ಯುವಜನತೆಯಲ್ಲಿ ಸಾಹಿತ್ಯ ರಚನೆ ಅಭಿರುಚಿ ಕಡಿಮೆ ಆಗುತ್ತಿದೆ-ಡಾ. ವಿಜಯಲಕ್ಷ್ಮಿ

| Published : Feb 12 2025, 12:32 AM IST

ಯುವಜನತೆಯಲ್ಲಿ ಸಾಹಿತ್ಯ ರಚನೆ ಅಭಿರುಚಿ ಕಡಿಮೆ ಆಗುತ್ತಿದೆ-ಡಾ. ವಿಜಯಲಕ್ಷ್ಮಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಯುವ ಜನತೆಯಲ್ಲಿ ಸಾಹಿತ್ಯ ರಚನೆ ಅಭಿರುಚಿ ಕಡಿಮೆ ಆಗುತ್ತಿದೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ವಿಜಯಲಕ್ಷ್ಮಿ ತೀರ್ಲಾಪುರ ಅವರು ಹೇಳಿದರು.

ಶಿಗ್ಗಾಂವಿ: ಇಂದಿನ ಯುವ ಜನತೆಯಲ್ಲಿ ಸಾಹಿತ್ಯ ರಚನೆ ಅಭಿರುಚಿ ಕಡಿಮೆ ಆಗುತ್ತಿದೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ವಿಜಯಲಕ್ಷ್ಮಿ ತೀರ್ಲಾಪುರ ಅವರು ಹೇಳಿದರು.

ಶಿಗ್ಗಾಂವಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ೫ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

ಶಿಗ್ಗಾಂವಿ ತಾಲೂಕು ಅನೇಕ ಮಹನೀಯರಿಗೆ ಜನ್ಮ ನೀಡಿದ ಪುಣ್ಯಭೂಮಿ. ಸಾಮರಸ್ಯದ ಪ್ರತೀಕವಾದ ಕರ್ನಾಟಕದ ಕಬೀರ ಎನಿಸಿಕೊಂಡಿರುವ ಶಿಶುವಿನಹಾಳ ಶರೀಫರು ಬಾಡದ ಕನಕದಾಸರಾಂತಹ ಮಹಾನ ದಾರ್ಶನಿಕರು ನಡೆದಾಡಿದ ನೆಲವಾಗಿದೆ ಎಂದರು.

ಶಿಗ್ಗಾಂವಿ ತಾಲೂಕಿನಲ್ಲಿ ಯಾವುದೇ ಜಾತಿ ಧರ್ಮದ ಭೇದವಿಲ್ಲ, ಎಲ್ಲರೂ ಸಮಾನತೆಯಿಂದ ಬಾಳುತ್ತಿದ್ದಾರೆ. ಇಲ್ಲಿ ಯಾವತ್ತೂ ಕಲೆ, ಸಾಹಿತ್ಯ ಸಂಸ್ಕೃತಿಯ ಚಟುವಟಿಕೆಗಳು ಸದಾ ನಡೆಯುತ್ತಿರುತ್ತವೆ. ನಮ್ಮ ಜನಾ ಯಾವತ್ತೂ ಸಾಹಿತ್ಯಕ್ಕೆ ಹೆಚ್ಚಿನ ಸ್ಥಾನಮಾನ ಕೊಡುತ್ತ ಬಂದಿದ್ದಾರೆ. ಶಿಗ್ಗಾಂವಿಯ ತಾಲೂಕು ಸಾಹಿತ್ಯ ಸಮ್ಮೇಳನ ಯಾವ ರಾಜ್ಯ ಸಮ್ಮೇಳನಕ್ಕೂ ಕಡಿಮೆ ಇಲ್ಲ, ಸಮ್ಮೇಳನದ ಸರ್ವಧ್ಯಕ್ಷರನ್ನಾಗಿ ಮಾಡಿ ನನ್ನ ಜವಾಬ್ದಾರಿ ಹೆಚ್ಚಿಸಿದ್ದಾರೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಸದ್ಗುರು ಸಮರ್ಥ ಡಾ.ಎ.ಸಿ.ವಾಲಿ ಮಹಾರಾಜರು ನೆರವೇರಿಸಿದರು. ಕನ್ನಡ ಮನಸುಗಳೆಲ್ಲ ಸೇರಿ ಕನ್ನಡ ಕಂಪನ್ನು ಪಸರಿಸಿ ಎಲ್ಲರೂ ಕನ್ನಡ ನಾಡು ನುಡಿಯ ಬಗ್ಗೆ ತಿಳಿದುಕೊಳ್ಳುವ ಕೆಲಸ ಮಾಡಿರುವುದು ಸಂತೋಷ ತಂದಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ತನ್ನದೇ ಇತಿಹಾಸವಿದೆ. ಹಾಗಾಗಿ ಕನ್ನಡ ಭಾಷೆ ಬಗ್ಗೆ ನಾವು ತಿಳಿದುಕೊಳ್ಳುವ ಅವಶ್ಯಶಕತೆ ಇದೆ ಎಂದರು.

