ಧಾರವಾಡ:

ಧಾರವಾಡ ಪ್ರತ್ಯೇಕ ಪಾಲಿಕೆ ಬೇಡಿಕೆ ಹೋರಾಟವು ಶನಿವಾರ 21ನೇ ದಿನಕ್ಕೆ ಕಾಲಿಟ್ಟಿದ್ದು ಹೋರಾಟಕ್ಕೆ ಹಿರಿಯ ಸಾಹಿತಿಗಳು, ಕಲಾವಿದರ ಸಂಘವೂ ಬೆಂಬಲಿಸಿತು.

ಈ ವೇಳೆ ಮಾತನಾಡಿದ ಸಿದ್ಧಲಿಂಗ ಪಟ್ಟಣಶೆಟ್ಟಿ, ಧಾರವಾಡ ಜಿಲ್ಲಾ ಕೇಂದ್ರವಾಗಿದ್ದರೂ ಕಡೆಗಣಿಸಲಾಗುತ್ತಿದೆ. ಎಚ್‌ಡಿಎಂಸಿ ಎಂದು ಹೇಳಿಕೊಳ್ಳುತ್ತಲೇ ಧಾರವಾಡ ಕಡೆಗಣಿಸಲಾಗುತ್ತಿದೆ. ನಗರದಲ್ಲಿ ಯಾವುದೇ ಕಚೇರಿ ಕೆಲಸ ಆಗಬೇಕಾದರೆ ಇಲ್ಲಿಯ ಅಧಿಕಾರಿಗಳು ಹುಬ್ಬಳ್ಳಿಯತ್ತ ಬೊಟ್ಟು ಮಾಡಿ ತೋರಿಸುತ್ತಾರೆ. ನಗರದ ಜನ ರೋಸಿ ಹೋಗಿದ್ದಾರೆ. ಸಾಹಿತಿಗಳ ನಾಡು ಕೇವಲ ಹೆಸರಿಗೆ ಮಾತ್ರ. ಪ್ರತೇಕ ಪಾಲಿಕೆ ಹೋರಾಟ ಸಮಿತಿಗೆ ಸಾಹಿತಿಗಳಿಂದ ಸಂಪೂರ್ಣ ಬೆಂಬಲ ಇದೆ ಎಂದರು.

ಧಾರವಾಡ ಪ್ರತೇಕ ಪಾಲಿಕೆ ಕೇಳುವುದು ನಮ್ಮ ಹಕ್ಕು. ಪಾಲಿಕೆಯ ಕರದಾತರಾಗಿ ಕೇಳುತ್ತಿದ್ದೇವೆ. ಸಮಿತಿಯ ಹೋರಾಟ ಪ್ರಶಂಸನೀಯ ಎಂದರು. ಕಲಾವಿದರ ಸಂಘದಿಂದ ರವಿ ಕುಲಕರ್ಣಿ ಮಾತನಾಡಿ, ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಯಾವುದೆ ರೀತಿಯ ಬೆಂಬಲ ನೀಡಲು ಸಿದ್ಧ ಎಂದು ಘೋಷಿಸಿದರು.

ಈ ವೇಳೆ ಸಾಹಿತಿ ಹೇಮಾ ಪಟ್ಟಣಶೆಟ್ಟಿ, ವಿಠ್ಠಲ್ ಕೊಪ್ಪದ, ಗೋಪಾಲ ಉಣಕಲ್, ಬಾಬು ಈಳಿಗೇರ, ಆಶಾ ಸೈಯದ್‌, ವಿಶ್ವನಾಥ ರಾಯದುರ್ಗ, ಈರಪ್ಪ ತುರಮುರಿ, ಬಿ.ಡಿ. ಹಿರೇಮಠ, ಗುರುರಾಜ ಹುಣಸಿಮರದ, ಮಾಚಕನವರ, ಶಿವಶಂಕರ ಹಂಪಣ್ಣವರ, ಮೋಹನ ರಾಮದುರ್ಗ, ತುಳಜಪ್ಪ ಪೂಜಾರ, ಶಿವಲಿಂಗಯ್ಯಾ ಹಿರೇಮಠ, ಆನಂದ ಹೂಗಾರ, ಆನಂದ ಯಾವಗಲ್, ಸುರೇಶ ಬೇದರೆ, ಎಂ.ಸಿ. ನೀಲಗಾರ ಸೇರಿದಂತೆ ಹಲವರು ಇದ್ದರು. 21ನೇ ಉಪವಾಸ ಸತ್ಯಾಗ್ರಹದಲ್ಲಿ ಗುರುರಾಜ ಕಟ್ಟೆನ್ನವರ, ನೀಲಕುಮಾರ ಗೋರವಿ, ಶ್ರೀಧರ ಶೇಟ್‌, ರವಿ ಭಾಡಗೆ, ಮಾರುತಿ ಜಲಗೇರಾ, ಲಕ್ಷ್ಮಣ ತೋಪೊಜಿ, ಸುಭಾಸ ಇಂಗಳಲಿ, ಮೋಹನ ಗೌಳಿ, ಈರಣ್ಚ ಚಿಕ್ಕಬೆಳ್ಳಿಕಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.