ಸಾರಾಂಶ
ನಾಪೋಕ್ಲು ಲಯನ್ಸ್ ಕ್ಲಬ್‌ಗೆ ರಾಜ್ಯಪಾಲ ಡಾ. ಮೆಲ್ವಾನ್ ಡಿಸೋಜ ಭೇಟಿ ನೀಡಿದರು. ಲಿಯೋ ಸಂಸ್ಥೆಯ ಸದಸ್ಯರಿಗೆ ಮಾಹಿತಿ ನೀಡಿದರು.
ನಾಪೋಕ್ಲು: ಇಲ್ಲಿನ ಲಯನ್ಸ್ ಸಂಸ್ಥೆಯ ಸೇವಾ ಕಾರ್ಯ ಹಾಗೂ ಚಟುವಟಿಕೆಗಳು ಶ್ಲಾಘನೀಯವಾಗಿದೆ. ಸಂಸ್ಥೆಯ ಎಲ್ಲರೂ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಂಸ್ಥೆಯ ರಾಜ್ಯಪಾಲ ಡಾ. ಮೆಲ್ವಾನ್ ಡಿಸೋಜ ಹೇಳಿದರು.
ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರಾಜ್ಯಪಾಲರ ಭೇಟಿ ಕಾರ್ಯಕ್ರಮದ ಸಮಾರಂಭದಲ್ಲಿ ಅವರು ಮಾತನಾಡಿದರು. ಲಿಯೋ ಸಂಸ್ಥೆಯ ಸದಸ್ಯರು ಹಿರಿಯರ ಆದರ್ಶವನ್ನು ಮೈಗೂಡಿಸಿಕೊಂಡು ಸಾಧನೆ ಗುರಿ ಇರಿಸಿಕೊಂಡು ಉನ್ನತಿಯನ್ನು ಹೊಂದಬೇಕು ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಕನ್ನ೦ಬೀರ ಸುದೀ ತಿಮ್ಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಓಸ್ವಾಲ್ ಡಿಸೋಜಾ, ಕೋಶಾಧಿಕಾರಿ ಸುಧಾಕರ್ ಶೆಟ್ಟಿ, ಪ್ರಾಂತಿಯ ಅಧ್ಯಕ್ಷ ನವೀನ್ ಅಂಬೆಕಲ್ಲು, ವಲಯ ಅಧ್ಯಕ್ಷ ಬಾಲಕೃಷ್ಣ, ರೋಹಿತ್ ಸಿ .ಕೆ , ನಾಪೋಕ್ಲು ಲಯನ್ಸ್ ಕಾರ್ಯದರ್ಶಿ ಎಮ್ ಬಿ ಕುಟ್ಟಪ್ಖ, ಜಾಂಚಿ ಬನ್ಸಿ ಬೀಮಯ್ಯ ,ಲಿಯೋ ಸಂಸ್ಥೆಯ ಅಧ್ಯಕ್ಷ ಕೆ ಸಿ ಗೌರಮ್ಮ ಕೆ.ಸಿ., ಕಾರ್ಯದರ್ಶಿ ಮಹಮ್ಮದ್ ರಜಿನ್, ಖಜಾಂಚಿ ಮಾನ್ಯ ಕಾವೇರಮ್ಮ ಉಪಸ್ಥಿತರಿದ್ದರು. ರೇಖಾ ಪೊನ್ನಣ್ಣ ಪ್ರಾರ್ಥಿಸಿದರು. ಸುಧಿ ತಿಮ್ಮಯ್ಯ ಸ್ವಾಗತಿಸಿದರು. ಗೌರಮ್ಮ ಕೆ.ಸಿ. ವಂದಿಸಿದರು.