ಸಾರಾಂಶ
ನರಸಿಂಹರಾಜಪುರಲಯನ್ಸ್ ಕ್ಲಬ್ ಒಂದು ಸೇವಾ ಸಂಸ್ಥೆಯಾಗಿದ್ದು ನೂರಾರು ವರ್ಷಗಳ ಇತಿಹಾಸವಿದೆ ಎಂದು ಲಯನ್ಸ್ ಕ್ಲಬ್‌ನ ಜಿಲ್ಲಾ ಉಪ ರಾಜ್ಯಪಾಲ ಎಚ್.ಎಂ.ತಾರಾನಾಥ್ ಹೇಳಿದರು.
ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ
ಕನ್ನಡಪ್ರಭವಾರ್ತೆ ನರಸಿಂಹರಾಜಪುರಲಯನ್ಸ್ ಕ್ಲಬ್ ಒಂದು ಸೇವಾ ಸಂಸ್ಥೆಯಾಗಿದ್ದು ನೂರಾರು ವರ್ಷಗಳ ಇತಿಹಾಸವಿದೆ ಎಂದು ಲಯನ್ಸ್ ಕ್ಲಬ್‌ನ ಜಿಲ್ಲಾ ಉಪ ರಾಜ್ಯಪಾಲ ಎಚ್.ಎಂ.ತಾರಾನಾಥ್ ಹೇಳಿದರು.
ಬುಧವಾರ ಪಟ್ಟಣದ ಕನ್ಯಾಕುಮಾರಿ ಕಂಫರ್ಟ್ ಹಾಲ್ ನಲ್ಲಿ ನಡೆದ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿ, ನಾವು ಇನ್ನೊಬ್ಬರ ನೋವನ್ನು ಅರ್ಥ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಂಡರೆ ಮಾತ್ರ ನಿಜವಾದ ಮನುಷ್ಯರಾಗುತ್ತೇವೆ ಎಂದರು.ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಪಿ.ಜೆ.ಆಂಟೋನಿ, ಲಯನ್ಸ್ ಕ್ಲಬ್ ಸೇವಾ ಕ್ಷೇತ್ರದಲ್ಲಿ ರಾಷ್ಟ ಮಟ್ಟದಲ್ಲಿ ಗುರ್ತಿಸಿಕೊಂಡಿರುವ ಸಂಸ್ಥೆಯಾಗಿದೆ. ಶಿಸ್ತು, ಶಿಷ್ಟಾಚಾರ ಇರುವ ಸಂಸ್ಥೆ ಇದಾಗಿದೆ. ಇದರ ಗುರಿ, ಉದ್ದೇಶ ಈಡೇರಿಸುವ ಕೆಲಸವನ್ನು ನಾವುಗಳು ಮಾಡಬೇಕು. ನಾವು ಸಮಾಜದಿಂದ ಪಡೆದಿರುವುದನ್ನು ಸಮಾಜಕ್ಕೆ ಹಿಂದಿರುಗಿಸಿ ಕೊಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.ನಿರ್ಗಮಿತ ಅಧ್ಯಕ್ಷ ಎಚ್.ಎಸ್.ರವಿಕುಮಾರ್ ಮಾತನಾಡಿ, ಕ್ಲಬ್‌ನ ಎಲ್ಲಾ ಸದಸ್ಯರ ಸಹಕಾರದಿಂದ ಸಮಾಜಮುಖಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಯಿತು. ಲಯನ್ಸ್ ಕ್ಲಬ್ ನಿಂದ ದಾನಿಗಳ ಸಹಕಾರ ಪಡೆದು ಶಾಲಾ ಮಕ್ಕಳಿಗೆ ಸಮವಸ್ತ್ರಗಳನ್ನು, ಅಗತ್ಯ ಪರಿಕರ ವಿತರಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಸಾಧನೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ ಎಂ.ಪುನೀತ್‌ಕುಮಾರ್, ಎಂ.ಡಿ.ನಾಗರಾಜ್,ಎಸ್.ಆರ್.ರಾಘವೇಂದ್ರ ಹಾಗೂ ಶಿಕ್ಷಕ ಗಿರೀಶ್‌ನಾಯ್ಕ್ ಹಾಗೂ ಲಯನ್ಸ್ ಕ್ಲಬ್ ಸದಸ್ಯ ಡಿ.ರಮೇಶ್ ಅವರ ಪುತ್ರ ಚಿರಾಯು.ಆರ್.ಗೌಡ, ಎಸ್.ಎಸ್.ಎಲ್.ಸಿ ಕನ್ನಡ ವಿಷಯದಲ್ಲಿ ಪೂರ್ಣಾಂಕ ಪಡೆದ ನೇಹಾ ಹಾಗೂ ಪತ್ರಕರ್ತ ಕೆ.ವಿ.ನಾಗರಾಜ್, ಅವರನ್ನು ಸನ್ಮಾನಿಸಲಾಯಿತು. ನೂತನ ಅಧ್ಯಕ್ಷರಾಗಿ ಪಿ.ಜೆ.ಆಂಟೋನಿ, ಕಾರ್ಯದರ್ಶಿಯಾಗಿ ಕೆ.ಟಿ.ಎಲ್ದೋ, ಖಜಾಂಚಿಯಾಗಿ ಡಿ.ಸಜಿ ಅವರು ಅಧಿಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಸಿಜು, ವಲಯ ರಾಯಬಾರಿ ಎಂ.ಪಿ.ಸನ್ನಿ, ಜೇಮ್ಸ್,ಶಿವರಾಂ, ಪ್ರಭಾಪ್ರಕಾಶ್, ವಿಕ್ರಂ,ಪ್ರದೀಪ್, ಸಬಿತಾತಾರಾನಾಥ್,ತ್ರೇಸಿಯಮ್ಮಆಂಟೋನಿ,ಎಲ್ದೋ,ಸಜಿ,ದಕ್ಷಿಣಾಮೂರ್ತಿ,ಸುಮಾ ಇದ್ದರು.