ಸಾರಾಂಶ
ಸರ್ಕಾರದಿಂದ ಪೌಷ್ಟಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ತಾಯಂದರಿಗೆ ಮತ್ತು ಅಂಗನವಾಡಿಯ ಮಕ್ಕಳಿಗೆ ಹಲವಾರು ಸೌಲಭ್ಯಗಳಿವೆ. ಮೊಟ್ಟೆ, ಮೊಳಕೆ ಕಾಳು, ಪೌಷ್ಟಿಕಾಂಶಪೂರಿತ ಆಹಾರ ಒದಗಿಸಬೇಕು. ಇಂದಿನ ಮಕ್ಕಳು ಮುಂದಿನ ನಾಗರಿಕರಾಗಿ ಪ್ರಜಾ ಶಕ್ತಿಗಳಾಗಿ ಬೆಳೆಯಬೇಕು.
ಕುಕನೂರು: ಆರೋಗ್ಯಕರ ಬದುಕಿಗೆ ಇಂದ್ರಧನುಷ್ ಲಸಿಕೆ ಸಹಕಾರಿ ಎಂದು ಗ್ರಾಪಂ ಸದಸ್ಯೆ ಶೈನಜಾ ಬೇಗಂ ಹೇಳಿದರು.
ತಾಲೂಕಿನ ಆಡೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇಂದ್ರಧನುಷ್ ಲಸಿಕೆ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದಿಂದ ಪೌಷ್ಟಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ತಾಯಂದರಿಗೆ ಮತ್ತು ಅಂಗನವಾಡಿಯ ಮಕ್ಕಳಿಗೆ ಹಲವಾರು ಸೌಲಭ್ಯಗಳಿವೆ. ಮೊಟ್ಟೆ, ಮೊಳಕೆ ಕಾಳು, ಪೌಷ್ಟಿಕಾಂಶಪೂರಿತ ಆಹಾರ ಒದಗಿಸಬೇಕು. ಇಂದಿನ ಮಕ್ಕಳು ಮುಂದಿನ ನಾಗರಿಕರಾಗಿ ಪ್ರಜಾ ಶಕ್ತಿಗಳಾಗಿ ಬೆಳೆಯಬೇಕು ಎಂದು ಹೇಳಿದರು.ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಜಯಶ್ರೀ ಕೊಟ್ಟಿಗಿ ಮಾತನಾಡಿ, ತಾಯಂದಿರು, ಬಾಣಂತಿಯರು, ಮಕ್ಕಳ ಆರೋಗ್ಯ ಸೇವೆಗಳು ಸಮುದಾಯದ ಎಲ್ಲ ಸಕಾಲದಲ್ಲಿ ದೊರೆಯುತ್ತವೆ. ಆರೋಗ್ಯ ಇಲಾಖೆಯ ಸೇವೆಯನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಐದು ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಅಂದರೆ ಮಾತ್ರ ಮಕ್ಕಳು ಆರೋಗ್ಯವಾಗಿ ಇರಲು ಸಾಧ್ಯ. ಗರ್ಭಿಣಿಯರು ಸಹ ಆರೋಗ್ಯದ ಜೀವನದ ಕಡೆ ಗಮನ ಹರಿಸಬೇಕು ಎಂದರು.ಅಂಗನವಾಡಿ ಕಾರ್ಯಕರ್ತೆಯರಾದ ಶಿಲ್ಪಾ ಹಿರೇಮಠ, ಶಿವವ್ವ ಕಟ್ಟಿಮನಿ, ಆಶಾ ಕಾರ್ಯಕರ್ತೆ ಲಲಿತಾ ಕೊಪ್ಪಳ ಇದ್ದರು.
;Resize=(128,128))
;Resize=(128,128))