ಕರಿಘಟ್ಟದಲ್ಲಿ ವಿದ್ಯಾರ್ಥಿಗಳಿಂದ ಸಾಹಿತ್ಯ ಓದು ಮತ್ತು ಸಂವಾದ ಕಾರ್ಯಕ್ರಮ

| Published : Jul 15 2024, 01:46 AM IST

ಕರಿಘಟ್ಟದಲ್ಲಿ ವಿದ್ಯಾರ್ಥಿಗಳಿಂದ ಸಾಹಿತ್ಯ ಓದು ಮತ್ತು ಸಂವಾದ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಪುರಾಣ ಪ್ರಸಿದ್ಧ ಹಾಗೂ ಪ್ರಾಕೃತಿಕ ರಮ್ಯ ತಾಣ ಕರಿಘಟ್ಟದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಕ್ರಿಯಾಶೀಲ ಸಂಶೋಧಕರ ಬಳಗದಿಂದ 22ನೇ ಸಾಹಿತ್ಯ ವಿಚಾರಗಳ ಓದು, ಚರ್ಚೆ ನಡೆಯಿತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಪುರಾಣ ಪ್ರಸಿದ್ಧ ಹಾಗೂ ಪ್ರಾಕೃತಿಕ ರಮ್ಯ ತಾಣ ಕರಿಘಟ್ಟದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಕ್ರಿಯಾಶೀಲ ಸಂಶೋಧಕರ ಬಳಗದಿಂದ 22ನೇ ಸಾಹಿತ್ಯ ವಿಚಾರಗಳ ಓದು, ಚರ್ಚೆ ನಡೆಯಿತು.

ಸಾಹಿತ್ಯ ಸಂವಾದದಲ್ಲಿ ಕನ್ನಡದ ಖ್ಯಾತ ನಿರೂಪಕಿ ಅಪರ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಪ್ರಕೃತಿ ಕುರಿತು ಕನ್ನಡದ ಪ್ರಮುಖ ಕವಿಗಳು ರಚಿಸಿರುವ ವಿವಿಧ ಕವಿತೆಗಳನ್ನು ಸಂಶೋಧನಾ ವಿದ್ಯಾರ್ಥಿಗಳು ವಾಚನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಹೇಗೆ ಸಮಾಜಕ್ಕೆ ಪೂರಕವಾಗಿದೆ ಎಂಬುದರ ಕುರಿತು ಚರ್ಚೆ ನಡೆಸಲಾಯಿತು.

ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವ ಮೂಲಕ ಘನ ತ್ಯಾಜ್ಯ ವಸ್ತುಗಳನ್ನು ಆಯ್ದು ಸಂಗ್ರಹಿಸಿ ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡಲಾಯಿತು. ಸಂಶೋಧಕರ ಈ ನವೀನ ಪ್ರಯತ್ನಕ್ಕೆ ಸ್ಥಳೀಯರಿಂದ ಮೆಚ್ಚುಗೆಯೂ ವ್ಯಕ್ತವಾಯಿತು.

ಈ ವೇಳೆ ಯುವ ಸಂಶೋಧಕರಾದ ಚಹುಬಿ ಚಂದ್ರು, ಸಂಜು ತ್ಯಾಗರಾಜ, ಮಧು ಪಾಪಣ್ಣ, ಜಯ ಬಿ., ಅರುಣ್ ಚೋಕನಹಳ್ಳಿ, ಪ್ರಸಾದ ಅರಳಿಪುರ, ರಾಧಾ, ಪ್ರಸನ್ನ, ಸಿದ್ದೇಶ್, ಸಂತೋಷ್ ಕುಮಾರ್, ಮನು ಕುಮಾರ್, ಪ್ರೇಮ್ ಕುಮಾರ್ ಉಪಸ್ಥಿತರಿದ್ದರು.

4 ವರ್ಷದ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕೆ ಮನವಿ

ಹತ್ತನೇ ತರಗತಿ ಉತ್ತೀರ್ಣರಾದವರಿಗೆ ಅವಕಾಶ,

ಸರ್ಕಾರಿ ಉಪಕರಣಾಗಾರ ತರಬೇತಿ ಕೇಂದ್ರದಲ್ಲಿ ಪ್ರವೇಶಕನ್ನಡಪ್ರಭ ವಾರ್ತೆ ಮಂಡ್ಯ

ಮದ್ದೂರು ತಾಲೂಕು ಸೋಮನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೋಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್ 4 ವರ್ಷದ ಡಿಪ್ಲೋಮಾ ಕೋರ್ಸ್‌ಗೆ 10ನೇ ತರಗತಿ ಉತ್ತೀರ್ಣರಾದವರಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು ಎಂದು ಪ್ರಾಂಶುಪಾಲ ಶಿವಕುಮಾರ್ ತಿಳಿಸಿದರು.ಕಳೆದ 2000ರಲ್ಲಿ ಪ್ರಾರಂಭವಾದ ಈ ಕೇಂದ್ರದಿಂದ ಈವರೆಗೆ ಸುಮಾರು 800 ವಿದ್ಯಾರ್ಥಿಗಳು ತರಬೇತಿ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದಲ್ಲದೆ, ವಿದೇಶಗಳಲ್ಲಿ ಮತ್ತು ಸ್ವಂತ ಉದ್ದಿಮೆಗಳನ್ನು ಪ್ರಾರಂಭಿಸಿ ತಮ್ಮ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದರು.

