
----ಕನ್ನಡಪ್ರಭ ವಾರ್ತೆ, ಕಲಬುರಗಿ
ಜಿಲ್ಲೆಯ ಸೇಡಂ ರಸ್ತೆಯ ಬೀರನಳ್ಳಿಯ ಪ್ರಕೃತಿ ನಗರದಲ್ಲಿ 9 ದಿನಗಳ ಕಾಲ ನಡೆಯಲಿರುವ ಕೊತ್ತಲ ಸ್ವರ್ಣ ಜಯಂತಿ ಹಾಗೂ 7ನೇ ಭಾರತೀಯ ಸಂಸ್ಕೃತಿ ಉತ್ಸವಕ್ಕೂ ಪೂರ್ವ ಕಲಬುರಗಿ ನಗರ ಹಾಗೂ ಸೇಡಮ್ ನಲ್ಲಿ ಏಕಕಾಲಕ್ಕೆ ನಡೆದ ಅದ್ಧೂರಿ ಶೋಭಾಯಾತ್ರೆ ಜನಮನ ಸೆಳೆದವು.ಉಭಯ ನಗರಗಳಲ್ಲಿ ನಡೆದ ಶೋಭಾ ಯಾತ್ರೆಯಲ್ಲಿ ಸಾವಿರಾರು ಶಾಲಾ ಮಕ್ಕಳು ಪಾಲ್ಗೊಂಡು ಭಾರತೀಯತೆ ಮೆರೆದರು. ಭಾರತ ಮಾತಾಜಿ ಜೈ ಎಂದು ಘೋಷಣೆ ಹಾಕುತ್ತ ಭಾವೈಕ್ಯತೆಯ ಸಂದೇಶ ಸಾರಿದರು.
ಕಲಬುರಗಿಯಲ್ಲಿ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಹೊರಟ ಶೋಭಾಯಾತ್ರೆಗೆ ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್ ಶೆಟ್ಟರ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಡಾ.ದಾಕ್ಷಾಯಿಣಿ ಎಸ್ ಅಪ್ಪ, ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ,ಶಾಸಕ ಬಸವರಾಜ ಮತ್ತಿಮಡು, ಚಂದು ಪಾಟೀಲ್, ಪ್ರೋ. ದಯಾನಂದ ಅಗಸರ್, ಉತ್ಸವದ ಸಹ ಸಂಚಾಲಕ ಮಾರ್ಥಾಂಡ ಶಾಸ್ತ್ರಿ, ಯುವ ಮುಖಂಡರಾದ ನಿತೀನ್ ಗುತ್ತೇದಾರ್, ಹರ್ಷಾನಂದ ಗುತ್ತೇದಾರ್ ,ಉಮೇಶ್ ಶೆಟ್ಟಿ, ಅಶೋಕ್ ಜೀವಣಗಿ, ವಿ.ಶಾಂತರೆಡ್ಡಿ ಸೇರಿದಂತೆ ಹಲವು ಗಣ್ಯರು ಸೇರಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ಚಾಲನೆ ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್ ಶೆಟ್ಟರ್, ಇದೊಂದು ಐತಿಹಾಸಿಕ ಕಾರ್ಯಕ್ರಮ. ಪ್ರಯಾಗ್ ರಾಜ್ ನಲ್ಲಿ ಯಾವ ರೀತಿ ಕುಂಭಮೇಳ ನಡೆಯುತ್ತಿದೆ. ಅದೇ ಮಾದರಿಯಂತೆ ಕಲಬುರಗಿಯಲ್ಲೂ ಸಹ ೯ ದಿನಗಳ ಕಾಲ ಮಿನಿ ಕುಂಭ ಮೇಳ ನಡೆಯಲಿದೆ ಎಂದು ಹೇಳಿದರು.
