ಸಾರಾಂಶ
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಳ್ತಂಗಡಿ ತಾಲೂಕು ಅಧಿವೇಶನ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿಸಾಹಿತ್ಯಕ್ಕೆ ಮನುಕುಲವನ್ನು ಒಂದು ಮಾಡುವ ಶಕ್ತಿ ಇದೆ ಎಂದು ಲೋಕಾಯುಕ್ತ ನಿವೃತ್ತ ಎಸ್‌ಪಿ ಕುಮಾರಸ್ವಾಮಿ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಇದರ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಬಲಿಪ ರೆಸಾರ್ಟ್‌ನಲ್ಲಿ ಭಾನುವಾರ ಆಯೋಜಿಸಲಾದ ತೆಂಕಣದಲ್ಲಿ ನುಡಿದಿಬ್ಬಣ ಎಂಬ ತಾಲೂಕು ಮೊದಲ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.ರಾಷ್ಟ್ರಭಕ್ತಿ ಎಂದರೆ ಕೇವಲ ಮಿಲಿಟರಿ ಸೇವೆ ಮಾತ್ರ ಎಂದು ಭಾವಿಸಬೇಕಾಗಿಲ್ಲ. ಸಾಹಿತ್ಯದ ಮೂಲಕವೂ ದೇಶಸೇವೆ ಮಾಡಬಹುದು. ದ.ಕ.ದಲ್ಲಿ ಯಕ್ಷಗಾನ, ಭೂತಾರಾಧನೆ ಹಾಗೂ ಇನ್ನಿತರ ಸಂಪ್ರದಾಯ ಆಚಾರ ವಿಚಾರಗಳು ಸಾಹಿತ್ಯ ಸಂಪತ್ತನ್ನು ಹೆಚ್ಚಿಸಿವೆ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಪ್ರೊ. ಗಣಪತಿ ಭಟ್ ಕುಳವರ್ಮ ಅಧ್ಯಕ್ಷತೆ ವಹಿಸಿ, ನಾವು ವಿದ್ಯಾರ್ಥಿಗಳಾಗಿದ್ದಾಗ ಯಾರ್ಯಾರದೋ ಇತಿಹಾಸವನ್ನು ಓದಿದ್ದೇವೆಯೇ ಹೊರತು ನಮ್ಮವರ, ನಮ್ಮ ನೆಲದ ಇತಿಹಾಸದ ಅರಿವನ್ನು ಅರ್ಥವಾಗುವಂತೆ ವಿವರಿಸಿಲ್ಲ. ಹೀಗಾಗಿ ಅಭಾವಿಪ ರಾಷ್ಟ್ರೀಯತೆಯ ಮನೋಭಾವ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.ಯಕ್ಷಗಾನ ಕವಿ, ಅರ್ಥಧಾರಿ ದಿವಾಕರ ಹೆಗಡೆ ಕೆರೆಹೊಂಡ ಅವರು ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ವಿಷಯದಲ್ಲಿ ಉಪನ್ಯಾಸ ನೀಡಿದರು.
ಕವಯತ್ರಿ, ತುಳು ಲಿಪಿ ಶಿಕ್ಷಕಿ, ತುಳುವೆರೆ ಕಲ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಕವಿ ಸಮ್ಮಿಲನದ ಅವಲೋಕನ ಮಾಡಿದರು.ಸಮ್ಮಿಲನದಲ್ಲಿ ಅಶ್ವಿಜಾ ಶ್ರೀಧರ್, ಅರುಣಾ ಶ್ರೀನಿವಾಸ್, ಆಶಾ ಅಡೂರು, ನಿಶಾ ಸಂತೋಷ್, ನಯನಾ, ವನಜಾ ಟಿ. ಜೋಶಿ, ಸಮ್ಯಕ್ ಜೈನ್, ವಿದ್ಯಾಶ್ರೀ ಅಡೂರು, ನಾಗಶ್ರೀ ದಾತೆ, ಸೋನಾಕ್ಷಿ, ವೃಂದಾ ತಾಮ್ಹಣ್ ಕಾರ್ ಸ್ವರಚಿತ ಕವನಗಳನ್ನು ವಾಚಿಸಿದರು.
ಶಾಂತಾ ಜೆ. ಅಳದಂಗಡಿ ಅವರ ‘ಕಾವ್ಯಯಾನ’, ವಿನುತಾ ರಜತ್ ಗೌಡ ಅವರ ‘ಪ್ರತಿಬಿಂಬ’, ಅಭಾಸಾಪ ಬೆಳ್ತಂಗಡಿ ತಾಲೂಕು ಸಮಿತಿ ಸದಸ್ಯರ ‘ಮೊದಲ ಹೆಜ್ಜೆ’ ಪುಸ್ತಕಗಳನ್ನು ಉಜಿರೆ ಗ್ರಾ.ಪಂ. ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಅನಾವರಣಗೊಳಿಸಿದರು.ಪರಿಷದ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್, ಕಾರ್ಯದರ್ಶಿ ಶೈಲೇಶ್, ಸಂಚಾಲಕ ಸುಂದರ ಶೆಟ್ಟಿ, ತಾಲೂಕು ಕಾರ್ಯದರ್ಶಿ ಸುಭಾಷಿಣಿ, ಕೋಶಾಧಿಕಾರಿ ಕೇಶವ ಭಟ್ ಅತ್ತಾಜೆ, ರಾಮಕೃಷ್ಣ ಭಟ್ ಬೆಳಾಲು, ಕಸಾಪ ತಾಲೂಕಾಧ್ಯಕ್ಷ ಯದುಪತಿ ಗೌಡ, ರೆಸಾರ್ಟ್ ಮಾಲಕ, ವಕೀಲ ಮುರಳಿ ಬಲಿಪ, ಉಪನ್ಯಾಸಕ ರವಿ ಮಂಡ್ಯ ಉಪಸ್ಥಿತರಿದ್ದರು.
ಆರಂಭದಲ್ಲಿ ಭಾರತ ಮಾತೆ ಹಾಗೂ ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಶಿಕ್ಷಕಿ ಮೇಧಾ ಆಶಯ ಗೀತೆ ಹಾಡಿದರು. ಪರಿಷದ್‌ನ ಮಕ್ಕಳ ಪ್ರಕಾರ ಮತ್ತು ವಿದ್ಯಾರ್ಥಿ ಪ್ರಕಾರದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಸಮಿತಿ ಅಧ್ಯಕ್ಷ ಪ್ರೊ.ಗಣಪತಿ ಕುಳಮರ್ವ ಸ್ವಾಗತಿಸಿದರು. ರಾಮಕೃಷ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು.