ಮಾಗಡಿ: ಮಾಗಡಿ ಮಂಡಲದ ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿಯನ್ನು ತಾಲೂಕು ಅಧ್ಯಕ್ಷ ಪ್ರಸಾದ್ ಗೌಡ ಬಿಡುಗಡೆ ಮಾಡಿದರು

ಮಾಗಡಿ: ಮಾಗಡಿ ಮಂಡಲದ ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿಯನ್ನು ತಾಲೂಕು ಅಧ್ಯಕ್ಷ ಪ್ರಸಾದ್ ಗೌಡ ಬಿಡುಗಡೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ಮಾತನಾಡಿದ ಅವರು, ಪಕ್ಷದ ಬಲವರ್ಧನೆಗೆ ಶ್ರಮಿಸುವ ಉತ್ಸಾಹಿ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಲಾಗಿದೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತದೆ. ತಮ್ಮನ್ನು ಮಾಗಡಿ ಮಂಡಲದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್ ಹಾಗೂ ಸಂಸದ ಡಾ. ಸಿ.ಎನ್.ಮಂಜುನಾಥ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಜನರ ಋಣ ತೀರಿಸಲು ತಾಲೂಕಾದ್ಯಂತ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು. ಹಳೆ ಮತ್ತು ಹೊಸ ನಾಯಕರನ್ನು ಒಗ್ಗೂಡಿಸಿಕೊಂಡು ಪ್ರತಿ ಬೂತ್ ಮಟ್ಟದಲ್ಲಿ ಪಕ್ಷ ಕಟ್ಟುವುದು ನಮ್ಮ ಗುರಿ. ಅಶ್ವತ್ಥನಾರಾಯಣ್ ಅವರು ಸಚಿವರಾಗಿದ್ದಾಗ ಈ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಮತ್ತು ಮೋದಿಯವರ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಲುಪಿಸುತ್ತೇವೆ ಎಂದು ಪ್ರಸಾದ್ ಗೌಡ ಹೇಳಿದರು.

ಉಚಿತ ನಿವೇಶನ:

ಬಡವರಿಗಾಗಿ ತಾವು ವೈಯಕ್ತಿಕವಾಗಿ ಖರೀದಿಸಿರುವ 10 ಎಕರೆ ಜಾಗದಲ್ಲಿ ಶೀಘ್ರದಲ್ಲೇ ಉಚಿತ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಸಂಸದರ ನಿಧಿ ಹಾಗೂ ವೈಯಕ್ತಿಕ ಸಹಕಾರದೊಂದಿಗೆ ಹೈಮಾಸ್ಟ್ ದೀಪಗಳು ಮತ್ತು ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಪದಾಧಿಕಾರಿಗಳ ಆಯ್ಕೆ: ತಾಲೂಕು ಬಿಜೆಪಿ ಉಪಾಧ್ಯಕ್ಷರಾಗಿ ಹನುಮಂತೇಗೌಡ (ತಿಪ್ಪಸಂದ್ರ), ರೇವಣ್ಣ (ಬಿಡದಿ), ಚನ್ನಬಸಯ್ಯ (ಉಡುವೆಗೆರೆ), ಮಂಜುನಾಥ್ (ಹುಳ್ಳೇನಹಳ್ಳಿ), ಲವ (ಪೂಜಾರಿಪಾಳ್ಯ), ಸಿದ್ದೇಗೌಡ (ಮೆಳ್ಳಹಳ್ಳಿ) ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಧರ್ (ಚಿಕ್ಕಕಲ್ಯಾ), ಜಯರಾಮ್ (ಮಾಗಡಿ ಪಟ್ಟಣ), ಕಾರ್ಯದರ್ಶಿಗಳಾಗಿ ಅರುಣ್ ಕುಮಾರ್ (ಕೂಟಗಲ್), ಸಿ.ಎಲ್ ಶ್ರೀನಿವಾಸ್ (ತಿಪ್ಪಸಂದ್ರ), ಪ್ರದೀಪ್ ಅಪ್ಪಿ (ಮಾಡಬಾಳ್ ಹೊಬಳಿ), ಶರತ್ (ಬಿಡದಿ), ಗಗನ್ ಸುಗ್ಗನಹಳ್ಳಿ, ಉಮೇಶ್ (ಬಿಡದಿ) ಅವರನ್ನು ಆಯ್ಕೆ ಮಾಡಲಾಯಿತು.

ಇದೇ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಘವೇಂದ್ರ ಬಿಜೆಪಿ ಮುಖಂಡರಾದ ರಾಜೇಶ್, ಶಶಿ ಸೇರಿದಂತೆ ಇತರರು ಭಾಗವಹಿಸಿದ್ದರು.

(ಫೊಟೋ ಕ್ಯಾಪ್ಷನ್‌)