ಸಾಹಿತ್ಯ ಮಕ್ಕಳ ಭಾವನೆ ರೂಪಿಸುವ ಕೊಂಡಿ ಇದ್ದಂತೆ: ಕಿಕ್ಕೇರಿ ಕೃಷ್ಣಮೂರ್ತಿ

| Published : Dec 20 2024, 12:48 AM IST

ಸಾರಾಂಶ

ರಾಜ್ಯದಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಮಂಡ್ಯ ಜಿಲ್ಲೆ ಜನತೆ ಸಂದಗೌರವ ಇದಾಗಿದೆ. ಜಿಲ್ಲೆ ಕೆಎಸ್‌ನ, ಅರಾ ಮಿತ್ರ, ಎ.ಎನ್. ಮೂರ್ತಿ, ಎ.ಎಸ್. ಮೂರ್ತಿ, ಪುತಿನಾ, ಬಿಎಂಶ್ರೀ, ಬೆಸಗರಹಳ್ಳಿ ರಾಮಣ್ಣರಂತಹ ಹಲವರು ಸಾಹಿತಿಗಳನ್ನು ಪಡೆದ ಜಿಲ್ಲೆಯಾಗಿದ್ದು ,ಇವರ ಬದುಕು ಬರಹ ತಿಳಿಯಿರಿ. ಸಾಹಿತ್ಯ ಓದಿದಷ್ಟು ಮನಸ್ಸು, ಮೆದುಳು ಚುರುಕಾಗಲಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಎಳೆಯ ಮನಸ್ಸು, ವಿದ್ಯಾರ್ಥಿ, ಯುವ ಮನಸ್ಸುಗಳ ಉತ್ತಮ ಭಾವನೆ ರೂಪಿಸಲು ಸಾಹಿತ್ಯ ಸಮ್ಮೇಳನ ಸಹಕಾರಿಯಾಗಲಿದೆ ಎಂದು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್‌ಅಧ್ಯಕ್ಷ ಕಿಕ್ಕೇರಿಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಕೆಪಿಎಸ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್, ಎನ್‌ಎಸ್‌ಎಸ್‌ ಘಟಕ ಹಾಗೂ ಸ್ಪಂದನ ಫೌಂಡೇಷನ್‌ ವತಿಯಿಂದ ನಡೆದ ಸಮ್ಮೇಳನಕ್ಕೆ ಹೋಗೋಣ ಕೆಎಸ್‌ನ ಗೀತೆ ಹಾಡೋಣ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಮಂಡ್ಯ ಜಿಲ್ಲೆ ಜನತೆ ಸಂದಗೌರವ ಇದಾಗಿದೆ. ಜಿಲ್ಲೆ ಕೆಎಸ್‌ನ, ಅರಾ ಮಿತ್ರ, ಎ.ಎನ್. ಮೂರ್ತಿ, ಎ.ಎಸ್. ಮೂರ್ತಿ, ಪುತಿನಾ, ಬಿಎಂಶ್ರೀ, ಬೆಸಗರಹಳ್ಳಿ ರಾಮಣ್ಣರಂತಹ ಹಲವರು ಸಾಹಿತಿಗಳನ್ನು ಪಡೆದ ಜಿಲ್ಲೆಯಾಗಿದ್ದು ,ಇವರ ಬದುಕು ಬರಹ ತಿಳಿಯಿರಿ. ಸಾಹಿತ್ಯ ಓದಿದಷ್ಟು ಮನಸ್ಸು, ಮೆದುಳು ಚುರುಕಾಗಲಿದೆ ಎಂದರು.

ಸಮ್ಮೇಳನಕ್ಕಾಗಿ ಟ್ರಸ್ಟ್ ವತಿಯಿಂದ ಉಚಿತವಾಗಿ ನಾಡಗೀತೆ, ಕೆಎಸ್‌ನಗೀತೆ ವಾಚನವನ್ನು ತರಬೇತಿ ನೀಡಲಾಗಿದೆ. ವೇದಿಕೆಯಲ್ಲಿ ಹೊಸ ಪ್ರತಿಭೆಗಳನ್ನು ಹಾಡಿಸಿ ಸುಗಮ ಸಂಗೀತ, ಭಾಷೆ ಗಟ್ಟಿಗೊಳಿಸಲು ಯತ್ನಿಸಲಾಗುವುದು ಎಂದು ನುಡಿದರು.

ಕರವೇ ಜಿಲ್ಲಾ ಉಪಾಧ್ಯಕ್ಷ ಸಾಸಲು ಗುರುಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ತಪ್ಪದೆ ಸಮ್ಮೇಳನಕ್ಕೆ ಹಾಜರಾಗಿ ಸಮ್ಮೇಳನದಲ್ಲಿ ಲಭ್ಯವಿರುವ ಕನ್ನಡ ಪುಸ್ತಕಗಳನ್ನು ಕಡ್ಡಾಯವಾಗಿ ಖರೀದಿಸಬೇಕು. ಭಾಷೆ ಗಟ್ಟಿಯಾಗಿ, ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಅಭಿರುಚಿ ಮೂಡಲುಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕೆಎಸ್‌ನ ಗೀತೆಗಳಾದ ನಾವು ಭಾರತೀಯರು, ಸಿರಿಗೆರೆಯ ನೀರಿನಲಿ, ನಮ್ಮೂರು ಚೆಂದವೋ, ದೀಪವೂ ನಿನ್ನದು ಮತ್ತಿತರ ಗೀತೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಾಡಿ ಮಕ್ಕಳಲ್ಲಿ ಸುಗಮ ಸಂಗೀತ ಗಾಯನದ ಅಭಿರುಚಿ ಮೂಡಿಸಿದರು.

ಈ ವೇಳೆ ಕರವೇ ಜಿಲ್ಲಾ ಉಪಾಧ್ಯಕ್ಷ ಸಾಸಲು ಗುರುಮೂರ್ತಿ, ಹೋ.ಅಧ್ಯಕ್ಷ ಪದ್ಮನಾಭ, ಐಟಿ ಇನ್‌ಫರ್ಮೇಶನರ್ ನೆಲಮಂಗಲ ಸುಬ್ರಹ್ಮಣ್ಯ, ಉಪನ್ಯಾಸಕರಾದ ಮಂಜುನಾಥ್, ನಾಗೇಶ್, ಚಂದ್ರಿಕಾ, ವರಲಕ್ಷ್ಮೀ, ಫಾಜಿಲ್ಲಖಾನಂ ಇದ್ದರು.