ಸಾರಾಂಶ
-ತುಮಕೂರಿನ ಶ್ರೀವಿಶ್ವಾರಾಧ್ಯ ಮಠದಲ್ಲಿ ಭಕ್ತರಿಂದ ಜನ್ಮ ದಿನಾಚರಣೆ
---------ಕನ್ನಡಪ್ರಭ ವಾರ್ತೆ ಯಾದಗಿರಿ
ಮನುಷ್ಯನಾಗಿ ಹುಟ್ಟಿ ಬಂದ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನಿಸ್ವಾರ್ಥ ಭಾವದಿಂದ ಬಾಳಿ ಬದುಕಬೇಕೆಂದು ಅಬ್ಬೆ ತುಮಕೂರಿನ ಶ್ರೀ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ನುಡಿದರು.ಅಬ್ಬೆ ತುಮಕೂರಿನ ಶ್ರೀವಿಶ್ವಾರಾಧ್ಯ ಮಠದಲ್ಲಿ ಭಕ್ತರು ಹಮ್ಮಿಕೊಂಡಿದ್ದ ತಮ್ಮ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಾನವ ಜನ್ಮ ದೊಡ್ಡದು ಇದನ್ನು ಹಾಳು ಮಾಡ ಬೇಡಿ ಹುಚ್ಚಪ್ಪಗಳಿರಾ ಎಂದು ದಾಸರು ಹೇಳಿದ್ದಾರೆ. 84 ಕೋಟಿ ಜೀವರಾಶಿಗಳನ್ನು ದಾಟಿ ಮನುಷ್ಯ ಜನ್ಮ ಪ್ರಾಪ್ತವಾಗುತ್ತದೆಂದು ಹೇಳುತ್ತಾರೆ. ಅಂತಹ ಅಮೂಲ್ಯವಾದ ಮನುಷ್ಯ ಜನ್ಮವನ್ನು ಸಾರ್ಥಕ ರೀತಿಯಲ್ಲಿ ಬದುಕಬೇಕೆಂದು ಭಕ್ತರಿಗೆ ಕರೆ ನೀಡಿದರು.ಮನುಷ್ಯ ಜೀವನದಲ್ಲಿ ಪರೋಪಕಾರ ಬಹಳ ಮುಖ್ಯವಾದುದು. ಪ್ರತಿಯೊಬ್ಬ ಮನುಷ್ಯ ಇತರರಿಗೆ ಸಹಾಯಕವಾಗುವ ರೀತಿಯಲ್ಲಿ ಜೀವನವನ್ನು ನಡೆಸಬೇಕು. ನಮ್ಮ ಜೀವನ ಇನ್ನೊಬ್ಬರಿಗೆ ಮಾದರಿಯಾಗಬೇಕೆಂದು ಹೇಳಿದರು.
ಮನಷ್ಯ ತನ್ನ ಜೀವಿತ ಅವಧಿಯಲ್ಲಿ ಸಂಪಾದಿಸಿದ್ದನ್ನು ದಾನ ಧರ್ಮದ ಮೂಲಕ ಸಾಮಾಜಿಕ ಕಾರ್ಯಗಳಿಗಾಗಿ ವಿನಿಯೋಗಿಸಬೇಕು. ಎಲ್ಲವು ಸ್ವಂತಕ್ಕಾಗಿ ಎಂದು ಭಾವಿಸದೇ ಅದನ್ನು ಸಮಾಜಮುಖಿಯಾಗಿ ಬಳಸಿದಾಗ ಜೀವನದಲ್ಲಿ ಸಂತೃಪ್ತಿ ಹೊಂದಲು ಸಾಧ್ಯವಾಗುತ್ತದೆಂದು ಹೇಳಿದರು.ಈ ಸಂದರ್ಭದಲ್ಲಿ ಶರಣಪ್ಪಗೌಡ ಕೌಳೂರು, ಡಾ.ಸುಭಾಶ್ಚಂದ್ರ ಕೌಲಗಿ, ಪಂಪಾಪತಿರೆಡ್ಡಿ ಪಾಟೀಲ್, ಡಾ.ವೀರೇಶ ಜಾಕಾ, ಬಸ್ಸುಗೌಡ ಬಿಳ್ಹಾರ, ಮಲ್ಲಿಕಾರ್ಜುನ ಶಾಸ್ತ್ರಿ ಐನಾಪೂರ, ಬಸವರಾಜಶಾಸ್ತ್ರಿ ಎಲೆಕೊಡಗಿ, ನರಸಣ್ಣಗೌಡ ರಾಯಚೂರು, ರಮೇಶ ದೊಡ್ಮನಿ, ಸಿದ್ಧಣ್ಣಗೌಡ ಬಬಲಾದಿ, ಶರಣಪ್ಪಗೌಡ ಬಬಲಾದಿ, ರಾಶೇಖರಸ್ವಾಮಿ, ಹನುಮಂತ ಬಂಕಲಗಿ, ವಿನಯ ರ‍್ಯಾಖಾ, ಗಿರಿಧರರೆಡ್ಡಿ ಉಟ್ಕುರ್, ರಾಜುಗೌಡ ಬೂದಿಹಾಳ, ಧರೆಪ್ಪ ಸೊಲಾಪೂರ, ಓಂಕಾರ ತಿವಾರಿ ಸೇರಿದಂತೆ ಅನೇಕರು ಇದ್ದರು.
--------15ವೈಡಿಆರ್13: ಯಾದಗಿರಿ ಸಮೀಪದ ಅಬ್ಬೆ ತುಮಕೂರಿನ ಶ್ರೀ ವಿಶ್ವಾರಾಧ್ಯ ಮಠದಲ್ಲಿ ಭಕ್ತರು ಹಮ್ಮಿಕೊಂಡಿದ್ದ ತಮ್ಮ ಜನ್ಮ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
;Resize=(128,128))
;Resize=(128,128))