ಸಮಾಜಮುಖಿ ಸೇವೆಗೆ ಲಯನ್ಸ್ ಕ್ಲಬ್ ಉತ್ತಮ ವೇದಿಕೆ: ಡಾ. ಜೆ.ಪಿ. ಕೃಷ್ಣೇಗೌಡ

| Published : Mar 15 2025, 01:04 AM IST

ಸಮಾಜಮುಖಿ ಸೇವೆಗೆ ಲಯನ್ಸ್ ಕ್ಲಬ್ ಉತ್ತಮ ವೇದಿಕೆ: ಡಾ. ಜೆ.ಪಿ. ಕೃಷ್ಣೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು,ಯಾವುದೇ ಫಲಾಪೇಕ್ಷೆ ಇಲ್ಲದೇ ಸಮಾಜಮುಖಿ ಸೇವೆ ಮಾಡುವ ಮನೋಭಾವ ಇರುವವರಿಗೆ ಲಯನ್ಸ್ ಸಂಸ್ಥೆ ಉತ್ತಮ ವೇದಿಕೆಯಾಗಿದೆ ಎಂದು ಮಕ್ಕಳ ತಜ್ಞ, ಲಯನ್ಸ್ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಹೇಳಿದ್ದಾರೆ.

ಲಯನ್ಸ್ ಸುವರ್ಣ ಭವನ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಯಾವುದೇ ಫಲಾಪೇಕ್ಷೆ ಇಲ್ಲದೇ ಸಮಾಜಮುಖಿ ಸೇವೆ ಮಾಡುವ ಮನೋಭಾವ ಇರುವವರಿಗೆ ಲಯನ್ಸ್ ಸಂಸ್ಥೆ ಉತ್ತಮ ವೇದಿಕೆಯಾಗಿದೆ ಎಂದು ಮಕ್ಕಳ ತಜ್ಞ, ಲಯನ್ಸ್ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಹೇಳಿದ್ದಾರೆ. ಚಿಕ್ಕಮಗಳೂರು ಲಯನ್ಸ್ ಕ್ಲಬ್ ತನ್ನ 50 ವರ್ಷ ಪೂರೈಸಿದ ಸುವರ್ಣ ಮಹೋತ್ಸವ ಆಚರಣೆ ಸವಿ ನೆನಪಿಗೆ ನವೀಕರಿಸಿದ ಲಯನ್ಸ್ ಸುವರ್ಣ ಭವನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ನಗರದಲ್ಲಿ 50 ವರ್ಷಗಳನ್ನು ಪೂರೈಸಿರುವ ಲಯನ್ಸ್ ಸಂಸ್ಥೆ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ದಾನಿಗಳು ಮತ್ತು ಲಯನ್ಸ್ ಸಂಸ್ಥೆ ಪದಾಧಿಕಾರಿಗಳ ಪರಿಶ್ರಮದಿಂದ ಅತ್ಯಂತ ಸುಂದರ ಹಾಗೂ ಸುಸಜ್ಜಿತ ಸುವರ್ಣ ಭವನ ನಿರ್ಮಾಣ ಗೊಂಡಿದೆ ಎಂದರು.

ಈ ಸುವರ್ಣ ಭವನದ ನಿರ್ಮಾಣದ ಹಿಂದೆ ಲಯನ್ಸ್ ಸಂಸ್ಥೆ ಹಲವು ಹಿರಿಯರ ಸಹಕಾರ, ಶ್ರಮ ಅಡಗಿದೆ. ಹಲವು ದಾನಿ ಗಳು ಈ ಕಟ್ಟಡ ನಿರ್ಮಾಣಕ್ಕೆ ನೆರವು ನೀಡಿದ್ದಾರೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು.

ಲಯನ್ಸ್ ಸುವರ್ಣ ಭವನ ಉದ್ಘಾಟಿಸಿದ ಲಯನ್ಸ್ ಕ್ಲಬ್ ರಾಜ್ಯಪಾಲರಾದ ಬಿ.ಎಂ. ಭಾರತಿ ಮಾತನಾಡಿ, ಕಳೆದ 50 ವರ್ಷಗಳ ಹಿಂದೆ ಜನ್ಮತಾಳಿದ ಲಯನ್ಸ್ ಸಂಸ್ಥೆ ಇಂದು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ಇದರ ಸವಿ ನೆನಪಿ ಗಾಗಿ ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಒಂದು ಉತ್ತಮ ಹಾಗೂ ಸುಸಜ್ಜಿತ ಲಯನ್ಸ್ ಸುವರ್ಣ ಭವನ ನಿರ್ಮಿಸಿದೆ. ಈ ಸಂಸ್ಥೆ ಈ ಕೆಲಸ ಬೇರೆ ಲಯನ್ಸ್ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಡೈರೆಕ್ಟರ್‌ಗಳಾದ ಎಸ್.ರಾಮಚಂದ್ರನ್ ಹಾಗೂ ವೆಂಕಟರೆಡ್ಡಿ ಮಾತನಾಡಿ, ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿಕ್ಕಮಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಪುಷ್ಪರಾಜ್ ಮಾತನಾಡಿ, ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಸುವರ್ಣ ಮಹೋತ್ಸವದ ಸವಿ ನೆನಪಿಗೆ ಸುವರ್ಣ ಭವನ ನಿರ್ಮಾಣ ಮಾಡಬೇಕೆಂಬ ಸಮಿತಿ ಅಧ್ಯಕ್ಷರೂ ಆದ ಡಾ. ಜೆ.ಪಿ. ಕೃಷ್ಣೇಗೌಡರ ಕನಸು ಇಂದು ಈಡೇರಿದೆ. ಈ ಕಾರ್ಯ ಯಶಸ್ವಿಯಾಗಲು ಹಗಲಿರುಳು ಕೆಲಸ ಮಾಡಿರುವ ಅಧ್ಯಕ್ಷ ಜಿ. ರಮೇಶ್ ಹಾಗೂ ತಂಡಕ್ಕೆ ತಾವು ಸೇರಿದಂತೆ ನನ್ನೊಂದಿಗೆ ಕೆಲಸ ಮಾಡಿದ ಕಾರ್ಯದರ್ಶಿ ಗೋಪಿಕೃಷ್ಣ, ಖಜಾಂಚಿ ಎಂ.ಎಂ. ಗಿರೀಶ್ ಸೇರಿದಂತೆ ಲಯನ್ಸ್ ಕ್ಲಬ್‌ನ ಎಲ್ಲಾ ಪದಾಧಿಕಾರಿ ಹಾಗು ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹಿರಿಯ ಸದಸ್ಯರ ಸಹಕಾರ ಮುಖ್ಯವಾಗಿದೆ ಎಂದರು.

