ಸಾಹಿತ್ಯ ಸಂಘಟಕ ದಾಮೋದರ ನಿಸರ್ಗ ನಿಧನ

| Published : Sep 01 2024, 01:47 AM IST

ಸಾರಾಂಶ

ಸಾಹಿತ್ಯ ಸಂಘಟನೆಯ ಪ್ರವೃತ್ತಿಯೊಂದಿಗೆ ಸಿವಿಲ್ ಕಾಂಟ್ರಾಕ್ಟರ್ ಆಗಿದ್ದ ದಾಮೋದರ ನಿಸರ್ಗ, ಮರೋಳಿಯ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಹಲವು ಕ್ಷೇತ್ರಗಳಲ್ಲಿ, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು- ಕನ್ನಡ ಸಾಹಿತ್ಯ ಸಂಘಟಕ, ಸಾಮಾಜಿಕ- ಧಾರ್ಮಿಕ ಕ್ಷೇತ್ರದ ಮುಂದಾಳು, ತುಳುಕೂಟದ ಅಧ್ಯಕ್ಷರಾಗಿದ್ದ ಬಿ. ದಾಮೋದರ ನಿಸರ್ಗ (75) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಹೆಸರಾಂತ ಚಲನಚಿತ್ರ ನಿರ್ದೇಶಕ ವಿಶುಕುಮಾರ್ ಅವರ ಸಹೋದರ ದಾಮೋದರ ನಿಸರ್ಗ ಅವರು 1949ರಲ್ಲಿ ಮರೋಳಿಯ ನಿಸರ್ಗ ಮನೆಯಲ್ಲಿ ಯಕ್ಷಗಾನ ಕ್ಷೇತ್ರದ ದಿಗ್ಗಜರಾಗಿದ್ದ ದೋಗ್ರ ಪೂಜಾರಿ ಮತ್ತು ಚಂದ್ರಾವತಿ ಮಗನಾಗಿ ಜನಿಸಿದರು.

ಸಾಹಿತ್ಯ ಸಂಘಟನೆಯ ಪ್ರವೃತ್ತಿಯೊಂದಿಗೆ ಸಿವಿಲ್ ಕಾಂಟ್ರಾಕ್ಟರ್ ಆಗಿದ್ದ ದಾಮೋದರ ನಿಸರ್ಗ, ಮರೋಳಿಯ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಹಲವು ಕ್ಷೇತ್ರಗಳಲ್ಲಿ, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.

ಮಡದಿ ಹೇಮಾ ನಿಸರ್ಗ, ಮಗಳು ಡಾ. ವಿನ್ಯಾಸ ನಿಸರ್ಗ, ಅಳಿಯ ಡಾ. ವಿನಯ್ ಜತ್ತನ್ ಮತ್ತು ಮಗ ತ್ರಿದೇವ್ ನಿಸರ್ಗ ಹಾಗೂ ಕೂಡು ಕುಟುಂಬದ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.