ಸಮಾಜ ಅಭಿವೃದ್ಧಿಗೆ ಲಯನ್ಸ್ ಕ್ಲಬ್ ಕೊಡುಗೆ ಅಪಾರ

| Published : Jul 02 2024, 01:35 AM IST

ಸಾರಾಂಶ

ತಾಲೂಕಿನ ಲಯನ್ಸ್ ಕ್ಲಬ್ ೩೭ ವರ್ಷಗಳಿಂದ ನಿರಂತರ ಸಮಾಜ ಸೇವಾ ಕಾರ್ಯ ಮಾಡುತ್ತಾ ಬಂದಿದೆ. ಮುಂಬರುವ ದಿನಗಳಲ್ಲಿ ಲಯನ್ಸ್ ಶಾಲೆ ಪ್ರಾರಂಭಿಸಲು ಚಿಂತನೆ ಮಾಡಬೇಕು ಎಂದು ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಲಯನ್ಸ್ ಕ್ಲಬ್ ೩೭ ವರ್ಷಗಳಿಂದ ನಿರಂತರ ಸಮಾಜ ಸೇವಾ ಕಾರ್ಯ ಮಾಡುತ್ತಾ ಬಂದಿದೆ. ಮುಂಬರುವ ದಿನಗಳಲ್ಲಿ ಲಯನ್ಸ್ ಶಾಲೆ ಪ್ರಾರಂಭಿಸಲು ಚಿಂತನೆ ಮಾಡಬೇಕು ಎಂದು ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಹೇಳಿದರು. ಪಟ್ಟಣದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ವಂದನಾ ಕೃತಜ್ಞತಾ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಲಬ್ ಅಧ್ಯಕ್ಷ, ಪದಾಧಿಕಾರಿ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆ ಸಾರ್ಥಕವಾಗಿದೆ. ಕ್ಲಬ್‌ಗೂ ಉತ್ತಮ ಹೆಸರು ಬರುತ್ತಿದೆ. ತುರುವೇಕೆರೆ ಲಯನ್ಸ್ ಕ್ಲಬ್ ನೂರಾರು ಸಮಾಜಮುಖಿ ಚಟುವಟಿಕೆಗಳನ್ನು ಮಾಡುತ್ತ ಬಂದಿದೆ ಎಂದರು.

ಲಯನ್ಸ್ ಸದಸ್ಯರ, ದಾನಿಗಳ ಸಹಕಾರ ಲಯನ್ ಟ್ರಸ್ಟ್ ಮೂಲಕ ಪಟ್ಟಣದಲ್ಲಿ ಭವ್ಯವಾದ ಲಯನ್ಸ್ ಭವನ ನಿರ್ಮಾಣ ಮಾಡಲಾಗುತ್ತಿದೆ. ಸ್ವಂತ ಭವನದಲ್ಲಿ ಹೆಚ್ಚಿನ ಸಾಮಾಜಿಕ ಕಾರ್ಯಗಳು ನಡೆಯಲಿ ಎಂದರು.

ಎಂ.ಡಿ.ಲಕ್ಷ್ಮೀನಾರಾಯಣ್ ಲಯನ್ಸ್ ಭವನಕ್ಕೆ ₹2 ಲಕ್ಷ ದೇಣಿಗೆ ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಪ ರಾಜ್ಯಪಾಲ ಕೆ.ಈಶ್ವರನ್, ಜಿ.ಇ.ಟಿ. ಕೋ ಆಟಿನೇಟರ್ ಮಹೇಶ್, ಪ್ರಾಂತ್ಯಾಧ್ಯಕ್ಷ ಜಿ. ಗುರುಪ್ರಸಾದ್. ನೃಪೇಂದ್ರ, ವಲಯಾಧ್ಯಕ್ಷ ಮಿಹಿರಕುಮಾರ್, ಟ್ರಸ್ಟ್ ಅಧ್ಯಕ್ಷ ಪಿ.ಎಚ್.ಧನಪಾಲ್, ಸ್ವಾಗತ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜನ್ ದುಂಡಾ, ಅಧ್ಯಕ್ಷ ಹುಲಿಕೆರೆ ಲೋಕೇಶ್, ಬಾವಿ ಅಧ್ಯಕ್ಷ ರಂಗನಾಥ್, ಕಾರ್ಯದರ್ಶಿ ಎಸ್.ವಿ.ರವಿ, ಖಜಾಂಚಿ ಡಾ.ಎ.ನಾಗರಾಜು ಬೆಂಗಳೂರು ಆಸರೆ ಕ್ಲಬ್ ಅಧ್ಯಕ್ಷ ಸುರೇಶ್, ಸುನಿಲ್ ಬಾಬು, ನಾಗರಾಜಯ್ಯ ಪಾಲ್ಗೊಂಡಿದ್ದರು.