ಲಯನ್ಸ್ ಮಾಜಿ ರಾಜ್ಯಪಾಲ ಎಚ್.ಆರ್. ಹರೀಶ್, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಗೋಪಾಲಗೌಡ, ಲಯನ್ಸ್ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎಚ್.ಸಿ. ಶಶಿಪ್ರಸಾದ್, ಸುವರ್ಣ ಮಹೋತ್ಸವ ಸಮಿತಿ ಉಪಾಧ್ಯಕ್ಷ ಜಿ. ರಮೇಶ್, ಖಜಾಂಚಿ ಬಿ.ಎನ್. ವೆಂಕಟೇಶ್, ಪದಾಧಿಕಾರಿಗಳಾದ ಟಿ. ನಾರಾಯಣಸ್ವಾಮಿ. ಕೆ.ಇ. ಬಾಲಕೃಷ್ಣ, ಸಿ.ಎನ್. ಕುಮಾರ್, ಕಡೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಸ್. ತ್ಯಾಗರಾಜ್, ಕಾರ್ಯದರ್ಶಿ ಡಾ. ಮಂಜುನಾಥ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಚಂದ್ರಮ್ಮ, ನ್ಯಾಯಾಧೀಶರಾದ ಸಾಯಿಪ್ರಶಾಂತ್, ಮಲ್ಲಂದೂರು ಕುಮಾರ್, ಜಾನ್ ಡಿಸೋಜ, ರಾಷ್ಟ್ರ ಪ್ರಶಸಿ ಪುರಸ್ಕೃತ ಶಿಕ್ಷಕಿ ಗೀತಾ, ಪ್ರಗತಿಪರ ಕೃಷಿಕ ಸಿ.ಬಿ. ಅರವಿಂದ್ ಸೇರಿದಂತೆ ಸುವರ್ಣ ಭವನ ನಿರ್ಮಾಣಕ್ಕೆ ನೆರವು ನೀಡಿದ ದಾನಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಲಯನ್ಸ್ ಕಾರ್ಯದರ್ಶಿ ಗೋಪಿಕೃಷ್ಣ ಕ್ಲಬ್‌ನ ವರದಿ ಮಂಡಿಸಿ, ವಿವಿಧ ಸಮಾಜಮುಖಿ ಸೇವಾ ಕಾರ್ಯ ಚಟುವಟಿಕೆಗಳ ಜೊತೆಗೆ ಸ್ವಯಂ ಉದ್ಯೋಗ ಕೈಗೊಳ್ಳಲು ವಿವಿಧ ಫಲಾನುಭವಿಗಳಿಗೆ ₹11 ಲಕ್ಷದ ಚೆಕ್‌ ವಿತರಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಪುಷ್ಪರಾಜ್ ಸ್ವಾಗತಿಸಿದರು. ಕಾರ್ಯದರ್ಶಿ ಗೋಪಿಕೃಷ್ಣ ವಂದಿಸಿ, ಜಿ. ರಮೇಶ್ ಕಾರ್ಯಕ್ರಮ ನಿರೂಪಿಸಿದರು.14 ಕೆಸಿಕೆಎಂ 1ಚಿಕ್ಕಮಗಳೂರು ಲಯನ್ಸ್ ಸುವರ್ಣ ಭವನವನ್ನು ಲಯನ್ಸ್ ಕ್ಲಬ್ ರಾಜ್ಯಪಾಲರಾದ ಬಿ.ಎಂ. ಭಾರತಿ ಉದ್ಘಾಟಿಸಿದರು. ಡಾ. ಜೆ.ಪಿ. ಕೃಷ್ಣೇಗೌಡ, ಜಿ. ರಮೇಶ್, ಪುಷ್ಪರಾಜ್‌, ಗೋಪಿಕೃಷ್ಣ, ಎಚ್‌.ಆರ್‌. ಹರೀಶ್‌ ಇದ್ದರು.