ಸಾಮರಸ್ಯದಿಂದ ಬದುಕು ಹಸನ

| Published : Apr 19 2025, 12:32 AM IST

ಸಾರಾಂಶ

ವಿವಾಹ ಎಂಬುದು ಪಾವಿತ್ರ್ಯತೆ ಪಡೆದಿದೆ. ಸತಿ, ಪತಿ ಬಾಂಧವ್ಯ ದೇವರು ನೀಡಿದ ಸಂಬಂಧ. ಈ ಸಂಬಂಧವನ್ನು ಎಂದಿಗೂ ಹಾಳು ಮಾಡಿಕೊಳ್ಳಬಾರದು. ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡದೆ ಸಾಮರಸ್ಯದಿಂದ ಬಾಳಬೇಕು.

ಕೊಪ್ಪಳ(ಯಲಬುರ್ಗಾ):

ಸಾಮರಸ್ಯದಿಂದ ಬದುಕು ಹಸನವಾಗುತ್ತದೆ ಎಂದು ಯಲಬುರ್ಗಾ ಶ್ರೀಧರ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಕರಮುಡಿ ಗ್ರಾಮದ ಹುಚ್ಚೀರೇಶ್ವರ ಮಠದಲ್ಲಿ ಜರುಗಿದ ಭೀಮಾಂಬಿಕಾ ದೇವಿ ಪುರಾಣ ಮಂಗಲೋತ್ಸವ, ಹುಚ್ಚಿರೇಶ್ವರ ರಥೋತ್ಸವ ಹಾಗೂ ಸಾಮೂಹಿಕ ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವಿವಾಹ ಎಂಬುದು ಪಾವಿತ್ರ್ಯತೆ ಪಡೆದಿದೆ. ಸತಿ, ಪತಿ ಬಾಂಧವ್ಯ ದೇವರು ನೀಡಿದ ಸಂಬಂಧ. ಈ ಸಂಬಂಧವನ್ನು ಎಂದಿಗೂ ಹಾಳು ಮಾಡಿಕೊಳ್ಳಬಾರದು. ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡದೆ ಸಾಮರಸ್ಯದಿಂದ ಬಾಳಬೇಕು ಎಂದರು.

ರೋಣದ ಗುಲಗಂಜಿ ಮಠದ ಡಾ. ಗುರುಪಾದ ಸ್ವಾಮೀಜಿ, ನಿಡಗುಂದಿ ಕೊಪ್ಪದ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ, ಇಟಗಿಯ ಗುರುಶಾಂತವೀರ ಸ್ವಾಮೀಜಿ, ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ, ಮಹಾಂತೇಶ ಶಾಸ್ತ್ರಿ, ಶರಣಬಸಪ್ಪ ದಾನಕೈˌ ಪಿಡಿಒ ಬಸವರಾಜ ಬಳೋಟಗಿ, ಯಲಬುರ್ಗಾ ಹಿರೇಮಠದ ಸಿದ್ಧರಾಮೇಶ್ವರ ಸ್ವಾಮೀಜಿ, ಇಟಗಿ ಧರ್ಮ ಮಠದ ಷಣ್ಮುಖಪ್ಪಜ್ಜ, ಶಿವಪ್ಪ ಉಳ್ಳಾಗಡ್ಡಿˌ ಶರಣಪ್ಪಗೌಡ ಪೊಲೀಸ್‌ಪಾಟೀಲ, ಆನಂದ ಮಲ್ಲಿಗವಾಡ, ಡಾ. ಕಳಕಪ್ಪ ಅಬ್ಬಿಗೇರಿ, ಗ್ರಾಪಂ ಸದಸ್ಯರಾದ ರಾಮಣ್ಣ ಹೊಕ್ಕಳದ, ಪರಸಪ್ಪ ಲಮಾಣಿ, ಗಂಗಪ್ಪ ಹವಳಿ, ಕಾಶಪ್ಪ ಹವಳಿ, ವಿರೂಪಾಕ್ಷಪ್ಪ ಉಳ್ಳಾಗಡ್ದಿ, ಶಕುಂತಲಾ ಪಾಟೀಲ, ಗುರಯ್ಯ ಹಿರೇಮಠ ಇದ್ದರು.