ಯಾವುದೇ ವಿಷಯದ ವಿದ್ಯಾರ್ಥಿಗಳಿರಲಿ ಸಾಹಿತ್ಯದ ಓದು, ತಿಳಿವಳಿಕೆ ಮುಖ್ಯ. ಸಾಹಿತ್ಯ ಆದರ್ಶ, ಮೌಲ್ಯಗಳ ಕುರಿತು ನಮ್ಮನ್ನು ಎಚ್ಚರಿಸುತ್ತದೆ. ಸಾಹಿತ್ಯದ ವಿವಿಧ ಪ್ರಕಾರಗಳು ಮಾನವೀಯ ಮೌಲ್ಯಗಳನ್ನು ಸಾರುತ್ತವೆ ಎಂದು ಪ್ರಾಚಾರ್ಯ ಬಸಪ್ಪ ನಾಗೋಲಿ ಹೇಳಿದರು.

ಗಂಗಾವತಿ: ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗ ವತಿಯಿಂದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಸಪ್ಪ ನಾಗೋಲಿ ಮಾತನಾಡಿ "ಯಾವುದೇ ವಿಷಯದ ವಿದ್ಯಾರ್ಥಿಗಳಿರಲಿ ಸಾಹಿತ್ಯದ ಓದು, ತಿಳಿವಳಿಕೆ ಮುಖ್ಯ. ಸಾಹಿತ್ಯ ಆದರ್ಶ, ಮೌಲ್ಯಗಳ ಕುರಿತು ನಮ್ಮನ್ನು ಎಚ್ಚರಿಸುತ್ತದೆ. ಸಾಹಿತ್ಯದ ವಿವಿಧ ಪ್ರಕಾರಗಳು ಮಾನವೀಯ ಮೌಲ್ಯಗಳನ್ನು ಸಾರುತ್ತವೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಪ್ರಾಚಾರ್ಯ ಡಾ. ಎಸ್.ಜಿ. ಗುರಿಕಾರ ಮಾತನಾಡಿ " ಕನ್ನಡ ವಿಭಾಗ ನಮ್ಮ ಕಾಲೇಜಿನ ಹೆಮ್ಮೆ. ಕಳೆದ ವರುಷ ಐದು ಚಿನ್ನದ ಪದಕಗಳು ಕನ್ನಡ ವಿಭಾಗಕ್ಕೆ ಬಂದಿವೆ. ವಿಭಾಗದಲ್ಲಿ ವಿದ್ವಾಂಸರು, ಸಾಹಿತಿಗಳು ಇದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವುದು ಖುಷಿಯ ಸಂಗತಿ. ಎಂದರು.

ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಸಂಯೋಜಕಿ ಡಾ. ಮುಮ್ತಾಜ್ ಬೇಗಂ ಮಾತನಾಡಿ " ನಮ್ಮ ವಿಭಾಗ ಕಳೆದ ಹದಿನೈದು ವರುಷಗಳಿಂದ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿವರುಷ ಚಿನ್ನದ ಪದಕಗಳನ್ನು ನಮ್ಮ ವಿಭಾಗಕ್ಕೆ ವಿದ್ಯಾರ್ಥಿಗಳು ತಂದಿರುವುದು ಹೆಮ್ಮೆ, ಅಭಿಮಾನದ ಸಂಗತಿ. ಕವಿ ಕಾವ್ಯ ಸಂವಾದ, ವಾರದ ಓದು, ಹಳೆಗನ್ನಡ ಸಂಪದದಂತಹ ವಿಭಿನ್ನ ಕಾರ್ಯಕ್ರಮಗಳ ಮುಖಾಂತರ ನಮ್ಮ ವಿಭಾಗದ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡುತ್ತಿದ್ದಾರೆ. ವಿಶ್ವವಿದ್ಯಾಲಯದಲ್ಲಿ ನಮ್ಮ ಕಾಲೇಜು ಅಗ್ರಸ್ಥಾನದಲ್ಲಿದೆ ಎಂಬುದು ಹೆಗ್ಗಳಿಕೆ ಎಂದು ಹೇಳಿದರು.

ಪವಿತ್ರಾ ಪ್ರಾರ್ಥಿಸಿದರು. ಮೋನಿಕಾ ಸ್ವಾಗತಿಸಿದರು. ಡಾ. ಬಸವರಾಜ ಗೌಡನಬಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದೀಶ್ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ರವಿ ಹಾದಿಮನಿ, ಉಪನ್ಯಾಸಕ ಗುಂಡೂರು ಪವನ್ ಕುಮಾರ್ ಮಾತನಾಡಿದರು. ಉಪನ್ಯಾಸಕ ಡಾ. ಪಾಗುಂಡಪ್ಪ, ಪ್ರಜ್ವಲ್ ಉಪಸ್ಥಿತರಿದ್ದರು.