ಸಾರಾಂಶ
ಗ್ರಾಮೀಣ ಭಾಗದಲ್ಲಿ ಬೇಸಿಗೆ ಪ್ರಾರಂಭವಾಗುತ್ತಿದ್ದ೦ತೆ ಕೃಷಿ ಚಟುವಟಿಕೆಗಳು ಪೂರ್ಣಗೊಂಡು ರೈತರಿಗೆ ವಿಶ್ರಾಂತಿ ದೊರೆಹಯುತ್ತದೆ.
ಕುರುಗೋಡು; ಪುರಾಣ ಪ್ರವಚನ ಶ್ರವಣದಿಂದ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಪ್ರಚಚನಕಾರ ಕೆ.ಮೌನೇಶ್ ಅಭಿಪ್ರಾಯಪಟ್ಟರು.ತಾಲೂಕಿನ ಬಾದನಹಟ್ಟಿ ಗ್ರಾಮದ ಮಾರೆಮ್ಮದೇವಿ ದೇವಸ್ಥಾನದಲ್ಲಿ ಮೂರು ದಿನಗಳಿಂದ ಜರುಗುತ್ತಿರುವ ಜ.ಮೌನೇಶ್ವರ ಸ್ವಾಮಿ ಪುರಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಬೇಸಿಗೆ ಪ್ರಾರಂಭವಾಗುತ್ತಿದ್ದ೦ತೆ ಕೃಷಿ ಚಟುವಟಿಕೆಗಳು ಪೂರ್ಣಗೊಂಡು ರೈತರಿಗೆ ವಿಶ್ರಾಂತಿ ದೊರೆಹಯುತ್ತದೆ. ಅವರು ಪುರಾಣ ಪುಣ್ಯಕಥೆಗಳ ಶ್ರವಣದಲ್ಲಿ ಭಾಗವಹಿಸಿ ಮಾನಸಿಕ ಮತ್ತು ದೈಹಿಕ ಬೇಸರವನ್ನು ಕಳೆದುಕೊಳ್ಳುತ್ತಾರೆ. ಬೇಸಿಗೆಯಲ್ಲಿ ಎಲ್ಲಕಡೆ ಪುರಾಣ, ಪುಣ್ಯಕಥೆಗಳನ್ನು ಆಯೋಜಿಸುವ ಅಗತ್ಯವಿದೆ ಎಂದರು.ಎಮ್ಮಿಗನೂರು ಹಂಪಿ ಸಾವಿರ ದೇವರು ಗುರುಮಹಾಂತಿನ ಮಠದ ವಾಮದೇವ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು.
ಆನೆಗುಂದಿ ಸಿಂಹಾಸನ ಸರಸ್ವತಿ ಮೂಲಪೀಠ ವಿಶ್ವಕರ್ಮ ಜ.ಕಾಳಹಸ್ತೇಂದ್ರ ಶ್ರೀ, ಮೇಲುಮಠದ ಷಡಾಕ್ಷರಿ ಶ್ರೀ, ಕೋಟೆಕಲ್ ನರಸಿಂಹಮೂರ್ತಿ ಶ್ರೀ, ಫಕೀರೇಶ್ವರ ಇಟಗಿ ತಾತನವರು, ಕುರುಗೋಡಿನ ಯಲ್ಲಮ್ಮ ತಾಯಿ, ಮಾರೆಮ್ಮ ಗುಡಿ ಅರ್ಚಕ ಯಮಕೋಬಾಚಾರಿ ಇದ್ದರು.ಕೆ.ಮೌನೇಶ್ ಆಚಾರ್ ಪುರಾಣ ಪ್ರವಚನ ನೀಡಿದರು. ಕೆ.ಪಿ. ಮಂಜುನಾಥ ಪುರಾಣ ಪಠಣ ಮಾಡಿದರು. ಎಚ್.ಕರಿಬಸವನ ಗೌಡ ಮತ್ತು ನಾಗೇಶ್ ಸಂಗೀತ ಸೇವೆ ಸಲ್ಲಿಸಿದರು. ಎಂ.ಪಾಂಡುರ೦ಗ ತಬಲಾ ಸಾಥ್ ನೀಡಿದರು.
ಕುರುಗೋಡು ತಾಲೂಕು ಸಮೀಪದ ಬಾದನಹಟ್ಟಿ ಗ್ರಾಮದ ಮಾರೆಮ್ಮದೇವಿ ದೇವಸ್ಥಾನದಲ್ಲಿ ಮೌನೇಶ್ವರ ಶ್ರೀ ಪುರಾಣ ಪ್ರವಚನ ನಡೆಯಿತು.