ಸಾನಿಧ್ಯವನ್ನು ವಿರಕ್ತಮಠದ ಸಂಗನಬವ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಯಾಸೀಅಹ್ಮದ್‌ಖಾನ್ ಪಠಾಣ ಅವರು ಮಾತನಾಡಿ, ಶಿಗ್ಗಾಂವಿ ತಾಲೂಕಿಗೆ ತನ್ನದೇ ಆದ ಇತಿಹಾಸವಿದೆ. ಇಲ್ಲಿ ಹುಟ್ಟಿದಂತ ನಾವೆಲ್ಲರೂ ಪುಣ್ಯವಂತರು. ವಿಶೇಷವಾಗಿ ಇಂದು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಸಮ್ಮೇಳನವು ಸಾಕಷ್ಟು ಜನರಿಗೆ ಮಾದರಿಯಾಗಿದೆ. ಇಂದು ನಮ್ಮ ಭಾಷೆಯ ಬಗ್ಗೆ ಅಭಿಮಾನ ಬರಬೇಕಾದರೆ ನಮ್ಮ ಇತಿಹಾಸವನ್ನು ನಾವು ತಿಳಿಯಬೇಕು.ಇಂದು ನಾವು ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದೇವೆ. ಪಕ್ಕದ ತಮಿಳನಾಡು, ಕೇರಳ ರಾಜ್ಯಗಳಲ್ಲಿ ಇರುವಂತಹ ಭಾಷಾಭಿಮಾನ ನಾವು ಕಂಡಿಲ್ಲ. ಹಾಗೆಯೇ ನಾವು ನಮ್ಮ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹೊಂದಬೇಕು. ನಮ್ಮ ತಾಲೂಕಿನ ಶಿಶುವಿನಹಾಳ ಶರೀಫರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಸೇರಿದಂತೆ ಹಲವಾರು ಗಣ್ಯರು ಮಾತನಾಡಿದರು.ಶಿಗ್ಗಾಂವಿ ಪುರಸಭೆಯ ಅಧ್ಯಕ್ಷ ಸಿದ್ಧಾರ್ಥ ಗೌಡ ಹೆಚ್. ಪಾಟೀಲ, ಕೆಎಸ್‌ಆರ್‌ಪಿ ಕಮಾಡೆಂಟ್ ಎನ್.ಬಿ. ಮೇಳ್ಳಾಗಟ್ಟಿ, ಬಂಕಾಪೂರ ಪುರಸಭೆಯ ಅಧ್ಯಕ್ಷೆ ಮಮತಾ ಮಾಗಿ, ಉಪಾಧ್ಯಕ್ಷ ಆಂಜನೇಯ ಗುಡಗೇರಿ, ತಹಸೀಲ್ದಾರ್ ರವಿ ಕೊರವರ, ಬಿ.ಎಫ್. ಯಲಿಗಾರ, ಸುಭಾಸ ಚವ್ಹಾಣ, ವಸಂತಾ ಬಾಗೂರ, ಬಿ.ಸಿ. ಪಾಟೀಲ, ಶಿವಾನಂದ ಮ್ಯಾಗೇರಿ, ಅರುಣ ಹುಡೇದಗೌಡ್ರ, ಎಫ್.ಬಿ.ಗಂಜಿಗಟ್ಟಿ, ಸಂಜನಾ ರಾಯ್ಕರ್ , ಸುಲೇಮಾನ ಖಾಜೇಖಾನ, ಬಸವರಾಜ ಬಸರೀಕಟ್ಟಿ, ಎಸ್.ಎನ್. ಮುಗುಳಿ, ಲಲಿತಾ ಹಿರೇಮಠ, ಬಸವರಾಜ ಹೆಸರೂರ, ವಾಯ್.ಬಿ.ಆಲದಕಟ್ಟಿ, ಐ.ಎಲ್.ಭೂಸಲೆ ಸೇರಿದಂತೆ ಹಲವಾರು ಕನ್ನಡಪರ ಮುಖಂಡರುಗಳು ಇದ್ದರು. ಪ್ರಾಸ್ತಾವಿಕವಾಗಿ ಕಸಾಪ ತಾಲೂಕು ಅಧ್ಯಕ್ಷ ನಾಗಪ್ಪ ಬೆಂತೂರ ಮಾತನಾಡಿದರು.ನಂತರ ನಡೆದ ಗೋಷ್ಠಿಯಲ್ಲಿ ಇಂದುದರ ಮುತ್ತಳ್ಳಿ ನಮ್ಮ ಸಂವಿಧಾನ ನಮ್ಮ ಹೆಮ್ಮೆ ಎನ್ನುವ ವಿಷಯದ ಕುರಿತು ಮಾತನಾಡಿ, ನಮ್ಮ ಸಂವಿಧಾನ ಇಂದು ಸರ್ವರಿಗೂ ಸಮಾನತೆಯ ದಾರಿ ತೋರಿಸಿದ ಮಾರ್ಗವಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಮಾತನಾಡಿ, ಮಕ್ಕಳಿಗೆ ಮೂಢನಂಬಿಕೆ ಬಿಟ್ಟು ವೈಚಾರಿಕ ಪ್ರಜ್ಞೆಯನ್ನು ಬೆಳೆಸಬೇಕು ಎಂದರು.