ಸಾಹಿತ್ಯ ಒಂದು ಅನಾವರಣ ಕಲೆ: ಪ್ರೊ.ಡಿ. ಯೋಗಾನಂದರಾವ್

| Published : Dec 14 2023, 01:30 AM IST

ಸಾರಾಂಶ

ಸಾಹಿತ್ಯಾಸಕ್ತಿ, ಅಧ್ಯಯನ, ಕುತೂಹಲ, ವಿಶ್ಲೇಷಣೆ, ಅನುಭವ, ಬರೆವಣಿಗೆ, ಸಾಹಿತ್ಯ ಪ್ರವೃತ್ತಿಗಳ ಸ್ವೀಕಾರ ಜಗತ್ತಿನೆಡೆಗೆ ಮಾನವನನ್ನು ಕೊಂಡೊಯ್ಯುತ್ತದೆ. ಮಾನವ ಭಾವನೆಗಳ ಸಂಗಮವಾಗಿ ಸಾಹಿತ್ಯ ಕಲೆಯ ಅನಾವರಣವಾಗುತ್ತದೆ ಎಂದು ಬೆಂಗಳೂರಿನ ಸೇಂಟ್‌ ಜೋಸೆಪ್ ಕಾಲೇಜಿನ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ. ಯೋಗಾನಂದರಾವ್ ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಬುಧವಾರ ಆಯೋಜಿಸಿದ್ದ ‘ಸಾಹಿತ್ಯ ಎಂದರೇನು? ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಾಹಿತ್ಯ ಎಂದರೇನು? ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತುಮಕೂರು

ಸಾಹಿತ್ಯಾಸಕ್ತಿ, ಅಧ್ಯಯನ, ಕುತೂಹಲ, ವಿಶ್ಲೇಷಣೆ, ಅನುಭವ, ಬರೆವಣಿಗೆ, ಸಾಹಿತ್ಯ ಪ್ರವೃತ್ತಿಗಳ ಸ್ವೀಕಾರ ಜಗತ್ತಿನೆಡೆಗೆ ಮಾನವನನ್ನು ಕೊಂಡೊಯ್ಯುತ್ತದೆ. ಮಾನವ ಭಾವನೆಗಳ ಸಂಗಮವಾಗಿ ಸಾಹಿತ್ಯ ಕಲೆಯ ಅನಾವರಣವಾಗುತ್ತದೆ ಎಂದು ಬೆಂಗಳೂರಿನ ಸೇಂಟ್‌ ಜೋಸೆಪ್ ಕಾಲೇಜಿನ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ. ಯೋಗಾನಂದರಾವ್ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಬುಧವಾರ ಆಯೋಜಿಸಿದ್ದ ‘ಸಾಹಿತ್ಯ ಎಂದರೇನು? ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಹಿತ್ಯವೂ ಭಾಷೆಯ ಮೂಲಕ ವ್ಯಕ್ತಪಡಿಸಲ್ಪಟ್ಟ ಕಲೆ ಮತ್ತು ಅನುಭವಗಳ ಸಾರ. ಸಾಹಿತ್ಯವನ್ನು ಅಧ್ಯಯನಿಸುವುದು ಒಂದು ಪ್ರಶ್ನಾತ್ಮಕ ಅನುಭವ, ಒಂದು ಮಹಾಸಾಧನೆ. ಇದು ನಮ್ಮ ಬುದ್ಧಿವಂತಿಕೆಗೆ ಹೆಚ್ಚು ದೃಷ್ಟಿ ನೀಡುವುದು ಎಂದು ತಿಳಿಸಿದರು.

ಸಾಹಿತ್ಯ ಎಂದರೆ ಭಾಷೆಯ ಕಲೆ. ಕಲೆಗಳ ಮೂಲಕ ವ್ಯಕ್ತವಾಗುವ ವ್ಯಕ್ತಿತ್ವ, ಸಮಾಜ ಹಾಗೂ ಜೀವನದ ಅಂಶಗಳನ್ನು ಚಿತ್ರಿಸುವ ಹಾಗೂ ಅವುಗಳ ಮೂಲಕ ವಿಚಾರಗಳನ್ನು ಪರಿಚಯಿಸುವ ಕಲೆ. ಅದು ನಮ್ಮ ಭಾವನೆಗಳನ್ನು ಹಂಚುವ ಮಾರ್ಗವಾಗಿದೆ. ವಿದ್ಯಾರ್ಥಿಗಳು ತರಗತಿಗೆ ಬರುವ ಮುನ್ನ ತಮಗೆ ನಿಯೋಜಿಸಿರುವ ಸಾಹಿತ್ಯದ ಪಠ್ಯವನ್ನು ಕ್ರಮಬದ್ಧವಾಗಿ ಓದಿ ಬರುವುದರಿಂದ ತಮ್ಮಲ್ಲಿ ಪ್ರತಿಕ್ರಿಯಿಸುವ ಗುಣ ಬೆಳೆಸಿಕೊಳ್ಳಬೇಕು. ಸಾಹಿತ್ಯ ಅಧ್ಯಯನಕ್ಕೆ ತೆರೆದ ಮನಸ್ಸಿನಿಂದ ಪಾಲ್ಗೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಜ್ಞಾನ ಮತ್ತು ಮಾಹಿತಿಗೆ ಇರುವ ವ್ಯತ್ಯಾಸವನ್ನು ಕಂಡುಕೊಳ್ಳಬೇಕು ಹಾಗೂ ಪ್ರಸ್ತುತ ದಿನಗಳಲ್ಲಿ ಟಿವಿ ಕಾರ್ಯಕ್ರಮಗಳು ಕೇವಲ ಮಾಹಿತಿಯನ್ನು ಕೊಡುತ್ತಿವೆಯೇ ಹೊರತು ಜ್ಞಾನವನ್ನು ಕೊಡುತ್ತಿಲ್ಲ. ಹಾಗಾಗಿ, ವಿದ್ಯಾರ್ಥಿಗಳು ಸಾಹಿತ್ಯ ಕೃತಿಗಳ ಅಧ್ಯಯನದ ಮೂಲಕ ವಿಮರ್ಶಾತ್ಮಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಸ್ನಾತಕೋತ್ತರ ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ.ಎಚ್.ಕೆ.ಶಿವಲಿಂಗಸ್ವಾಮಿ, ಪ್ರಾಧ್ಯಾಪಕ ಪ್ರೊ.ಎನ್.ಎಸ್. ಗುಂಡೂರ್, ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಎನ್. ಕಿರಣ್ ಭಾಗವಹಿಸಿದ್ದರು.ಫೋಟೊ:ತುಮಕೂರು ವಿ.ವಿ.ಯ ಸ್ನಾತಕೋತ್ತರ ಇಂಗ್ಲಿಷ್ ಸಾಹಿತ್ಯ ಅಧ್ಯಯನ ವಿಭಾಗವು ಆಯೋಜಿಸಿದ್ದ ‘ಸಾಹಿತ್ಯ ಎಂದರೇನು? ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸೇಂಟ್‌ ಜೋಸೆಪ್ ಕಾಲೇಜಿನ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ. ಯೋಗಾನಂದರಾವ್ ಮಾತನಾಡಿದರು.