2024-25ನೇ ಸಾಲಿನಲ್ಲಿ ಶೇ.100ರಷ್ಟು ಉದ್ಯೋಗಾವಕಾಶವುಳ್ಳ ಡಿಪ್ಲೋಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್ ಕೋರ್ಸ್‌ಗೆ ನೇರ ಪ್ರವೇಶಾತಿ ಲಭ್ಯವಿದ್ದು, 10ನೇ ತರಗತಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣದವರಿಗೂ ಪ್ರವೇಶ ನೀಡಲಾಗುವುದು. ಕೇವಲ 10 ಸ್ಥಾನಗಳಿಗೆ ಮಾತ್ರ ಪ್ರವೇಶ ಲಭ್ಯವಿದೆ. ಹೆಚ್ಚಿನ ವಿದ್ಯಾರ್ಥಿಗಳು ಬಂದಲ್ಲಿ ರಾಜ್ಯದಲ್ಲಿರುವ 32 ಕೇಂದ್ರಗಳಲ್ಲಿ ಪ್ರವೇಶ ಕಲ್ಪಿಸಿ, ನಮ್ಮ ಕೇಂದ್ರದಲ್ಲೇ ವ್ಯಾಸಂಗಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.ಯಾವುದೇ ಜಾತಿ, ಧರ್ಮದವರಿರಲಿ, ಕುಟುಂಬದ ವರಮಾನದ ಆಧಾರದ ಮೇಲೆ ಶುಲ್ಕ ಪೂರ್ತಿ ವಾಪಸ್ಸು ಪಡೆಯಬಹುದಾಗಿದೆ. ಮೊದಲ ವರ್ಷದಲ್ಲಿ 33 ಸಾವಿರ ರು., ದ್ವಿತೀಯ ವರ್ಷದಲ್ಲಿ 24 ಸಾವಿರ ರು., ತೃತೀಯ 24 ಸಾವಿರ ರು. ಹಾಗೂ ನಾಲ್ಕನೇ ವರ್ಷದಲ್ಲಿ 12 ಸಾವಿರ ರು.ಶುಲ್ಕವಿರುತ್ತದೆ. ಮೂರು ವರ್ಷಗಳು ಮಾತ್ರ ತರಗತಿಗಳು ನಡೆಯುತ್ತವೆ. ನಾಲ್ಕನೇ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಿಗೆ ಕಳುಹಿಸಿ ವಿದ್ಯಾರ್ಥಿ ವೇತನದೊಂದಿಗೆ ಪ್ರಾಯೋಗಿಕ ತರಬೇತಿ ಕೊಡಿಸುವ ವ್ಯವಸ್ಥೆಯನ್ನೂ ನಮ್ಮ ಕೇಂದ್ರ ಮಾಡುತ್ತಿದೆ ಎಂದು ವಿವರಿಸಿದರು.

ಸಧ್ಯ ನಮ್ಮ ಕೇಂದ್ರದಲ್ಲಿ ಒಂದು ವಿಷಯಕ್ಕೆ ಮಾತ್ರ ಪ್ರವೇಶಾತಿ ಮಾಡಿಕೊಳ್ಳುತ್ತಿದ್ದು, ಮುಂದಿನ ವರ್ಷಗಳಲ್ಲಿ ಮೂರ್‍ನಾಲ್ಕು ವಿಷಯಗಳ ತರಬೇತಿ ಪ್ರಾರಂಭಕ್ಕೆ ಅನುಮತಿ ಕೇಳಲಾಗಿದ್ದು, ಅನುಮತಿ ಸಿಕ್ಕ ನಂತರ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.ಸುಮಾರು 5 ಎಕರೆ ವಿಸ್ತಾರ ಪ್ರದೇಶದಲ್ಲಿ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿನಿಲಯ, ಪ್ರಯೋಗಾಲ, ಸುಸಜ್ಜಿತ ಕಟ್ಟಡದ ವ್ಯವಸ್ಥೆ ನಮ್ಮಲ್ಲಿದೆ ಎಂದು ಹೇಳಿದರು. ಹೆಚ್ಚಿನ ಮಾಹಿಗಾಗಿ ಮೊ-6362883923, 9731994245, 9844356441 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಹೇಳಿದರು.