ಸಾರಾಂಶ
ದೇಶಾದ್ಯಂತ ೨೬ನೇ ಕಾರ್ಗಿಲ್ ವಿಜಯೋತ್ಸವವನ್ನು ಆಚರಣೆ ಮಾಡಲಾಗುತ್ತಿದ್ದು ಎಲ್ಲಾ ಸಂಘಸಂಸ್ಥೆಗಳ ಸದಸ್ಯರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಲ.ರಶ್ಮಿ ಸೋಮಯ್ಯ ಹೇಳಿದರು. ಮಾಜಿ ಜಿಪಂ ಸದಸ್ಯ ಅಮಿತ್ ಶೆಟ್ಟಿ ಮಾತನಾಡಿ, ೧೯೯೯ರಲ್ಲಿ ಪಾಕಿಸ್ತಾನದ ನರಿ ಬುದ್ಧಿಯ ವಿರುದ್ಧವಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಪಾಕಿಸ್ತಾನ ವಿರುದ್ಧ ಯುದ್ಧ ಘೋಷಣೆ ಮಾಡಿದರು. ಈ ಯುದ್ಧದಲ್ಲಿ ೫೫೦ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅವರೆಲ್ಲರಿಗೂ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾ ಪ್ರಾಣತ್ಯಾಗ ಮಾಡಿದ್ದರ ಪರಿಣಾಮ ಕಾರ್ಗಿಲ್ ಯುದ್ಧದ ವಿಜಯೋತ್ಸವವನ್ನು ನಾವೆಲ್ಲರೂ ಆಚರಿಸುತ್ತಿದ್ದೇವೆ ಎಂದರು.
ಬೇಲೂರು: ದೇಶಾದ್ಯಂತ ೨೬ನೇ ಕಾರ್ಗಿಲ್ ವಿಜಯೋತ್ಸವವನ್ನು ಆಚರಣೆ ಮಾಡಲಾಗುತ್ತಿದ್ದು ಎಲ್ಲಾ ಸಂಘಸಂಸ್ಥೆಗಳ ಸದಸ್ಯರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಲ.ರಶ್ಮಿ ಸೋಮಯ್ಯ ಹೇಳಿದರು.
ತಾಲೂಕಿನ ಅರೇಹಳ್ಳಿಯ ಮಿಲಿಟರಿ ಚಂದ್ರಶೇಖರ್ ವೃತ್ತದಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್‍ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಗಿಲ್‌ನಲ್ಲಿ ಪಾಕಿಸ್ತಾನದ ವಿರುದ್ಧವಾಗಿ ೬೦ ದಿನಗಳ ಕಾಲ ನಡೆದ ಯುದ್ಧದಲ್ಲಿ ಭಾರತ ಗೆದ್ದು ಬೀಗಿತು. ನಮ್ಮ ಯೋಧರು ನಮ್ಮ ಹೆಮ್ಮೆಯಾದ್ದರಿಂದ ಯೋಧರ ಶೌರ್‍ಯವನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದರು. ಮಾಜಿ ಜಿಪಂ ಸದಸ್ಯ ಅಮಿತ್ ಶೆಟ್ಟಿ ಮಾತನಾಡಿ, ೧೯೯೯ರಲ್ಲಿ ಪಾಕಿಸ್ತಾನದ ನರಿ ಬುದ್ಧಿಯ ವಿರುದ್ಧವಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಪಾಕಿಸ್ತಾನ ವಿರುದ್ಧ ಯುದ್ಧ ಘೋಷಣೆ ಮಾಡಿದರು. ಈ ಯುದ್ಧದಲ್ಲಿ ೫೫೦ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅವರೆಲ್ಲರಿಗೂ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾ ಪ್ರಾಣತ್ಯಾಗ ಮಾಡಿದ್ದರ ಪರಿಣಾಮ ಕಾರ್ಗಿಲ್ ಯುದ್ಧದ ವಿಜಯೋತ್ಸವವನ್ನು ನಾವೆಲ್ಲರೂ ಆಚರಿಸುತ್ತಿದ್ದೇವೆ ಎಂದರು.ವಲಯಾಧ್ಯಕ್ಷ ಲ.ಚಾಮರಾಜ್, ಪ್ರಾಂತೀಯ ಮಾಜಿ ಅಧ್ಯಕ್ಷ ಲ.ರಾಬಿ ಸೋಮಯ್ಯ, ಖಜಾಂಚಿ ಲ.ಸೌಜನ್ಯ, ಕಾರ್‍ಯದರ್ಶಿ ಲ.ಬೃಂದನ್, ಗ್ರಾಪಂ ಅಧ್ಯಕ್ಷ ಸಂಕಪ್ಪ, ನಿಂಗರಾಜು, ಶಶಿಕುಮಾರ್, ಮಹೇಶ್ ಶೆಟ್ಟಿ, ಗಂಗಣ್ಣ, ಮೋಹನ್ ಹಾಗೂ ಇನ್ನಿತರರು ಇದ್ದರು.