ಇಂದು ಲಿಂಗಾಯತ ಮಹಾಸಭಾ ಚುನಾವಣೆ

| Published : Jul 21 2024, 01:23 AM IST

ಸಾರಾಂಶ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ರುದ್ರಮುನಿ ಎನ್.ಸಜ್ಜನ್ ಹಾಗೂ ತಾಲೂಕು ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ವಾಗೀಶ್‌ ಕಣದಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ತಮ್ಮನ್ನು ಗೆಲ್ಲಿಸಬೇಕು ಎಂದು ರುದ್ರಮುನಿ ಎನ್.ಸಜ್ಜನ್ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಅಅಧ್ಯಕ್ಷನಾಗಿದ್ದ ಅವಧಿಯಲ್ಲಿ ಹಲವು ಸಾಧನೆಗಳನ್ನು ಮಾಡಿದ್ದೇನೆ. ಮ್ಮ ತಂಡ ಉತ್ತಮವಾಗಿ ಕೆಲಸ ಮಾಡಿದೆ. ಪ್ರತಿಭಾ ಪುರಸ್ಕಾರ, ಕೆಳದಿ ಶಿವಪ್ಪನಾಯಕ ಪ್ರಶಸ್ತಿ ರೂಪಿಸಿ ನಾಡಿನ ಗಣ್ಯರಿಗೆ ನೀಡಿದ್ದೇವೆ. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹ ನೀಡಿದ್ದೇವೆ ಎಂದರು.

ಮಹಾಸಭಾಕ್ಕೆ ಸ್ವಂತ ಕಟ್ಟಡದ ಅಗತ್ಯವಿದ್ದು, ಸೂಡಾದ ಸಹಕಾರದಿಂದ ಕುವೆಂಪು ನಗರದಲ್ಲಿ ಸುಮಾರು 14 ಲಕ್ಷ ರು. ಮೌಲ್ಯದ ನಿವೇಶನ ಪಡೆದು ನಂತರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಎರಡು ಕೋಟಿ ರು. ಅನುದಾನ ಮತ್ತು ದಾನಿಗಳ ಸಹಕಾರದಿಂದ ಮೂರು ಕೋಟಿ ರು. ವೆಚ್ಚದಲ್ಲಿ ಭವ್ಯ ಕಟ್ಟಡ ನಿರ್ಮಿಸಲಾಗಿದೆ. ಜೊತೆಗೆ ಈಗಿರುವ ಕಟ್ಟಡಕ್ಕೆ ಹೊಂದಿಕೊಂಡಂತೆ ಮತ್ತೊಂದು ನಿವೇಶನ ಮಂಜೂರು ಮಾಡಿಸಿಕೊಂಡಿದ್ದೇವೆ ಎಂದರು.

ಆದ್ದರಿಂದ ಈ ಬಾರಿಯೂ ನನ್ನನ್ನು ಗೆಲ್ಲಿಸಿ ತಮ್ಮಗಳ ಸೇವೆಗೆ ಅವಕಾಶ ಕಲ್ಪಿಸಬೇಕು. ನಾನು ಗೆದ್ದರೆ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ತರಬೇತಿ ನೀಡುತ್ತೇವೆ. ವಧು-ವರರ ಅನ್ವೇಷಣಾ ಕೇಂದ್ರ ತೆರೆಯಲಾಗುವುದು, ಹೊಸ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದರು.,

ಮಲ್ಲಿಕಾರ್ಜುನಸ್ವಾಮಿ ಜಿ.ಎಂ.ಮಾತನಾಡಿ, ನಾನು ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ನನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಆನಂದಮೂರ್ತಿ, ಕೆ.ಆರ್.ಸೋಮನಾಥ್ ಇದ್ದರು.ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್.ವಾಗೀಶ್ ಬೆಂಬಲಕ್ಕೆ ಮನವಿ

