ವಾಲ್ಮೀಕಿ ಸಂದೇಶದಿಂದ ಬದುಕು ಹಸನು; ಗೀತಾ

| Published : Oct 18 2024, 12:12 AM IST

ವಾಲ್ಮೀಕಿ ಸಂದೇಶದಿಂದ ಬದುಕು ಹಸನು; ಗೀತಾ
Share this Article
  • FB
  • TW
  • Linkdin
  • Email

ಸಾರಾಂಶ

ಬೇಟೆಗಾರನಾಗಿದ್ದ ವಾಲ್ಮೀಕಿ ಮಹಾ ಕವಿಯಾಗಿ ಬದಲಾದ ಕುರಿತು ಜೀವನ ವೃತ್ತಾಂತ ತಿಳಿಯುವದರ ಜತೆಗೆ, ವಾಲ್ಮೀಕಿ ಸಂದೇಶ ಅರಿತುಕೊಳ್ಳಬೇಕು

ರೋಣ: ದೇಶಕ್ಕೆ ಮಹಾಕಾವ್ಯ ರಾಮಾಯಣ ಕೊಡುಗೆ ನೀಡಿದ ಮಹಾಕವಿ ಮಹರ್ಷಿ ವಾಲ್ಮೀಕಿ ತತ್ವ,ಸಂದೇಶ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಹಸನಾಗುವದು ಎಂದು ಮುಖ್ಯೋಪಾಧ್ಯಾಯಿನಿ ಗೀತಾ ಹಿರೇಸಕ್ಕರಗೌಡ್ರ ಹೇಳಿದರು.

ಅವರು ಗುರುವಾರ ಪಟ್ಟಣದ ಪ್ರಜಂಟೆಶನ್ ಪ್ರಾಥಮಿಕ ಶಾಲೆ ಮತ್ತು ಕಲ್ಯಾಣಸಿರಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ಬದುಕು ಸಾರ್ಥಕವಾಗಬೇಕು. ಈ ದಿಶೆಯಲ್ಲಿ ಸಮಾಜಕ್ಕೆ ಏನನ್ನಾದರೂ ಉತ್ತಮ್ಮ ಕೊಡುಗೆ ನೀಡುವಲ್ಲಿ ಮನಸ್ಸನ್ನು ಕೇಂದ್ರಿಕರಿಸಬೇಕು. ಈ ನಿಟ್ಟಿನಲ್ಲಿ ಮಹನೀಯರ, ಸಾಧಕರ, ಮಹರ್ಷಿಗಳ, ಸಂತ, ಶರಣರ ಜೀವನ ಮತ್ತು ಅವರ ನೀಡಿದ ಸಂದೇಶ ಕುರಿತು ತಿಳಿಯಬೇಕು. ಬೇಟೆಗಾರನಾಗಿದ್ದ ವಾಲ್ಮೀಕಿ ಮಹಾ ಕವಿಯಾಗಿ ಬದಲಾದ ಕುರಿತು ಜೀವನ ವೃತ್ತಾಂತ ತಿಳಿಯುವದರ ಜತೆಗೆ, ವಾಲ್ಮೀಕಿ ಸಂದೇಶ ಅರಿತುಕೊಳ್ಳಬೇಕು. ಆದಿ ಕವಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಯಣ ಮಹಾಕಾವ್ಯದಲ್ಲಿನ ಶ್ಲೋಕ ಉಚ್ಚರಿಸಿದ್ದಲ್ಲಿ ಆ ಶ್ಲೋಕಗಳ ಸಾರ ಅರಿತಕೊಂಡಲ್ಲಿ ಮನಸ್ಸಿಗೆ ಆನಂದತೆ, ಅಲ್ಹಾದತೆ ದೊರೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ನಿರ್ಮಲಾ ನಂದಿಕೋಲಮಠ, ಸಾವಿತ್ರಿ ಬಾರಕೇರ, ಲಕ್ಷ್ಮೀ ಗಾಣಿಗೇರ, ಶೃತಿ ಓಲೇಕಾರ, ಶೃತಿ ಗಡಾದ ಮುಂತಾದವರು ಪಾಲ್ಗೊಂಡಿದ್ದರು.