ಚುಟುಕು ಸಾಹಿತ್ಯದ ಮಾತು ಹಾಗೂ ಕೃತಿ ಸಮಾಜವನ್ನು ತಿದ್ದುವಂತಿರಬೇಕು ಎಂದು ಮೂಲ್ಕಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಹೇಳಿದರು.
ಮೂಲ್ಕಿ : ಚುಟುಕು ಸಾಹಿತ್ಯದ ಮಾತು ಹಾಗೂ ಕೃತಿ ಸಮಾಜವನ್ನು ತಿದ್ದುವಂತಿರಬೇಕು ಎಂದು ಮೂಲ್ಕಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಹೇಳಿದರು.
ಚುಟುಕು ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ಹೋಬಳಿಯ ಜಂಟಿ ಆಶ್ರಯದಲ್ಲಿ ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿದ ಸಾಹಿತಿಗಳಿಗೆ ಸನ್ಮಾನ ಹಾಗೂ ಚುಟುಕು ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ತಾಲೂಕು ಘಟಕದ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉದಯಕುಮಾರ ಹಬ್ಬು ವಹಿಸಿದ್ದು , ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ, ಕಾದಂಬರಿಕಾರ್ತಿ, ಹಾಗೂ ನಾಟಕಕಾರೆ ಶಕುಂತಲಾ ಭಟ್, ಖ್ಯಾತ ಸಾಹಿತಿ ಡಾ. ಜನಾರ್ದನ ಭಟ್ ಹಾಗೂ ಖ್ಯಾತ ಕವಿ ರವೀಂದ್ರ ನಾಯಕ ಸಣ್ಣಕ್ಕಿಬೆಟ್ಟು ಅವರನ್ನು ಸಾಧಕರ ನೆಲೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರಿಂದ ಪುಸ್ತಕ ಬಿಡುಗಡೆ ಕುರಿತು ಪರಿಚಯ ಹಾಗೂ ಚುಟುಕು ರಚನೆಯ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಮೂಲ್ಕಿ ಸರ್ಕಾರಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಪ್ರೌಢಶಾಲೆಯಹಿರಿಯ ಶಿಕ್ಷಕಿ ಜಯಲಕ್ಷ್ಮೀ ಜೆ. ನಾಯಕ್ ಉಪಸ್ಥಿತರಿದ್ದರು. ಬಳಿಕ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಜೋಸ್ಸಿ ಪಿಂಟೋ ವಹಿಸಿದ್ದು . ಕವಿಗೋಷ್ಠಿಗೆ ಅನುರಾಧ ರಾಜೀವ್ ಸುರತ್ಕಲ್ ಚಾಲನೆ ನೀಡಿದರು.
ಕವಿಗಳಾದ ಪ್ರೇಮಾ ಆರ್. ಶೆಟ್ಟಿ, ಶ್ರೀದೇವಿ, ಪುಷ್ಪರಾಜ ಚೌಟ, ಶಂಕರ ಪಡಂಗ, ರಾಧಿಕಾ ಕಾಮತ್, ಉದಯ ಕುಮಾರ್ ಹಬ್ಬು ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪ್ರೇಮಾ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರಾಧಿಕಾ ಕಾಮತ್ ವಂದಿಸಿದರು. ಖಜಾಂಚಿ ಶ್ರೀದೇವಿ ಕೆ.ಎಸ್. ರಾವ್ ನಿರೂಪಿಸಿದರು.