೯ ದಿನ ನಡೆಯುವ ಈ ಉತ್ಸವದಿಂದ ದೇಶಕ್ಕೆ ಹೊಸ ದಿಶೆ ದೊರಕಲಿದೆ. ರಾಷ್ಟ್ರದ ಅತೀ ದೊಡ್ಡ ಉತ್ಸವದಲ್ಲಿ ದೇಶ ವಿದೇಶಗಳಿಂದ ಸಾವಿರಾರು ಗಣ್ಯರು, ಪದ್ಮಶ್ರೀ ಪುರಸ್ಕೃತರು, ವಿವಿಧ ಸಾಧು ಸಂತರು ಭಾಗಿಯಾಗಲಿದ್ದು, ಸೇಡಮ್ ನ ಪ್ರಕೃತಿ ನಗರದಲ್ಲಿ ೯ ದಿನಗಳ ಕಾಲ ದೇಶದ ಸಂಸ್ಕೃತಿಯ ಅತೀ ದೊಡ್ಡ ಹಬ್ಬ ನಡೆಯಲಿದೆ ಎಂದು ಹೇಳಿದರು.ಮೆರುಗು ತಂದ ಕಲಾ ತಂಡಗಳು:
ಭಾರತೀಯ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಪೂರ್ವವಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ಅದ್ಧೂರಿ ಶೋಭಾಯಾತ್ರೆಗೆ ಸಾಂಸ್ಕೃತಿಕ ಕಲಾ ತಂಡಗಳು ಮೆರುಗು ನೀಡಿದವು. ಲಂಬಣಾ ನೃತ್ಯ, ಡೊಳ್ಳು ಕುಣಿತ, ಗೊಂದಳಿ ವಾದ್ಯ, ಹಲಗಿ, ಪಿಪಿ ವಾದನ, ಕೋಲಾಟ, ಧ್ವನಿವರ್ಧಕ (ಡಿಜೆ), ಚಿಟ್ಟ ಹಲಗಿ , ಪುರಂತಗಿ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗಿಯಾಗಿ ಪ್ರದರ್ಶನ ನೀಡುವ ಮೂಲಕ ಶೋಭಾಯಾತ್ರೆಗೆ ಕಳೆ ತಂದವು. ೭ ಸಾವಿರ ವಿದ್ಯಾರ್ಥಿಗಳು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಭಾರತ ಮಾತೇಯ ರಥದ ಮುಂಭಾಗದಲ್ಲಿ ಹತ್ತಕ್ಕೂ ಹೆಚ್ಚು ಲೇಜಿಮ್ ತಂಡ, ೮ ಘೋಷ ತಂಡ, ಹತ್ತು ಸ್ತಬ್ದ ಚಿತ್ರಗಳು ಹಾಗೂ ಜನಪದ ಸಂಸ್ಕೃತಿ ಸಾರುವ ಅನೇಕ ತಂಡಗಳು ಆಕರ್ಷಣಿಯವಾಗಿದ್ದವು.....ಬಾಕ್ಸ್ .....
ಗಮನ ಸೆಳೆದ ಮಲ್ಲಕಂಬ, ಅನುಭವ ಮಂಟಪಭಾರತೀಯ ವಿದ್ಯಾ ಕೇಂದ್ರ ಸಿರನೂರ ಶಾಲೆಯ ವಿದ್ಯಾರ್ಥಿಗಳ ಮಲ್ಲಕಂಬ ಪ್ರದರ್ಶನ ಹಾಗೂ ೧೨ನೇ ಶತಮಾನದ ಬಸವಣ್ಣನವರ ಅನುಭವ ಮಂಟಪವು ಎಲ್ಲರ ಗಮನ ಸೆಳೆಯಿತು. ಮೂರು ಕಿಲೋ ಮೀಟರ್ ಉದ್ದದವರೆಗೂ ವ್ಯಾಪಿಸಿದ್ದ ಶೋಭಾಯಾತ್ರೆಯಲ್ಲಿ ಮಹಾಪುರುಷರ ವೇಷಧಾರಿಗಳಲ್ಲಿ ಬಾಲಕರು ಕಂಗೋಳಿಸಿದರು. ಶೋಭಾಯಾತ್ರೆಯಲ್ಲಿ ಭಾಗಿಯಾದ ಮಕ್ಕಳಿಗಾಗಿ ಬಾಳೆಹಣ್ಣು, ಬನ್ ಹಾಗೂ ತಂಪು ಪಾನೀಯ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು.
....ಬಾಕ್ಸ್.....ಶಿಕ್ಷಣ ಸಂಸ್ಥೆಗಳು ಭಾಗಿ
ಶೋಭಾಯಾತ್ರೆಯಲ್ಲಿ ನಗರದ ವಿವಿಧ ಶಿಕ್ಷಣ ಸಂಸ್ಥೆಗಳಾದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಪ್ಪಾ ಪಬ್ಲಿಕ್ ಶಾಲೆ, ಚಂದ್ರಕಾಂತ ಪಾಟೀಲ್ ಇಂಗ್ಲಿಷ್ ಮಾಧ್ಯಮ ಶಾಲೆ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಎನ್ ವಿ ಸಂಸ್ಥಯೆ ಶಾಲೆಗಳು, ಸ್ವಾಮಿ ನಾರಾಯಣ ಗುರುಕುಲ, ಭಾರತೀಯ ವಿದ್ಯಾ ಕೇಂದ್ರ ಸಿರನೂರ, ಶರಣಬಸವ ರೆಸಿಡೆನ್ಸಿಯಲ್ ಸ್ಕೂಲ್, ಮುಕ್ತಾಂಬಿಕಾ ಪಿಯು ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದವು.----
ಫೋಟೋ- ಬಾರತಿ 1, ಭಾರತಿ 2, ಬಾರತಿ 3 ಮತ್ತು ಭಾರತಿ 4