ಪುರಾಣ ಪ್ರವಚನ ಕೇಳುವುದರಿಂದ ಮನಸ್ಸು ಶಾಂತವಾಗಿರುತ್ತದೆ-ಶಶಿಧರ ಶಾಸ್ತ್ರಿಗಳು

| Published : Apr 18 2025, 12:45 AM IST

ಪುರಾಣ ಪ್ರವಚನ ಕೇಳುವುದರಿಂದ ಮನಸ್ಸು ಶಾಂತವಾಗಿರುತ್ತದೆ-ಶಶಿಧರ ಶಾಸ್ತ್ರಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಜೀವಿಸುವ ಪ್ರತಿಯೊಂದು ಜೀವಿ ಪುರಾಣ ಪ್ರವಚನ ಕೇಳುವುದರಿಂದ ಮನಸ್ಸು ಶಾಂತವಾಗಿರುತ್ತದೆ. ನಾವು ಮಾಡುವ ಆ ದಿನದ ಕೆಲಸಗಳಿಗೆ ಉಲ್ಲಾಸ ನೀಡುತ್ತದೆ ಎಂದು ಕವಿ ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಶಶಿಧರ ಶಾಸ್ತ್ರಿಗಳು ಹಿರೇಮಠ ಹೇಳಿದರು.

ನರಗುಂದ: ಸಮಾಜದಲ್ಲಿ ಜೀವಿಸುವ ಪ್ರತಿಯೊಂದು ಜೀವಿ ಪುರಾಣ ಪ್ರವಚನ ಕೇಳುವುದರಿಂದ ಮನಸ್ಸು ಶಾಂತವಾಗಿರುತ್ತದೆ. ನಾವು ಮಾಡುವ ಆ ದಿನದ ಕೆಲಸಗಳಿಗೆ ಉಲ್ಲಾಸ ನೀಡುತ್ತದೆ ಎಂದು ಕವಿ ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಶಶಿಧರ ಶಾಸ್ತ್ರಿಗಳು ಹಿರೇಮಠ ಹೇಳಿದರು.

ಅವರು ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಶಾಖಾ ಮಠದ ಗದ್ದುಗೆ ಶಿಲಾ ಮಂಟಪ ಮತ್ತು ಗೋಪುರ ಲೋಕಾರ್ಪಣೆ ನಿಮಿತ್ತ 15ನೇ ದಿನದ ಬಸವ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣನವರು ಜ್ಞಾನದ ಸಂಪತ್ತಿಗಾಗಿ ಲಿಂಗ ಪೂಜೆಗೆ ಒತ್ತು ನೀಡಿ ತಾವು ಲಿಂಗ ಪೂಜೆ ಮಾಡಿ ತಮ್ಮ ಸಂಗಡವಿರುವ ಶರಣರಿಗೆ ಲಿಂಗ ಪೂಜೆಯಿಂದ ಆಗುವ ಜ್ಞಾನದ ಬಗ್ಗೆ ತಿಳಿಸಿ ಎಲ್ಲಾ ಶರಣರು ಲಿಂಗ ಪೂಜೆ ಮಾಡುವ ಹಾಗೆ ಮಾಡಿದ್ದರು ಎಂದರು.

ನಮ್ಮ ಸಮಾಜದಲ್ಲಿ ಪುರಾಣ ಪ್ರವಚನ ಮಾಡುವ ಉದ್ದೇಶ ಇಷ್ಟೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿ ಪ್ರವಚನ ಕೇಳಿ ದುಶ್ಚಟಗಳನ್ನು ಬಿಟ್ಟು ಒಳ್ಳೆಯದನ್ನು ಪ್ರವಚನದಿಂದ ತಿಳಿಯಬೇಕು. ಇಂದಿನ ಯುವಕರು ಆಧ್ಯಾತ್ಮದ ಕಡೆ ಗಮನ ನೀಡಿ ಬಸವಣ್ಣವರು ಹಾಗೂ ಶರಣರ ವಚನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಈ ಸಮಾಜ ಸುಧಾರಣೆಗೆ ಮುಂದಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಂತಲಿಂಗ ಶ್ರೀಗಳು, ಪ್ರಕಾಶಗೌಡ ತಿರಕನಗೌಡ್ರ, ವೀರಯ್ಯ ದೊಡ್ಡಮನಿ, ನಾಗನಗೌಡ ತಿಮ್ಮನಗೌಡ್ರ, ಶೆಲ್ಲಿಕೇರಿ, ದ್ಯಾಮಣ್ಣ ಕಾಡಪ್ಪನವರ, ಲಾಲಸಾಬ ಅರಗಂಜಿ, ಆರ್.ಐ. ನದಾಫ, ಹನಮಂತ ಕಾಡಪ್ಪನವರ, ಪ್ರಾಚಾರ್ಯ ಬಿ.ಆರ್. ಸಾಲಿಮಠ, ಇದ್ದರು.