ಸಾಹಿತ್ಯದ ಮೂಲ ಜನಪದ: ನಟರಾಜ್‌ ಹುಳಿಯಾರ್‌

| Published : Feb 04 2024, 01:35 AM IST

ಸಾಹಿತ್ಯದ ಮೂಲ ಜನಪದ: ನಟರಾಜ್‌ ಹುಳಿಯಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತ್ಯದ ಮೂಲ ಬೇರು ಜನಪದವೇ. ಇಂತಹ ಜನಪದವು ಬಾಯಿಂದ ಬಾಯಿಯ ಮೂಲಕ ಸಾಗಿಬಂದಿದ್ದು, ಇಂತಹ ಜನಪದವು ಎಲ್ಲಾ ಕವಿಗಳ ಕಾವ್ಯ ಗ್ರಂಥಗಳಿಗೆ ಆಧಾರವಾಗಿದೆ ಎಂದು ಲೇಖಕ ನಟರಾಜ್ ಹುಳಿಯಾರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹುಳಿಯಾರು

ಸಾಹಿತ್ಯದ ಮೂಲ ಬೇರು ಜನಪದವೇ. ಇಂತಹ ಜನಪದವು ಬಾಯಿಂದ ಬಾಯಿಯ ಮೂಲಕ ಸಾಗಿಬಂದಿದ್ದು, ಇಂತಹ ಜನಪದವು ಎಲ್ಲಾ ಕವಿಗಳ ಕಾವ್ಯ ಗ್ರಂಥಗಳಿಗೆ ಆಧಾರವಾಗಿದೆ ಎಂದು ಲೇಖಕ ನಟರಾಜ್ ಹುಳಿಯಾರ್‌ ತಿಳಿಸಿದರು.

ಹುಳಿಯಾರು ಪಟ್ಟಣದ ಎಂಪಿಎಸ್ ಶಾಲಾ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ವ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಸಾಹಿತ್ಯದ ಮೂಲ ಜನಪದ ಎಂದರು.

ಈ ಪ್ರದೇಶವು ಮೊದಲಿನಿಂದಲೂ ಸಾಮರಸ್ಯದ ನೆಲೆಬೀಡಾಗಿದ್ದು, ಇಂದಿಗೂ ಸಾಮರಸ್ಯವನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ. ಇತ್ತೀಚಿನ ಯುವ ಪೀಳಿಗೆ ಮೊಬೈಲ್ ಬಳಕೆಯನ್ನು ಅತಿಯಾಗಿಸಿಕೊಂಡಿದ್ದು, ಅವರ ಬಾಳನ್ನು ಕಗ್ಗತ್ತಲೆಗೆ ದೂಡುವಂತಾಗಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಿದಾಗ ಮಕ್ಕಳನ್ನು ಮೊಬೈಲ್ ಗೀಳಿನಿಂದ ಸಂರಕ್ಷಿಸಿ ಅವರನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಬಹುದಾಗಿದೆ ಎಂದರು.

ಜಿಲ್ಲಾ ಎಂಪಿಎಸ್ ಉಪ ನಿರ್ದೇಶಕ ಡಾಕ್ಟರ್‌ ರಾಜಣ್ಣ ಉಪಲಿಕನಹಳ್ಳಿ ಸಮ್ಮೇಳನದ ಪೂರ್ಣವಲೋಕನ ಕುರಿತು ಮಾತನಾಡಿ, ಸಮ್ಮೇಳನದಲ್ಲಿ ಆಯೋಜನೆಗೊಂಡಿದ್ದ ಗೋಷ್ಠಿಗಳು ಜನರನ್ನು ತಮ್ಮತ್ತ ಸೆಳೆದಿವೆ. ಹಳ್ಳಿ ಬದುಕು, ಸವಾಲು ಸಾಧ್ಯತೆ, ಬದುಕು- ಬಯಲು, ಕಲೆ, ಸಾಹಿತ್ಯ ಇವಳ ಕುರಿತು ಗೋಷ್ಠಿಗಳು ಜನಸಾಮಾನ್ಯರ ಬದುಕಿನ ಭಾಗಗಳಾಗಿವೆ. ಇದರ ಜೊತೆಗೆ ಚಿಣ್ಣರ ಕಾರ್ಯಕ್ರಮಗಳು ಚೆನ್ನಾಗಿ ಮೂಡಿ ಬಂದಿದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣವಾಗಿವೆ ವಿವರಿಸಿದವರು.

ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ಕೃಷ್ಣಾಬಾಯಿ ಹಾಗಲವಾಡಿ ಮಾತನಾಡಿ, ಹುಳಿಯಾರು ಭಾಗದ ಜನರ ಸಹಾಯ ಸಹಕಾರ ಹಾಗೂ ಮೇಲಿನ ಗೌರವ ಆಧರಣೆ ನನಗೆ ಮಾತು ಬರದಂತೆ ಮಾಡಿದೆ. ಕನ್ನಡಿಗರಿಗೆ ನೀಡಿರುವ ಸತ್ಕಾರ ನನ್ನ ಜನ್ಮದಲ್ಲಿಯೂ ಮರೆಯಲಾಗದು ಎಂದರು.

ತಾಲೂಕು ಕಸಾಪ ಘಟಕದ ಅಧ್ಯಕ್ಷ ಎಂಎಸ್ ರವಿಕುಮಾರ್ ಕಟ್ಟೆಮನೆ, ಕನ್ನಡದ ಪೂರ್ವ ಅಧ್ಯಕ್ಷ ಎಂಬಿ ನಾಗರಾಜ್ ರಾವ್, ಎಚ್.ಕೆ. ರಾಮಯ್ಯ, ಎಚ್.ಎಸ್. ಶಿವಲಿಂಗಯ್ಯ, ಹೋಬಳಿ ಘಟಕದ ಅಧ್ಯಕ್ಷ ಟಿ. ನಾರಾಯಣಪ್ಪ, ಬಿಒಸಿಎಸ್ ಕಾಂತರಾಜು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಮಶಿವಮೂರ್ತಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್ ಮುಂತಾದವರು ಹಾಜರಿದ್ದರು.ಪೋಟೊ

ಪಟ್ಟಣದ ಎಂಪಿಎಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಲೇಖಕ ನಟರಾಜ್ ಹುಳಿಯಾರ್‌ ಮಾತನಾಡಿದರು.