ಸಾರಾಂಶ
ಲಿವರ್ ಫೇಲ್ಯೂರ್ ಆಗಿರುವ ಒಂದೂವರೆ ವರ್ಷದ ಮಗುವಿನ ಶಸ್ತ್ರಚಿಕಿತ್ಸೆಗೆ ದಾನಿಗಳು, ಸಂಘ-ಸಂಸ್ಥೆಗಳು ಆರ್ಥಿಕ ನೆರವು ನೀಡುವ ಮೂಲಕ ಬಡಮಗುವಿನ ಚಿಕಿತ್ಸೆಗೆ ನೆರವಿನ ಹಸ್ತ ಚಾಚಬೇಕು ಎಂದು ಸಂಬಂಧಿಗಳು ಮನವಿ ಮಾಡಿದ್ದಾರೆ.
- ಧನಸಹಾಯಕ್ಕಾಗಿ ದಾನಿಗಳು, ಸಂಘ-ಸಂಸ್ಥೆಗಳಿಗೆ ಪೋಷಕರ ಮನವಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆಲಿವರ್ ಫೇಲ್ಯೂರ್ ಆಗಿರುವ ಒಂದೂವರೆ ವರ್ಷದ ಮಗುವಿನ ಶಸ್ತ್ರಚಿಕಿತ್ಸೆಗೆ ದಾನಿಗಳು, ಸಂಘ-ಸಂಸ್ಥೆಗಳು ಆರ್ಥಿಕ ನೆರವು ನೀಡುವ ಮೂಲಕ ಬಡಮಗುವಿನ ಚಿಕಿತ್ಸೆಗೆ ನೆರವಿನ ಹಸ್ತ ಚಾಚಬೇಕು ಎಂದು ಸಂಬಂಧಿಗಳು ಮನವಿ ಮಾಡಿದರು.
ಹೊನ್ನಾಳಿಯ ಭ್ರಷ್ಟಾಚಾರ ವಿರೋಧಿ ವೇದಿಕೆ- ಕರ್ನಾಟಕದ ರಾಜ್ಯ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ಹನುಮಂತಪ್ಪ ಸೊರಟೂರು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚೀಲೂರು ಗ್ರಾಮದ ಹನುಮಂತಪ್ಪ, ಅಕ್ಷತಾ ಎಂಬವರು ಕೂಲಿ ಮಾಡಿ ಜೀವನ ನಡೆಸುವ ದಂಪತಿ. ಇವರ ಒಂದೂವರೆ ವರ್ಷದ ಮಗು ಕುಶಾಂತ್‌ಗೆ ಲಿವರ್ ಫೇಲ್ಯೂರ್ ಆಗಿ, ತೀವ್ರ ಆರೋಗ್ಯ ತೊಂದರೆ ಅನುಭವಿಸುತ್ತಿದೆ ಎಂದರು.ಯಾರಾದರೂ ಲಿವರ್ ನೀಡಿದರೆ ಮಗುವಿನ ಲಿವರ್ ಜೋಡಣೆಗೆ ₹10 ಲಕ್ಷ ಹೊಂದಿಸಬೇಕು. ಲಿವರ್ ಕೊಡದಿದ್ದರೆ ₹25 ಲಕ್ಷ ಶಸ್ತ್ರಚಿಕಿತ್ಸೆಗೆ ನೀಡಬೇಕಿದೆ. ಬಡ ಕೂಲಿ ಕಾರ್ಮಿಕ ದಂಪತಿಗೆ ಈಗ ಮಗುವಿನದೇ ಚಿಂತೆಯಾಗಿದೆ. ಮಂಗಳೂರಿಗೆ ಎ.ಜೆ. ಆಸ್ಪತ್ರೆಯಿಂದ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸಲಾಗಿದೆ. ಅಲ್ಲಿಂದ ಮಗುವನ್ನು ಕರೆದೊಯ್ಯಲು ಇನ್ನಿಲ್ಲದ ತೊಂದರೆ ಅನುಭವಿಸಿದ್ದಾರೆ ಎಂದು ತಿಳಿಸಿದರು.
ದಾನಿಗಳು, ಸಂಘ-ಸಂಸ್ಥೆಗಳು, ಉದ್ಯಮಿಗಳು, ಆರ್ಥಿಕ ಸಬಲರು ಶೀಘ್ರ ನೆರವಿಗೆ ಬರಬೇಕು. ಈ ಕುರಿತು ಹೆಚ್ಚಿನ ಮಾಹಿತಿ ಹಾಗೂ ಹಣ ಕಳಿಸಲು ಮಗುವಿನ ಪಾಲಕರ ಪೋನ್ ಪೇ ನಂಬರ್; ಸುನೀಲ್ ಎಲ್. ಚೀಲೂರು (ಮೊ-95358-32134), ಹನುಮಂತಪ್ಪ ಸೊರಟೂರು (96204-32219) ಅಥವಾ ತಾಯಿ ಎಂ. ಅಕ್ಷತಾ, ಉಳಿತಾಯ ಖಾತೆ ಸಂಖ್ಯೆ: 058410104710, ಐಎಫ್‌ಎಸ್‌ಸಿ ಕೋಡ್ ಸಿಎನ್‌ಆರ್‌ಬಿ 000584, ಕೆನರಾ ಬ್ಯಾಂಕ್, ಚೀಲೂರು ಶಾಖೆ ಇಲ್ಲಿಗೆ ನೆರವು ಕಳಿಸಲುವಂತೆ ಮನವಿ ಮಾಡಿದರು.ಈ ಸಂದರ್ಭ ಮಗುವಿನ ಸಂಬಂಧಿಗಳಾದ ಸೋಮಶೇಖರ, ಮಂಜು ತಡಸ, ವಿ.ಸೋಮಶೇಖರ, ಸುನೀಲ್ ಇತರರು ಇದ್ದರು.
- - --1ಕೆಡಿವಿಜಿ5: ಕುಶಾಂತ್.
-1ಕೆಡಿವಿಜಿ6: ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಕುಶಾಂತ್ ಫೋಟೋವನ್ನು ಸುದ್ದಿಗೋಷ್ಟಿಯಲ್ಲಿ ಪ್ರದರ್ಶಿಸಲಾಯಿತು.