ಸಾರಾಂಶ
ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಂಡು ಓದಿದರೂ ಅದು ಒಬ್ಬ ಲೇಖಕ ಬರೆದ ಪುಸ್ತಕ. ಆ ಪುಸ್ತಕ ಶಿಕ್ಷಣದ ರೂಪ ಪಡೆದು ನಿಮ್ಮ ಬಾಳಿಗೆ ದಾರಿದೀಪ ಕಲ್ಪಿಸುತ್ತದೆ ಎಂದಾದರೆ ಅದು ಸಾಹಿತ್ಯದ ತಾಕತ್ತು ಎಂದು ಪತ್ರಕರ್ತ ಪಾಪುಗುರು ಹೇಳಿದ್ದಾರೆ.
ದಾವಣಗೆರೆ: ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಂಡು ಓದಿದರೂ ಅದು ಒಬ್ಬ ಲೇಖಕ ಬರೆದ ಪುಸ್ತಕ. ಆ ಪುಸ್ತಕ ಶಿಕ್ಷಣದ ರೂಪ ಪಡೆದು ನಿಮ್ಮ ಬಾಳಿಗೆ ದಾರಿದೀಪ ಕಲ್ಪಿಸುತ್ತದೆ ಎಂದಾದರೆ ಅದು ಸಾಹಿತ್ಯದ ತಾಕತ್ತು ಎಂದು ಪತ್ರಕರ್ತ ಪಾಪುಗುರು ಹೇಳಿದರು.
ನಗರದ ಎಆರ್‌ಎಂ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಿಂದ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಎನ್ನೆಸ್ಸೆಸ್ ಶಿಬಿರದಲ್ಲಿ ಯುವಜನತೆಗೆ ಸಾಹಿತ್ಯದ ಅಗತ್ಯತೆ ವಿಷಯ ಕುರಿತು ಅವರು ಮಾತನಾಡಿದರು.ಹಿಂದಿನ ಗುರುಕುಲದಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಎಂಬ ಬೇರೆ ಬೇರೆ ವಿಭಾಗಗಳಿರಲಿಲ್ಲ. ಆದರೆ. ವಿದ್ಯಮಾನಗಳು ಬೆಳೆದಂತೆ ಸಾಹಿತ್ಯ ಮತ್ತು ಶಿಕ್ಷಣ ಪ್ರತ್ಯೇಕ ರೂಪ ಪಡೆದುಕೊಂಡಿವೆ. ಸಾಹಿತ್ಯದ ಗುಣವೇ ಸಂಸ್ಕಾರವಂತರನ್ನಾಗಿ ಮಾಡುವುದು. ಹಾಗಾಗಿ. ಅದರ ಬಳಿಗೆ ನೀವು ಹೋಗಬೇಕು. ಇಂದಿನ ಯುವಜನತೆಯಲ್ಲಿ ಸಂಸ್ಕಾರ ಕಡಿಮೆ ಆಗುತ್ತಿದೆ. ಇದಕ್ಕೆ ವಾಟ್ಸಾಪ್ ಸಾಹಿತ್ಯ ಕಾರಣ. ಅದನ್ನು ಬಿಟ್ಟು ಬದುಕು ಕಟ್ಟಿಕೊಡುವಂಥ, ಮನಸಿಗೆ ಮುದ ನೀಡುವಂತ ಪುಸ್ತಕಗಳ ಸಾಹಿತ್ಯದ ಕಡೆಗೆ ಮನಸು ಹರಿಸಿದರೆ, ಬದುಕು ಉಜ್ವಲವಾಗಬಲ್ಲದು ಎಂದು ಸಲಹೆ ನೀಡದರು.
ವಿಂಡೋಸ್ ಕಂಪ್ಯೂಟರ್ ಎಜುಕೇಶನ್ ಸೆಂಟರ್ ವ್ಯವಸ್ಥಾಪಕ ನಿರ್ದೇಶಕ ಬಸವರಾಜ, ಪ್ರಾಧ್ಯಾಪಕರಾದ ಎಸ್.ಬಿ.ಮನೋಹರ್, ಜಿ.ನಾಗರಾಜು, ಮೊಹಮ್ಮದ್ ರಿಯಾಜ್, ಬಸವರಾಜ ದಮ್ಮಳ್ಳಿ, ಪ್ರವೀಣ್, ಮಧುಮಾಲತಿ, ಗೀತಾ ಪಾಟೀಲ್, ಕೋಡಿಹಳ್ಳಿ ಗ್ರಾಮದ ಮುಖಂಡ ಮಾನಪ್ಪ ಇತರರು ಇದ್ದರು.- - -
-26ಕೆಡಿವಿಜಿ31:ದಾವಣಗೆರೆಯ ಎಆರ್‌ಎಂ ಪ್ರ.ದ. ಕಾಲೇಜಿನಿಂದ ನಡೆದ ಎನ್ನೆಸ್ಸೆಸ್ ಶಿಬಿರದಲ್ಲಿ ಪತ್ರಕರ್ತ ಪಾಪುಗುರು ಮಾತನಾಡಿದರು.