ಸಾರಾಂಶ
ಸಮಾಜ ಸುಧಾರಣೆಯೊಂದಿಗೆ ಅಕ್ಷರಕ್ರಾಂತಿ ಮಾಡಿ, ಸಮಾಜದ ಮೂಢ ನಂಬಿಕೆಗಳ ವಿರುದ್ಧ ಸಿಡಿದೆದ್ದು ಹೋರಾಡಿದ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಎಂದು ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ರಜನಿ ಪಾಟೀಲ ಹೇಳಿದರು.
ಗದಗ: ಸಮಾಜ ಸುಧಾರಣೆಯೊಂದಿಗೆ ಅಕ್ಷರಕ್ರಾಂತಿ ಮಾಡಿ, ಸಮಾಜದ ಮೂಢ ನಂಬಿಕೆಗಳ ವಿರುದ್ಧ ಸಿಡಿದೆದ್ದು ಹೋರಾಡಿದ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಎಂದು ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ರಜನಿ ಪಾಟೀಲ ಹೇಳಿದರು.
ಅವರು ನಗರದಲ್ಲಿ ಇನ್ನರವೀಲ್ ಕ್ಲಬ್‌ದಿಂದ ಏರ್ಪಡಿಸಿದ್ದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ, ಅಂಗವಿಕಲ ಮಕ್ಕಳ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಶಿಕ್ಷಕರನ್ನು ಸನ್ಮಾನ ಹಾಗೂ ನೇಶನ್ ಬಿಲ್ಡರ್ಸ್ ಆವಾರ್ಡ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶೇಷ ಚೇತನ ಮಕ್ಕಳ ಬಗೆಗೆ ನಾವೆಲ್ಲರೂ ಚಿಂತಿಸಬೇಕು. ಆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಎಲ್ಲರೂ ಅಭಿನಂದನಾರ್ಹರು ಎಂದರು.ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ಸ್ವಯಂ ಸೇವಾ ಸಂಸ್ಥೆಗಳು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಮೂಲಕ ಶಿಕ್ಷಕರನ್ನು ಗೌರವಿಸುತ್ತಿರುವುದಕ್ಕೆ ಅಭಿನಂದನೆ ಎಂದರು
ಈ ವೇಳೆ ಬಸವರಾಜ ಮಟ್ಟಿ, ವಿ.ಕೆ. ಮಾಳಗಿ, ವಾಣಿಶ್ರೀ ಆಲೂರ, ಎಸ್.ಆರ್. ತಡಸಿ, ಲಲಿತಾ ಪಾಟೀಲ, ರೇಣುಕಾ ಪಾಟೀಲ, ಸುನೀತಾ ತಿಮ್ಮನಗೌಡ್ರ, ಸುಮಿತ್ರಾ ಉಪ್ಪಿನ, ಸುರೇಖಾ ಮರಕುಂಬಿ ಹಾಗೂ ಶಶಿಧರ ಚಳಗೇರಿ ಅವರಿಗೆ ನೇಶನ್ ಬಿಲ್ಡರ್ ಆವಾರ್ಡ್ ನೀಡಿ ಗೌರವಿಸಲಾಯಿತು. ವಿಶೇಷ ಚೇತನ ಮಕ್ಕಳ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಕವಿತಾ ಬೇಲೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರುಡಿ ಹಾಗೂ ಸಮನ್ವಯಾಧಿಕಾರಿ ಎಚ್.ಎಸ್. ಫಾರೂಖಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ರೋಟರಿ ಸೆಂಟ್ರಲ್ ಕ್ಲಬ್ ಅಧ್ಯಕ್ಷ ವಿಜಯಕುಮಾರ ಹಿರೇಮಠ, ಸುನೀತಾ ಅಂಗಡಿ, ಮಂಜುಳಾ ಹಲಗತ್ತಿ, ಕ್ಲಬ್ಬಿನ ಸದಸ್ಯರು ಇದ್ದರು. ವಿದ್ಯಾ ಗಂಜಿಹಾಳ ಪ್ರಾರ್ಥಿಸಿದರು. ಹೇಮಾ ಪೊಂಗಾಲಿಯಾ ನಿರೂಪಿಸಿದರು. ಜ್ಯೋತಿ ಭರಮಗೌಡ್ರ ಪರಿಚಯಿಸಿದರು. ಮೀನಾಕ್ಷಿ ಸಜ್ಜನರ ನಿರ್ವಹಿಸಿದರು. ಸುಶೀಲಾ ಭಾಗಮಾರ ವಂದಿಸಿದರು.