ಭದ್ರಾವತಿ: ನಗರದ ತಾಲೂಕು ಕಚೇರಿ ರಸ್ತೆಯ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಜು.೨೧ರಂದು ಬೆಳಗ್ಗೆ ೮ ರಿಂದ ೫ ರವರೆಗೆ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಘಟಕದ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ನಮ್ಮ ತಂಡವನ್ನು ಗೆಲ್ಲಿಸುವಂತೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್. ವಾಗೀಶ್ ಮನವಿ ಮಾಡಿದರು.ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೇಡಿಕಟ್ಟೆ ನಿವಾಸಿಯಾದ ನಾನು ಕಳೆದ ೨೦ ವರ್ಷದಿಂದ ಮಹಾಸಭಾ ಸದಸ್ಯನಾಗಿ ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಅನೇಕ ಹಿರಿಯರ ಬೆಂಬಲವಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಮತನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.

ನಮ್ಮ ತಂಡದಿಂದ ಮಹಿಳಾ ನಿರ್ದೇಶಕರ ಸ್ಥಾನಕ್ಕೆ ೭ ಜನ ಹಾಗು ಪುರುಷ ನಿರ್ದೇಶಕರ ಸ್ಥಾನಕ್ಕೆ ೧೧ ಜನ ಸ್ಪರ್ಧಿಸಿದ್ದಾರೆ. ಈ ತಂಡ ಗೆಲುವು ದಾಖಲಿಸಿದ್ದಲ್ಲಿ ಮಹಾಸಭಾದ ಕಚೇರಿ ಸ್ಥಾಪನೆ, ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಆರ್ಥಿಕ ಸಹಕಾರ, ೨ಎ ಮೀಸಲಾತಿ, ರಾಜಕೀಯ ಪ್ರಾತಿನಿಧ್ಯಕ್ಕಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. ನಿರ್ದೇಶಕರ ಸ್ಥಾನಕ್ಕೆ ಕೀರ್ತಿಕುಮಾರ್, ಬಿ.ಚನ್ನಪ್ಪ, ದಯಾನಂದ್ ಬಿ.ಆರ್, ಭರತ್ ಬಿ.ಎಸ್, ಮಹದೇವಪ್ಪ ಎಂ, ಎಚ್.ಮಂಜುನಾಥ, ಯೋಗೇಶ್, ರುದ್ರೇಶ ಆರ್.ಎನ್, ಬಿ.ಎನ್.ಲಂಬೋಧರ, ವಾಗೀಶ್ಬಿ.ಓ, ಸೋಮಶೇಖರ ಸ್ಪರ್ಧಿಸಿದ್ದಾರೆ. ಮಹಿಳಾ ನಿರ್ದೇಶಕರ ಸ್ಥಾನಕ್ಕೆ ಕವಿತ ಬಿ.ಪಿ., ಕಾವೇರಮ್ಮ, ನಾಗರತ್ನಮ್ಮ ಕೆ.ಎಸ್., ನಂದಿನಿ ಮಲ್ಲಿಕಾರ್ಜುನ, ಪೂರ್ಣಿಮಾ ಎಸ್., ರಾಜೇಶ್ವರಿ, ರೂಪನಾಗರಾಜ್ ಎಲ್.ಎಸ್ ಸ್ಪರ್ಧಿಸಿದ್ದು, ಸಮಾಜ ಬಾಂಧವರು ಈ ತಂಡಕ್ಕೆ ಮತನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಘಟಕದ ಮಾಜಿ ಅಧ್ಯಕ್ಷಕರುಗಳಾದ ಸಿದ್ಧಲಿಂಗಯ್ಯ, ಮಹೇಶ್ ಕುಮಾರ್, ಸಮಾಜದ ಮುಖಂಡರುಗಳಾದ ಅಡವೀಶಯ್ಯ, ಸತೀಶ್, ಬಸವರಾಜಯ್ಯ ಸೇರಿದಂತೆ ಇನ್ನಿತರರು ಉಪಸ್ಥಿರಿದ್ದರು.