ಆದಿ ಉಡುಪಿ ಶಾಲೆಯಲ್ಲಿ ಲಯನ್ಸ್ ಪೀಸ್‌ ಪೋಸ್ಟರ್‌ ಕಾರ್ಯಕ್ರಮ

| Published : Nov 21 2025, 02:45 AM IST

ಆದಿ ಉಡುಪಿ ಶಾಲೆಯಲ್ಲಿ ಲಯನ್ಸ್ ಪೀಸ್‌ ಪೋಸ್ಟರ್‌ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಆದಿಉಡುಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಉಡುಪಿ ಬ್ಲಾಕ್ ವತಿಯಿಂದ ವಿದ್ಯಾರ್ಥಿಗಳಿಗೆ ಪೀಸ್ ಪೋಸ್ಟರ್ ಸ್ಪರ್ಧೆ ಏರ್ಪಡಿಸಲಾಯಿತು. ಸುಮಾರು 40 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದರು.

ಉಡುಪಿ: ಇಲ್ಲಿನ ಆದಿಉಡುಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಉಡುಪಿ ಬ್ಲಾಕ್ ವತಿಯಿಂದ ವಿದ್ಯಾರ್ಥಿಗಳಿಗೆ ಪೀಸ್ ಪೋಸ್ಟರ್ ಸ್ಪರ್ಧೆ ಏರ್ಪಡಿಸಲಾಯಿತು. ಸುಮಾರು 40 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದರು.

ವಿದ್ಯಾರ್ಥಿಗಳಾದ ಪಲ್ಲವಿ, ವರುಣ್ ಸಿ. ಕುಡ್ವ, ದೀಪಾ ಲಕ್ಷ್ಮಣ್ ಮನ್ನಿಕಟ್ಟಿ, ಅನುಶ್ರೀ ರಂಗನ್ನವರ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ, ಸಮಾಧಾನಕರ ಬಹುಮಾನಗಳನ್ನು ಪಡೆದರು.

ಲಯನ್ಸ್ ಕ್ಲಬ್ ಉಡುಪಿ ಸೌತ್ ನ ಅಧ್ಯಕ್ಷೆ ನೀತಾ ಪ್ರವೀಣ್, ಪೀಸ್ ಪೋಸ್ಟರ್ ಸಂಯೋಜಕಿ ಶ್ರೀಮತಿ ವಿಜಯ ಗೋಪಾಲ ಬಂಗೇರ, ಕ್ಯಾಬಿನೆಟ್ ಕಾರ್ಯದರ್ಶಿ ಶಾಲಿನಿ ಬಂಗೇರ, ಜತೆ ಕಾರ್ಯದರ್ಶಿ ವಿಜಯ ಬಾಯರಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಸ್ಪರ್ಧೆ ಆಯೋಜಿಸಿದರು.

ಈ ಕಾರ್ಯಕ್ರಮದಲ್ಲಿ ಆದಿ ಉಡುಪಿ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಟಿ. ಕೆ. ಗಣೇಶ್ ರಾವ್, ಜಂಟಿ ಕಾರ್ಯದರ್ಶಿ ಗುರುರಾಜ್ ರಾವ್, ಆಂಗ್ಲಮಾಧ್ಯಮ ಶಾಲಾ ಮುಖ್ಯಶಿಕ್ಷಕಿ ಮಧು ಜಿ. ರಾವ್, ಆಂಗ್ಲಮಾಧ್ಯಮ ಶಾಲಾ ಹಿರಿಯ ಶಿಕ್ಷಕ ಶಶಿಕುಮಾರ್ ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕಿ ಭಾಗ್ಯಶ್ರೀ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕಿ ಪ್ರಮೀಳಾ ವಂದಿಸಿದರು.