ಸಾರಾಂಶ
ನಾರಾಯಣ ಕೃಷ್ಣ ಯಾಜಿ ಅವರ ಎರಡನೇ ಕವನ ಸಂಕಲನವನ್ನು ಸರಳವಾಗಿ ಅವರ ಕುಟುಂಬದ ಹಿರಿಯರಾದ ಗಣಪತಿ ಕೃಷ್ಣ ಯಾಜಿ ಅವರಿಂದ ಬಿಡುಗಡೆಗೊಳಿಸಿದರು.
ಭಟ್ಕಳ: ಶಿರಾಲಿಯ ಹಿರಿಯ ಸಾಹಿತಿ ಹಾಗೂ ನ್ಯಾಯವಾದಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ನಾರಾಯಣ ಕೃಷ್ಣ ಯಾಜಿ ಅವರ ಎರಡನೇ ಕವನ ಸಂಕಲನವನ್ನು ಸರಳವಾಗಿ ಅವರ ಕುಟುಂಬದ ಹಿರಿಯರಾದ ಗಣಪತಿ ಕೃಷ್ಣ ಯಾಜಿ ಅವರಿಂದ ಬಿಡುಗಡೆಗೊಳಿಸಿದರು.
ತಮ್ಮ ಎರಡನೇ ಕವನ ಸಂಕಲನ "ಹಡೆಯೋದಾದರೆ ನೀನು " ಎಂಬ ಕೃತಿ ಬಿಡುಗಡೆಯನ್ನು ತಮ್ಮ ಕುಟುಂಬದ ಹಿರಿಯರಾದ ಗಣಪತಿ ಯಾಜಿ ಅವರಿಂದಲೇ ಸರಳವಾಗಿ ಬಿಡುಗಡೆಗೊಳಿಸುವ ಮೂಲಕ ನಾರಾಯಣ ಯಾಜಿಯವರು ಸರಳತೆಗೆ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಕೃತಿಗಳ ಲೋಕಾರ್ಪಣೆಗೋಸ್ಕರವೇ ಲಕ್ಷಾಂತರ ರೂಪಾಯಿ ಖರ್ಚು ಮಾಡುವವರ ನಡುವೆ ಸರಳವಾಗಿ ಕೃತಿ ಬಿಡುಗಡೆಗೊಳಿಸಿದ ಇವರ ಕಾರ್ಯ ಶ್ಲಾಘನೀಯವಾಗಿದೆ.ಕೃತಿಯನ್ನು ಬಿಡುಗಡೆಗೊಳಿಸಿದ ಕೃತಿಕಾರರ ಹಿರಿಯ ಸಹೋದರ ಗಣಪತಿ ಯಾಜಿ ಅವರು ಮಾತನಾಡಿ, ಸಾಹಿತ್ಯ ಕ್ಷೇತ್ರ ಬಹು ದೊಡ್ಡದಿದ್ದು ತನ್ನ ಸಹೋದರನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೃತಿಕಾರ ನಾರಾಯಣ ಯಾಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ಕೃತಿ ಪರಿಚಯ ಮಾಡಿದರು. ಈ ಸಂದರ್ಭದಲ್ಲಿ ಕುಟುಂಬದವರಾದ ಕಲ್ಯಾಣಿ ಯಾಜಿ, ಸಂಜಿತ್ ಯಾಜಿ ಉಪಸ್ಥಿತರಿದ್ದರು. ಕೃಷ್ಣಾನಂದ ಯಾಜಿ ಸ್ವಾಗತಿಸಿದರು. ಛಾಯಾ ಯಾಜಿ ವಂದಿಸಿದರು.
ಸಾಹಿತಿ ನಾರಾಯಣ ಯಾಜಿ ಅವರ ಹಡೆಯೋದಾದರೆ ನೀನು ಕೃತಿಯನ್ನು ಬಿಡುಗಡೆಗೊಳಿಸಿದ ಗಣಪತಿ ಯಾಜಿ.